Asianet Suvarna News Asianet Suvarna News

ಮನವಿ ಕೊಟ್ಟು ಸಚಿವರ ತಲೆಗೆ ಅರಿಶಿಣ ಹುಡಿ ಸುರಿದ ಯುವಕ: ವೀಡಿಯೋ ವೈರಲ್

ಸಚಿವರು, ಗಣ್ಯರು ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಕಾರ್ಯಕ್ರಮಗಳಲ್ಲಿ ಮಸಿ ಬಳಿದ ಘಟನೆಗಳನ್ನು ನೀವು ಇದುವರೆಗೆ ಕೇಳಿದ್ದೀರಿ. ಆದರೆ ಈಗ ಮಹಾರಾಷ್ಟ್ರದಲ್ಲಿ ಯುವಕನೋರ್ವ ಸಚಿವರ ತಲೆಗೆ ಅರಿಷಿಣ ಹುಡಿ ಸುರಿದು ತನ್ನ ಆಕ್ರೋಶ ಹೊರ ಹಾಕಿದ್ದಾನೆ.

A young man poured turmeric on the Maharashtra Revenue minister's head after giving a appeal letter video went viral akb
Author
First Published Sep 8, 2023, 4:37 PM IST

ಮುಂಬೈ: ಸಚಿವರು, ಗಣ್ಯರು ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಕಾರ್ಯಕ್ರಮಗಳಲ್ಲಿ ಮಸಿ ಬಳಿದ ಘಟನೆಗಳನ್ನು ನೀವು ಇದುವರೆಗೆ ಕೇಳಿದ್ದೀರಿ. ಆದರೆ ಈಗ ಮಹಾರಾಷ್ಟ್ರದಲ್ಲಿ ಯುವಕನೋರ್ವ ಸಚಿವರ ತಲೆಗೆ ಅರಿಷಿಣ ಹುಡಿ ಸುರಿದು ತನ್ನ ಆಕ್ರೋಶ ಹೊರ ಹಾಕಿದ್ದಾನೆ. ಮಹಾರಾಷ್ಟ್ರದ ಕಂದಾಯ ಸಚಿವ ರಾಧಾಕೃಷ್ಣ ವಿಖೆ ಪಾಟೀಲ್ ಮೇಲೆ ಈ ಅರಿಶಿಣ ಪ್ರಯೋಗ ನಡೆದಿದೆ. ಅವರನ್ನು ಭೇಟಿ ಮಾಡಲು ಬಂದ ಯುವಕನೋರ್ವ ಅವರ ಕೈಗೆ ಮನವಿ ಪತ್ರವೊಂದನ್ನು ನೀಡಿ ಅವರು ಓದಲು ಶುರು ಮಾಡುತ್ತಿದ್ದಂತೆ ಅವವರ ತಲೆಗೆ ತಾನು ಪೇಪರ್‌ನಲ್ಲಿ ಅಡಗಿಸಿಟ್ಟುಕೊಂಡಿದ್ದ ಅರಿಶಿನ ಹುಡಿಯನ್ನು ಸುರಿದಿದ್ದಾನೆ. ಹೀಗೆ ಸಚಿವರ ತಲೆಗೆ ಅರಶಿಣ ಹುಡಿ ಎರಚಿದ ಯುವಕನನ್ನು ಶೇಖರ್ ಬಂಗಲೆ ಎಂದು ಗುರುತಿಸಲಾಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೀಡಿಯೋದಲ್ಲಿ ಕಾಣಿಸುವಂತೆ ಕುರಿಗಾಯಿ (shepherd) ಸಮುದಾಯದ ಇಬ್ಬರು ವ್ಯಕ್ತಿಗಳು ಸಚಿವರ ಎರಡು ಬದಿಯಲ್ಲಿ ಒಬ್ಬೊಬ್ಬರಂತೆ ನಿಂತಿದ್ದಾರೆ. ಅವರಲ್ಲೊಬ್ಬ ಮನವಿ ಪತ್ರವನ್ನು ಸಚಿವರಿಗೆ ನೀಡಿದ್ದು, ಅದನ್ನು ಸಚಿವರು ಓದುತ್ತಿದ್ದಾಗ ಜೇಬಿನಿಂದ ಅರಿಶಿನ ಪುಡಿ ತೆಗೆದ ಆತ ಅದನ್ನು ಸಚಿವರ ಮೇಲೆ ಸುರಿದಿದ್ದಾನೆ. ಈ ವೇಳೆ ಸಚಿವರ ಸಹಾಯಕರು ಆ ಯುವಕನನ್ನು ಹಿಡಿದು ನೆಲಕ್ಕೆ ದಬ್ಬಿ ಸರಿಯಾಗಿ ಬಾರಿಸಿದ್ದಾರೆ. ಈ ದೃಶ್ಯ ವೀಡಿಯೋದಲ್ಲಿ ಸೆರೆ ಆಗಿದೆ. 

ಕೊಲ್ಲಾಪುರದಲ್ಲಿ ಕರ್ನಾಟಕ ಬಸ್‌ಗೆ ಮಸಿ ಬಳಿದ ಶಿವಸೇನೆ, ಬೆಳಗಾವಿ ಉದ್ವಿಘ್ನ!

ಸೋಲಾಪುರ ಜಿಲ್ಲೆಯಲ್ಲಿರುವ ಸರ್ಕಾರಿ ವಿಶ್ರಾಂತಿ ಗೃಹದಲ್ಲಿಈ ಘಟನೆ ನಡೆದಿದೆ. ಈ ಕೃತ್ಯವೆಸಗಿದ ಶೇಖರ್ ಬಂಗಲೆ (Shekhar Bangale) ಎಂಬಾತ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ತನ್ನ ಸಮುದಾಯ ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಈ ರೀತಿ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ. ತನ್ನ . ಧನಗರ್ ಸಮುದಾಯಕ್ಕೆ ಪರಿಶಿಷ್ಟ ಪಂಗಡದ (ಎಸ್‌ಟಿ) ವರ್ಗದಡಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯನ್ನು ಪುನರುಚ್ಚರಿಸಿದ ಅವರು, ಈ ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸದಿದ್ದರೆ ಮುಖ್ಯಮಂತ್ರಿ ಅಥವಾ ಇತರ ರಾಜ್ಯ ಸಚಿವರ ಮೇಲೆ ಕಪ್ಪು ಬಣ್ಣ ಎರಚುವುದಾಗಿ ಎಚ್ಚರಿಸಿದ್ದಾರೆ.

ಇನ್ನು ಈ ಅರಿಶಿಣ ಸಿಂಪಡಣೆ ಬಗ್ಗೆ ಮಾತನಾಡಿದ ಕಂದಾಯ ಸಚಿವ  ರಾಧಾಕೃಷ್ಣ ವಿಖೆ ಪಾಟೀಲ್ (Minister Radhakrishna Vikhe Patil), ಧಾರ್ಮಿಕ ಆಚರಣೆಗಳಲ್ಲಿ ಅರಿಶಿನ ಪುಡಿಯನ್ನು ಬಳಸುವುದರಿಂದ ಅದನ್ನು ಪವಿತ್ರವೆಂದು ಪರಿಗಣಿಸುವುದರಿಂದ ಅದನ್ನು ತಪ್ಪಾಗಿ ಪರಿಗಣಿಸುವುದಿಲ್ಲ, ಇದು ಸಂತಸದ ವಿಚಾರ ಎಂದರು. ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವಂತೆ ನಾನು ಹೇಳಿಲ್ಲ ಎಂದು ತಿಳಿಸಿದರು. ಆದರೆ ತಮ್ಮ ಪಕ್ಷದ ಕಾರ್ಯಕರ್ತರು ಅವರನ್ನು ಏಕೆ ಥಳಿಸಿದರು ಎಂದು ಕೇಳಿದಾಗ ಏನಾಯಿತು ಎಂದು ಯಾರಿಗೂ ಆ ಕ್ಷಣದಲ್ಲಿ ಅರ್ಥವಾಗಲಿಲ್ಲ, ಆದ್ದರಿಂದ ಇದು ಸಹಜ ಪ್ರತಿಕ್ರಿಯೆಯಾಗಿದೆ ಆ ವ್ಯಕ್ತಿಯ ಹಿಂದೆ ಹೋಗಬೇಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ ಎಂದರು.

ಹೆಡ್‌ಬುಶ್: ಡಾಲಿ ಧನಂಜಯ್‌ ಕಟೌಟ್‌ಗೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ ಭಜರಂಗ ದಳ ಪ್ರತಿಭಟನೆ!

ರಾಜಕೀಯವಾಗಿ ಪ್ರಬಲವಾಗಿರುವ ಮರಾಠ ಸಮುದಾಯಕ್ಕೆ ರಾಜ್ಯ ಸರ್ಕಾರ ಒದಗಿಸಿದ ಮೀಸಲಾತಿಯನ್ನು ಸುಪ್ರೀಂಕೋರ್ಟ್ ಈ ಹಿಂದೆ ರದ್ದುಗೊಳಿಸಿದ್ದು ಇದಾದ ನಂತರ ನಂತರ ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಮರಾಠ ಸಮುದಾಯವೂ ತೀವ್ರವಾದ ಪ್ರತಿಭಟನೆಗಳನ್ನು ಕಂಡಿದೆ.

 

Follow Us:
Download App:
  • android
  • ios