ವಿಜೋರಾಂ(ಮೇ.18): ಕೊರೋನಾ ವೈರಸ್ ಭಾರತವನ್ನ ತೀವ್ರ ಸಂಕಷ್ಟದಲ್ಲಿ ಸಿಲುಕಿಸಿದೆ. ಈ ಸಂದರ್ಭದಲ್ಲಿ ಹಲವರು ನಿರ್ಗತಿಕರು, ಬಡವರು, ವಲಸೆ ಕಾರ್ಮಿಕರು, ಅನಾಥರು ಸೇರಿದಂತೆ ಹಲವರಿಗೆ ನೆರವಾಗಿದ್ದಾರೆ. ಇದೀಗ ಮಿಜೋರಾಂನಲ್ಲಿ ನಡೆದ ಘಟನೆ ಮಾನವೀಯತೆಗೆ ಹಿಡಿದ ಕನ್ನಡಿಯಂತಿದೆ. ವಿಜೋರಾಂನ 52 ವರ್ಷದ ಮಹಿಳೆಯ 4 ಲಕ್ಷ ರೂಪಾಯಿ ಹಾಗೂ ಮತ್ತೊಂದು ಕುಟುಂಬ 2 ಲಕ್ಷ ರೂಪಾಯಿ ಸಾಲವನ್ನು ಅಪರಿಚಿತ ವ್ಯಕ್ತಿಯೋರ್ವರು ಮರುಪಾವತಿಸಿ ಈ ಕುಟುಂಬಕ್ಕೆ ನೆರವಾಗಿದ್ದಾರೆ.

ಕೊರೋನಾದಿಂದ ದೇಶದಲ್ಲಿ ಹೆಚ್ಚಾಯ್ತು ಬಡತನ..!..

ರೋಡಿಗ್ಲಾನಿ ಅನ್ನೋ 52 ವರ್ಷದ ಮಹಿಳೆ ಗಂಡನನ್ನು ಕಳೆದುಕೊಂಡು ಸುಮಾರು ಹಲವು ವರ್ಷಗಳೇ ಉರುಳಿತ್ತು. ಹೀಗಾಗಿ ಕುಟುಂಬದ ಎಲ್ಲಾ ಜವಾಬ್ದಾರಿ ಮಹಿಳೆ ಮೇಲೆ ಬಿದ್ದಿತ್ತು. ಕೂಲಿ ಕೆಲಸ ಮಾಡಿ ಕುಟುಂಬದ ನಿರ್ವಹಣೆ ಮಾಡುತ್ತಿದ್ದ ಈ ಮಹಿಳೆ ಬ್ರೈನ್ ಟ್ಯೂಮರ್ ಸಮಸ್ಯೆ ಇರುವುದು ಖಚಿತವಾಗಿತ್ತು. ಪುಟ್ಟ ಮಕ್ಕಳು, ತಂಗಿ ಸೇರಿದಂತೆ ಕುಟುಂಬವನ್ನು ನಿರ್ವಹಿಸಲು ತಾನು ಬದುಕಲೇ ಬೇಕು ಎಂದು ಎಸ್‌ಬಿಐ ಬ್ಯಾಂಕ್‌ನಿಂದ 4 ಲಕ್ಷ ರೂಪಾಯಿ ಸಾಲ ಪಡೆದ್ದರು.

ದೇಶದಲ್ಲಿ 13.5 ಕೋಟಿ ಜನರ ಉದ್ಯೋಗಕ್ಕೇ ಕುತ್ತು?.

ಇರುವ ಭೂಮಿಯನ್ನು ಅಡವಿಟ್ಟು 4 ಲಕ್ಷ ಸಾಲ ಪಡೆದು ಕೋಲ್ಕತಾಗೆ ಬಂದು ಚಿಕಿತ್ಸೆ ಪಡೆದಿದ್ದರು. ಬಳಿಕ ಕೂಲಿ ಮಾಡಿ ಕುಟುಂಬದ ಜೊತೆಗೆ ಸಾಲವನ್ನು ಕಟ್ಟು ತಿದ್ದರು. ಆದರೆ ಕೊರೋನಾ ವೈರಸ್ ಹಾಗೂ ಲಾಕ್‌ಡೌನ್‌ನಿಂದ ಕುಟುಂಬ ಒಂದು ಹೊತ್ತಿನ ಊಟ ಮಾಡುವುದೇ ಕಷ್ಟವಾಯಿತು. ಹೀಗಾಗಿ ಲೋನ್ ಕಟ್ಟುವ ಮಾತೆಲ್ಲಿ. ಇತ್ತ ಲೋನ್ ಮರುಪಾವತಿ ಮುಂದೂಡಿದ ಕಾರಣ ಕೊಂಚ ನಿಟ್ಟಿಸಿರು ಬಿಟ್ಟ ಈ ಮಹಿಳೆ ಮುಂದೇನು ಮಾಡುವುದು ಅನ್ನೋ ಚಿಂತೆಯಲ್ಲೇ ಮುಳುಗಿದ್ದರು.

ಹೀಗಿರುವಾಗ ಎಸ್‌ಬಿಐ ಬ್ಯಾಂಕ್‌ನಿಂದ ಕರೆಯೊಂದು ಬಂದಿದೆ. ನೀವು ಬ್ಯಾಂಕ್ ಶಾಖೆಗೆ ಬರಬೇಕು. ನಿಮ್ಮ ಸಾಲವನ್ನು ಪ್ರಚಾರ ಬಯಸದ ವ್ಯಕ್ತಿಯೋರ್ವರು ಮರುಪಾವತಿಸಿದ್ದಾರೆ ಎಂದಿದ್ದಾರೆ. ಬಳಿಕ ಶಾಖೆಗೆ ತೆರಳಿದಾಗ ಆ ವ್ಯಕ್ತಿ ಸಂಕಷ್ಟದಲ್ಲಿರುವ ಹಾಗೂ ನಿಜವಾಗಿ ಅವಶ್ಯಕತೆ ಇರುವ ಸಾಲವನ್ನು ನಾನು ಮರುಪಾವತಿಸುತ್ತೇನೆ. ನಾನು ಒಟ್ಟು 10 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದಾರೆ. ಬ್ಯಾಂಕ್ ಅಧಿಕಾರಿಗಳು ರೋಡಿಗ್ಲಾನಿ ಮಹಿಳೆಯ 4 ಲಕ್ಷ ರೂಪಾಯಿ ಹಾಗೂ ಮತ್ತೊರ್ವ ಮೌನಾ ಫನಾನಿ ಅನ್ನೋ ವ್ಯಕ್ತಿಯನ್ನು ಆಯ್ಕೆ ಮಾಡಿದ್ದಾರೆ. 

ಮೌನ ಅನ್ನೋ ವ್ಯಕ್ತಿ ಕೋಳಿ ಫಾರ್ಮ್‌ಗಾಗಿ 2.5 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಸಾಲ ಪಡೆಯಲ ಇಬ್ಬರೂ ಭೂಮಿ ದಾಖಲೆ ಪತ್ರ ಅಡವಿಟ್ಟಿದ್ದರು. ಶಾಖೆಗೆ ತೆರಳಿದಾಗ ಸಾಲ ಮರುಪಾವತಿಸಿ ಆಗಿತ್ತು.  ಹೀಗಾಗಿ ಭೂಮಿ ದಾಖಲೆ ಪತ್ರಗಳನ್ನು ಬ್ಯಾಂಕ್ ಇವರಿಗೆ ನೀಡಿದೆ. ಇದೀಗ ಈ ಕುಟುಂಬ ನೆಮ್ಮದಿಯ ನಿಟ್ಟಿಸಿರು ಬಿಟ್ಟಿದೆ.  ಅಪರಿಚಿತ ವ್ಯಕ್ತಿ  9,96,365 ರೂಪಾಯಿ ಬ್ಯಾಂಕ್‌ಗೆ ವರ್ಗಾಯಿಸಿದ್ದಾರೆ. ಉಳಿದ ಹಣದಲ್ಲಿ ಅವಶ್ಯಕತೆ ಇರುವವರ ಸಾಲ ತೀರಿಸಲು ಹೇಳಿದ್ದಾರೆ.ಆದರೆ ಅಪರಿಚಿತ ವ್ಯಕ್ತಿ ಈ ರೀತಿ ಸಹಾಯ ಮಾಡುತ್ತಾರೆ ಎಂದು ಆ ಕುಟುಂಬ ಮಾತ್ರವಲ್ಲ ಯಾರೂ ಕೂಡ ಊಹಿಸಲು ಸಾಧ್ಯವಿಲ್ಲ. ಕಾರಣ ಈಗ ಸಣ್ಣ ಆಹಾರ ಪೊಟ್ಟಣ ವಿತರಣೆ ವೇಳೆ ಫೋಟೋ, ವಿಡಿಯೋ, ಫೇಸ್‌ಬುಕ್ ಲೈವ್, ಸೆಲ್ಫಿ ತೆಗೆಯುವುದನ್ನು ನೋಡಿದ್ದೇವೆ. ಇನ್ನು ರಾಜಕಾರಣಿಗಳು ಸಮಾರಂಭ ಮಾಡುವುದು ಮಾತ್ರವಲ್ಲ, ಪ್ರತಿ ಆಹಾರ ಪೊಟ್ಟಣದಲ್ಲಿ ತಮ್ಮ ಹೆಸರು, ಪಕ್ಷದ ಚಿಹ್ನೆ ಹಾಕಿ ವಿತರಿಸಿದ ಊದಾಹರಣೆಗಳು ನಮ್ಮ ಕಣ್ಣ ಮುಂದಿದೆ.

ಈ ನೆರವಿನ ಕುರಿತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಜು ಸೇರಿದಂತೆ ಹಲವು ಟ್ವಿಟರ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.