ಬೆಂಗಳೂರು(ಫೆ.26): ಶ್ರೀರಾಮನ ಜನ್ಮಭೂಮಿ ಅಯೋಧ್ಯೆಯಲ್ಲಿ ಯಾವಾಗಿನಿಂದ ಮಂದಿರ ನಿರ್ಮಾಣ ಕಾರ್ಯ ಆರಂಭವಾದಾಗಿನಿಂದ ದೇಶಾದ್ಯಂತ ರಾಮನ ಹೆಸರೇ ಕೇಳಿ ಬರುತ್ತಿದೆ. ಹೀಗಿರುವಾಗ ಬೆಂಗಳೂರಿನ ಕಲಾವಿದರು ವಿಶಿಷ್ಟವಾದ ಕಲಾಕೃತಿ ನಿರ್ಮಿಸಿದ್ದಾರೆ. 

ಒಂದು ಹಾಗೂ ಐದು ರೂಪಾಯಿ ನಾಣ್ಯಗಳಿಂದ ಶ್ರೀರಾಮನ ಭವ್ಯ ಕಲಾಕೃತಿ ನಿರ್ಮಿಸಿದ್ದಾರೆ. ಇದನ್ನು ನಿರ್ಮಿಸಲು ಕಲಾವಿದರು ಅರವತ್ತು ಸಾವಿರ ನಾಣ್ಯಗಳನ್ನು ಬಳಸಿದ್ದಾರೆಂಬುವುದು ಉಲ್ಲೇಖನೀಯ. 

ಲಭ್ಯವಾದ ಮಾಹಿತಿ ಅನ್ವಯ ಬೆಂಗಳೂರಿನ ಸಮಘಟನೆಯೊಂದು ಈ ಭವ್ಯವಾದ ಕಲಾಕೃತಿ ನಿರ್ಮಿಸಿದೆ. ರಾಷ್ಟ್ರಧರ್ಮ ಹೆಸರಿನ ಈ ಸಂಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಲಾಲ್‌ ಭಾಗ್‌ ಪಶ್ಚಿಮ ದ್ವಾರದ ಬಳಿ ಈ ಕಲಾಕೃತಿ ನಿರ್ಮಿಸಿದೆ ಹಾಗೂ ನೋಡುಗರಿಗೆ ವೀಕ್ಷಿಸಲು ಅನುವು ಮಾಡಿಕೊಟ್ಟಿದೆ. 

"

ಈ ಕುರಿತು ಮಾಹಿತಿ ನೀಡಿ ಮಾತನಾಡಿದ ಕಲಾವಿದರೊಬ್ಬರು 'ಶ್ರೀರಾಮನ ಈ ಕಲಾಕೃತಿ ನಿರ್ಮಿಸಲು 2 ಲಕ್ಷ ರೂ. ಮೌಲ್ಯದ 60,000 ನಾಣ್ಯಗಳನ್ನು ಬಳಸಿದ್ದೇವೆ' ಎಂದಿದ್ದಾರೆ.