ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕನ್ನಡ ಬೋರ್ಡ್ ಹಾಕದ ದೊಡ್ಡ ದೊಡ್ಡ ಸಂಸ್ಥೆಗಳ ಮೇಲೆ ಕನ್ನಡ ಪರ ಹೋರಾಟಗಾರರು ದಾಳಿ ನಡೆಸಿದ್ದನ್ನು ಮರೆಯುವಂತಿಲ್ಲ, ಹೀಗಿರುವಾಗ ಈ ಭಾಷಾ ವಿವಾದ ಸಂಸ್ಥೆಯೊಂದರ ಝೂಮ್ ಮೀಟಿಂಗ್ ವೇಳೆಯೂ ಕೆಲವೊಮ್ಮೆ ಭಾಷೆಯ ಬಗ್ಗೆ ಹೇಗೆ ಚರ್ಚೆಗಳು ವಾದ ವಿವಾದಗಳು ನಡೆಯುತ್ತವೆ ಎಂದು ತಿಳಿಸುವ ವೀಡಿಯೋವೊಂದು ಈಗ ಸಖತ್ ವೈರಲ್ ಆಗಿದೆ.
ದಕ್ಷಿಣ ಭಾರತ ಹಾಗೂ ಉತ್ತರ ಭಾರತ, ಹಿಂದಿ ಭಾಷೆ ಹಾಗೂ ಇತರ ಪ್ರಾದೇಶಿಕ ಭಾಷೆಗೆ ಸಂಬಂಧಿಸಿದಂತೆ ಜಟಾಪಟಿಗಳು ನಡೆಯುತ್ತಿರುವುದು ಹೊಸದೇನು ಅಲ್ಲ, ನಮ್ಮ ಮೇಲೆ ಹಿಂದಿ ಭಾಷೆ ಹೇರದಂತೆ ದಕ್ಷಿಣ ಭಾರತದ ಜನ ಸದಾ ಧ್ವನಿ ಎತ್ತುತ್ತಿದ್ದಾರೆ. ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಕನ್ನಡ ಬೋರ್ಡ್ ಹಾಕದ ದೊಡ್ಡ ದೊಡ್ಡ ಸಂಸ್ಥೆಗಳ ಮೇಲೆ ಕನ್ನಡ ಪರ ಹೋರಾಟಗಾರರು ದಾಳಿ ನಡೆಸಿದ್ದನ್ನು ಮರೆಯುವಂತಿಲ್ಲ, ಹೀಗಿರುವಾಗ ಈ ಭಾಷಾ ವಿವಾದಗಳು ಕಾರ್ಪೋರೇಟ್ ಸಂಸ್ಥೆಗಳ ಮೀಟಿಂಗ್ ವೇಳೆಯೂ ನಡೆಯುತ್ತಿರುತ್ತವೆ. ಇದು ಹೇಗೆ ನಡೆಯುತ್ತದೆ ಎಂಬ ವಿಚಾರವನ್ನು ಕೆಲವರು ವೀಡಿಯೋ ರೂಪದಲ್ಲಿ ಮಾಡಿದ್ದು, ಈ ವೀಡಿಯೋ ಈಗ ಸಖತ್ ವೈರಲ್ ಆಗ್ತಿದೆ.
ಟ್ವಿಟ್ಟರ್‌ನಲ್ಲಿ ಘರ್ ಕೇ ಕಲೇಶ್ ಎಂಬುವವರು ಈ ಸ್ಕ್ರಿಪ್ಟೆಡ್ ವೀಡಿಯೋವನ್ನು ಪೋಸ್ಟ್ ಮಾಡಿದ್ದು, 51 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಅನೇಕರು ಇದ್ದು, ಮೊದಲಿಗೆ ಹಿಂದಿ ಭಾಷೆಯಲ್ಲಿ ಮಾತನಾಡಲು ಶುರು ಮಾಡುತ್ತಾರೆ. ಈ ವೇಳೆ ಒಬ್ಬರು ಹಿಂದಿ ಭಾಷೆ ನಮಗೆ ಅರ್ಥವಾಗುವುದಿಲ್ಲ. ದಯವಿಟ್ಟು ಇಂಗ್ಲೀಷ್‌ನಲ್ಲಿ ಮಾತನಾಡಿ ಎಂದು ಹೇಳುತ್ತಾರೆ. ಆದರೂ ಆ ಯುವಕ ಹಿಂದಿ ಇಂಗ್ಲೀಷ್ ಮಿಶ್ರಿತವಾಗಿ ಸಂವಹನ ಮುಂದುವರೆಸಿದ್ದು, ಇದಕ್ಕೆ ಮೀಟಿಂಗ್‌ನಲ್ಲಿ ಭಾಗಿಯಾಗಿದ್ದ ಇತರರು ವಿರೋಧ ವ್ಯಕ್ತಪಡಿಸುತ್ತಾರೆ.
Zoomನಲ್ಲಿ 900 ಜನರ ವಜಾ ಮಾಡಿದವನಿಂದ ಭಾರತದಲ್ಲಿ 1000 ಸಿಬ್ಬಂದಿ ನೇಮಕ!
ಹೊಸವರ್ಷದ ಸಂಭ್ರಮಾಚರಣೆಗಾಗಿ ಕಚೇರಿಯಲ್ಲಿ ಆಯೋಜಿಸಿರುವ ಸ್ಪರ್ಧಾ ಕಾರ್ಯಕ್ರಮದ ಬಗ್ಗೆ ಮೀಟಿಂಗ್‌ನಲ್ಲಿದ್ದ ಸಹೋದ್ಯೋಗಿಯೊಬ್ಬರು ಹಿಂದಿಯಲ್ಲಿ ವಿವರಿಸುತ್ತಿದ್ರೆ ಒಬ್ಬರಾದ ಮೇಲೆ ಒಬ್ಬರಂತೆ ವಿರೋಧ ವ್ಯಕ್ತಪಡಿಸಿದ್ದಾರೆ. ಮೊದಲಿಗೆ ಹುಡುಗನೋರ್ವ ನೀವು ಇಂಗ್ಲೀಷ್‌ನಲ್ಲಿ ಹೇಳಿ ನಮಗೆ ಹಿಂದಿ ಬರುತ್ತಿಲ್ಲ ಎಂದು ಹೇಳಿದ್ದಾರೆ. ನಂತರವೂ ಈ ಹಿಂದಿ ವಿವರಣೆ ಮುಂದುವರೆದಿದೆ. ಈ ವೇಳೆ ಕನ್ನಡದ ಹುಡುಗಿಯೊಬ್ಬಳು ಮತ್ತೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಪ್ಲೀಸ್ ವಿವೇಕ್ ಏನಿದು, ನಾನು ಕನ್ನಡದಲ್ಲಿ ಮಾತನಾಡಿದರೆ ನಿಮಗೆ ಅರ್ಥವಾಗುತ್ತದ. ಯಾಕೆ ಪದೇ ಪದೇ ಹೀಗೆ ಮಾಡುತ್ತಿರಿ ಎಂದು ಎಂದು ಕನ್ನಡದಲ್ಲಿ ಕೇಳುತ್ತಾರೆ. ಇದೇ ವೇಳೆ ತಮಿಳು, ಮಲೆಯಾಳಂ, ಭಾಷಿಕರು ಕೂಡ ತಮ್ಮ ಮಾತೃ ಭಾಷೆಯಲ್ಲಿ ಮಾತನಾಡಲು ಶುರು ಮಾಡಿದ್ದಾರೆ. ಇಷ್ಟು ಸಣ್ಣ ವಿಷಯಕ್ಕೆ ಏಕೆ ಹೀಗೆ ಮಾಡುತ್ತಿದ್ದೀರಿ ಎಂದು ಮೀಟಿಂಗ್‌ನಲ್ಲಿದ್ದ ಇತರ ಮಹಿಳೆಯೊಬ್ಬರು ಹೇಳಿದ್ದು, ಅಷ್ಟರಲ್ಲಿ ವೀಡಿಯೋ ಕಟ್ ಆಗಿದೆ.
Zoom Meetings: ಬೆಸ್ಟ್ ಇಂಪ್ರೆಶನ್ ಬರುವಂತೆ ಮಾಡುವುದು ಹೇಗೆ ?
ದೊಡ್ಡ ದೊಡ್ಡ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಝೂಮ್ ಮೀಟಿಂಗ್ ವೇಳೆ ಭಾಷೆಯ ಬಗ್ಗೆ ವಾಗ್ವಾದ ನಡೆಯುತ್ತದೆ ಎಂದು ತೋರಿಸುವುದಕ್ಕೆ ಮಾತ್ರ ವೀಡಿಯೋ ಮಾಡಲಾಗಿದೆ. ಆದರೆ ಯಾವ ಸಂಸ್ಥೆಯಲ್ಲೂ ನಿಜವಾಗಿ ಮೀಟಿಂಗ್ ವೇಳೆ ಈ ರೀತಿ ನಡೆದಿಲ್ಲ.
ಆದರೆ ವೀಡಿಯೋ ನೋಡಿದವರು ಈ ರೀತಿ ನಿಜವಾಗಿಯೂ ನಡೆದಿದೆ ಎಂದು ಭಾವಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವೀಡಿಯೋದಲ್ಲಿ ಕೆಲವರು ಹಿಂದಿ ಭಾಷೆಯಲ್ಲಿ ಮಾತನಾಡುವವರಿಗೂ ಬೆಂಬಲ ವ್ಯಕ್ತಪಡಿಸುತ್ತಿರುವುದನ್ನು ಕಾಣಬಹುದಾಗಿದೆ.ಇಲ್ಲಿ ಇಂಗ್ಲೀಷ್‌ನಲ್ಲಿ ಮಾತನಾಡಿದರೆ ಯಾರಿಗೂ ಸಮಸ್ಯೆಯಾಗುತ್ತಿಲ್ಲ. ಆದರೆ ಹಿಂದಿಯಲ್ಲಿ ಮಾತನಾಡುತ್ತಿದ್ದಂತೆ ಬೆಂಕಿ ಬಿದ್ದಂತೆ ಆಡುತ್ತಿದ್ದಾರೆ. ಹಿಂದಿ ಅರ್ಥವಾಗುವುದಿಲ್ಲ ಎಂದು ಸಮಾಧಾನವಾಗಿಯೇ ಹೇಳಬಹುದಲ್ಲ ಎಂದು ಒಬ್ಬರು ಹಿಂದಿ ಭಾಷೆ ಮಾತನಾಡಿದವರನ್ನು ಸಮರ್ಥಿಸಿಕೊಂಡು ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬರು ಕೂಡ ಈ ವೀಡಿಯೋ ನೋಡಿ ಪ್ರತಿಕ್ರಿಯಿಸಿದ್ದು, ನನ್ನ 16 ವರ್ಷಗಳ ಐಟಿ ಕ್ಷೇತ್ರದ ಅನುಭವದಲ್ಲಿ ಯಾವತ್ತೂ ಪ್ರಾದೇಶಿಕ ಭಾಷೆಯಲ್ಲಿ ಟೀಮ್ ಮೀಟಿಂಗ್ ವೇಳೆ ಚರ್ಚೆ ಮಾಡಿದ್ದೆ ಇಲ್ಲ, ಎಲ್ಲರಿಗೂ ಎಲ್ಲಾ ಭಾಷೆ ಬರುವುದಿಲ್ಲ ಎಂಬುವುದು ಗೊತ್ತು. ಆದರೆ ಕ್ಲೈಂಟ್ ಯಾವ ಪ್ರದೇಶದಿಂದ ಬಂದಿದ್ದರು ನಾನು ಹಿಂದಿಯಲ್ಲಿ ಮಾತನಾಡುತ್ತೇನೆ ಅವರು ಕೂಡ ಮಾತನಾಡುತ್ತಾರೆ. ಇದು ಸಣ್ಣಪುಟ್ಟ ಸಮಸ್ಯೆಯಷ್ಟೇ ಆದರೆ ಎಲ್ಲರಿಗೂ ಗೊತ್ತಿರುವ ಭಾಷೆಯನ್ನೇ ಮೀಟಿಂಗ್ ವೇಳೆ ಬಳಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಕಾರ್ಪೋರೇಟ್ ಸಂಸ್ಥೆಯಲ್ಲಿ ಕಾರ್ಪೋರೇಟ್ ಭಾಷೆಯಲ್ಲೇ ಮಾತನಾಡಿ, ಕಾರ್ಪೋರೇಟ್ ಭಾಷೆ ಇಂಗ್ಲೀಷ್ ಇಲ್ಲಿ ನಾನು ತಮಿಳು ವ್ಯಕ್ತಿ ಪರವಾಗಿ ಮಾತನಾಡುತ್ತಿದ್ದೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಒಟ್ಟಿನಲ್ಲಿ ಭಾಷೆ ಭಾವನೆಗಳನ್ನು ಅಭಿವ್ಯಕ್ತಪಡಿಸಲು ಇರುವ ಮಾಧ್ಯಮ. ನಾವು ಯಾರ ಜೊತೆ ಮಾತನಾಡುತ್ತೇವೆಯೂ ಅವರಿಗೆ ನಮ್ಮ ಭಾಷೆಯನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದ್ದರೆ ಯಾವುದೇ ಸಮಸ್ಯೆ ಇರುವುದಿಲ್ಲ. ಆದರೆ ಐಟಿ ಬಿಟಿ ಮುಂತಾದ ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಬಹಳ ಹಿಂದಿನಿಂದಲೂ ನಮ್ಮದಲ್ಲದ ಆಂಗ್ಲ ಭಾಷೆಯನ್ನೇ ಸಂವಹನ ಭಾಷೆಯನ್ನಾಗಿ ಗುರುತಿಸಲಾಗಿದೆ. ಸಂದರ್ಶನಗಳಲ್ಲೂ ಕೆಲಸಕ್ಕಿಂತ ಮುಖ್ಯವಾಗಿ ಆಂಗ್ಲ ಭಾಷಾ ಕೌಶಲ್ಯವನ್ನೇ ಕೇಳಲಾಗುತ್ತದೆ. ಆದರೆ ನಮಗೆ ಮಾತನಾಡಲು ಸಂವಹನ ನಡೆಸಲು ಬಹಳ ಆರಾಮ ಎನಿಸುವ ನಮ್ಮ ಮಾತೃಭಾಷೆಯೇ ನಮ್ಮ ನಾಲಗೆ ತುದಿಯಲ್ಲಿ ಬಂದು ಕುಳಿತು ಬಿಡುತ್ತದೆ. ಅದೇ ರೀತಿ ಇಲ್ಲಿ ಯುವಕನೋರ್ವನಿಗೆ ಝೂಮ್ ಮೀಟಿಂಗ್‌ನಲ್ಲಿ ಹಿಂದಿ ಭಾಷೆ ಬಂದಿದ್ದು ಈ ವೀಡಿಯೋ ಈಗ ಹೊಸಚರ್ಚೆಯನ್ನು ಹುಟ್ಟುಹಾಕಿದೆ.
