ಎಟಿಎಂನಿಂದ ಹಣ ತೆಗೆಯುತ್ತಿದ್ದ ವೃದ್ಧರೊಬ್ಬರಿಗೆ ಹಂದಿಯೊಂದು ಭಯಾನಕ ಅನುಭವ ನೀಡಿದೆ. ಕೇರಳದ ಎರುಮೇಲಿಯಲ್ಲಿ ನಡೆದ ಈ ಘಟನೆಯಲ್ಲಿ, ಹಂದಿ ಎಟಿಎಂ ಒಳಗೆ ನುಗ್ಗಿ ಗಾಜಿನ ಬಾಗಿಲು ಪುಡಿಪುಡಿ ಮಾಡಿದೆ. ವೃದ್ಧರು ಪ್ರಾಣಾಪಾಯದಿಂದ ಪಾರಾಗಿದ್ದರೂ, ದುರ್ಬಲ ಗಾಜಿನ ಬಾಗಿಲಿನ ಬಗ್ಗೆ ಚರ್ಚೆ ಹುಟ್ಟಿಕೊಂಡಿದೆ.
ಜೀವನ ಅಂದರೆ ಹಾಗೆನೇ. ಯಾವಾಗ, ಯಾವ ಕ್ಷಣದಲ್ಲಿ ಏನಾಗುತ್ತದೆಯೋ ಹೇಳಲು ಬರುವುದಿಲ್ಲ. ಎಲ್ಲಾ ಚೆನ್ನಾಗಿಯೇ ಇರುವ ವ್ಯಕ್ತಿ ದಿಢೀರನೆ ಸಾಯಬಹುದು, ಈಗಲೋ, ಆಗಲೋ ಸಾಯುತ್ತಾನೆ ಎನ್ನುವ ವ್ಯಕ್ತಿ ದೀರ್ಘ ಕಾಲ ಬದುಕಬಹುದು. ಮನೆಗೆ ವಾಪಸಾಗುತ್ತೇನೆ ಎಂದು ಹೊರಟ ವ್ಯಕ್ತಿಯ ಹಿಂದೆಯೇ ಸಾವು ಅಟ್ಟಿಸಿ ಬರಬಹುದು. ಯಾರೂ ಊಹಿಸದ ರೀತಿಯಲ್ಲಿಯೇ ಸಾವು ಬರಬಹುದು. ಅದೇ ಮತ್ತೊಂದೆಡೆ, ಆಯಸ್ಸು ಗಟ್ಟಿಯಾಗಿದ್ದರೆ ಭಯಾನಕ ಘಟನೆ ನಡೆದರೂ ಏನೂ ಆಗದೇ ಬಚಾವಾಗಬಹುದು. ಎಷ್ಟೋ ಸಮಯದಲ್ಲಿ ಸಾವಿನ ದವಡೆಯಿಂದ ನಾವು ಪಾರಾಗಿರುತ್ತೇವೆ ಎನ್ನುವ ವಿಷ್ಯವೇ ನಮಗೆ ಗೊತ್ತಿರದ ರೀತಿಯಲ್ಲಿ ಬಚಾವಾಗಿರುತ್ತೇವೆ. ಹೀಗೆ ವಿಚಿತ್ರ ಘಟನೆಗಳು ಸಂಭವಿಸುತ್ತಲೇ ಇರುತ್ತವೆ.
ಅದರಲ್ಲಿಯೂ ಸಾವಿನ ವಿಷಯದಲ್ಲಂತೂ ಹೀಗೆಯೇ ಎಂದು ಹೇಳುವುದು ಕಷ್ಟ. ಅಂಥದ್ದೇ ಒಂದು ಭಯಾನಕ ವಿಡಿಯೋ ಇದೀಗ ವೈರಲ್ ಆಗಿದೆ. ಇದರಲ್ಲಿ ವೃದ್ಧನೊಬ್ಬ ಎಟಿಎಂನಿಂದ ಹಣ ಡ್ರಾ ಮಾಡುತ್ತಿದ್ದಾನೆ. ಅಲ್ಲಿರುವ ಸಿಸಿಟಿವಿಯಲ್ಲಿ ಇದು ದಾಖಲಾಗುತ್ತಿದೆ. ಆ ವ್ಯಕ್ತಿ ಹಣವನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಅದೆಲ್ಲಿಂದಲೂ ಬೃಹತ್ ಗಾತ್ರದ ಹಂದಿಯೊಂದು ಎಟಿಎಂಗೆ ನುಗ್ಗಿದೆ. ಆ ನುಗ್ಗಿದ ರಭಸಕ್ಕೆ ಎಟಿಎಂ ಬಾಗಿಲಿಗೆ ಹಾಕಲಾಗಿದ್ದ ಗಾಜು ಪುಡಿಪುಡಿಯಾಗಿದೆ. ಅರೆಕ್ಷಣ ಏನಾಯಿತು ಎನ್ನುವುದು ತಿಳಿಯದೇ ವೃದ್ಧ ಅಕ್ಷರಶಃ ಬೆವರಿ ಹೋಗಿದ್ದಾರೆ.
ಸೀರಿಯಲ್ ಬಿಟ್ಟ ಪುಟ್ಟಕ್ಕನ ಮಗಳು ಸ್ನೇಹಾ ಪಾತ್ರಧಾರಿ ಸಂಜನಾ ತಲೆಗೆ ಏನಾಯ್ತು? ವಿಡಿಯೋ ಫ್ಯಾನ್ಸ್ ಶಾಕ್
ಏನಾಯಿತು ಎಂದು ಅರಿಯುವಷ್ಟರಲ್ಲಿಯೇ ಯಾವುದೋ ಪ್ರಾಣಿ ನುಗ್ಗಿರುವುದು ತಿಳಿದು, ಎದ್ದೆನೋ, ಬಿದ್ದೆನೋ ಎಂದು ವೃದ್ಧ ಅಲ್ಲಿಂದ ಓಡಿ ಹೋಗಿದ್ದಾನೆ. ಅದೃಷ್ಟವಶಾತ್ ಆತನ ಪ್ರಾಣಕ್ಕೆ ಯಾವುದೇ ಅಪಾಯವಾಗಲಿಲ್ಲ. ಆದರೆ ಆ ಗಾಜು ಆತನ ತಲೆಗೆ ಹೊಕ್ಕುವ ಸಾಧ್ಯತೆ ಇತ್ತು, ಇಲ್ಲವೇ ಹಂದಿ ಆತನ ಮೇಲೆ ದಾಳಿ ಮಾಡುವ ಅಪಾಯವಿತ್ತು. ಅದೂ ಅಲ್ಲದೇ ಒಂದು ಕ್ಷಣದಲ್ಲಿ ದರೋಡೆಕೋರರು ನುಗ್ಗಿದರೋ, ಭೂಕಂಪ ಆಯಿತೋ ಏನೋ ಎಂದು ತಿಳಿಯದೇ ವೀಕ್ ಹೃದಯವರು ಆಗಿದ್ದರೆ ಹಾರ್ಟ್ ಎಟ್ಯಾಕ್ ಆಗುವ ಸಾಧ್ಯತೆಯೂ ಇತ್ತು.
ಆದರೆ ವೃದ್ಧನ ಆಯಸ್ಸು ಗಟ್ಟಿಯಾಗಿದೆ. ಜೀವ ಉಳಿದಿದೆ. ಆ ಹಂದಿ ಕೆಲ ಕಾಲ ಸಿಸಿಟಿವಿಗೆ ಕಾಣಿಸಲಿಲ್ಲ. ಎಲ್ಲಿ ಮಾಯವಾಯಿತೋ ಎನ್ನುವಷ್ಟರಲ್ಲಿ, ಹೊರಗೆ ಓಡಿ ಹೋಗಿದೆ. ಯಾರು ಅಟ್ಟಿಸಿಕೊಂಡು ಬಂದಿದ್ದರೋ, ಅಥವಾ ಇನ್ನೇನು ಆಗಿತ್ತೋ ಗೊತ್ತಿಲ್ಲ. ಒಟ್ಟಿನಲ್ಲಿ ಅದು ಕೂಡ ಜೀವ ಭಯದಿಂದ ಓಡಿ ಬಂದಿತ್ತು ಎನ್ನುವುದನ್ನು ವಿಡಿಯೋದಿಂದ ನೋಡಬಹುದಾಗಿದೆ. ಆದರೆ ಎಟಿಎಂಗೆ ಇಷ್ಟು ಚೀಪ್ ಗ್ಲಾಸ್ ಬಾಗಿಲು ಹಾಕಿರುತ್ತಾರೆಯೇ ಎನ್ನುವುದು ಮಾತ್ರ ವಿಡಿಯೋದ ಕಮೆಂಟಿನಲ್ಲಿ ಚರ್ಚೆಯಾಗುತ್ತಿದೆ. ಈ ಘಟನೆ ಕೇರಳದ ಎರುಮೇಲಿಯಲ್ಲಿ ನಡೆದಿದೆ ಎಂದು ಶೀರ್ಷಿಕೆಯಲ್ಲಿ ತಿಳಿಸಲಾಗಿದೆ.
