Asianet Suvarna News Asianet Suvarna News

ಪಾಕ್ ಆಕ್ರಮಿತ ಕಾಶ್ಮೀರದ ಶಾರದಾ ಪೀಠದಿಂದ ಅಯೋಧ್ಯೆಗೆ ಬಂತು ಪವಿತ್ರ ಜಲ!

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠದಿಂದ ಪವಿತ್ರ ಜಲ ಸಂಗ್ರಹಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಅದನ್ನು ಅಯೋಧ್ಯೆಗೆ ಕಳಿಸಿದ್ದಾರೆ. ಈ ಜಲವನ್ನು ಪಿಒಕೆಯಿಂದ ಬ್ರಿಟನ್‌ಗೆ ಕಳಿಸಿ ಅಲ್ಲಿಂದ ಅಯೋಧ್ಯೆಗೆ ರವಾನಿಸಲಾಗಿದೆ

A Muslim man sent holy water to Ayodhya from Sharda Peeth of Pakistan occupied Kashmir akb
Author
First Published Jan 21, 2024, 8:03 AM IST

ಶ್ರೀನಗರ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದಾ ಪೀಠದಿಂದ ಪವಿತ್ರ ಜಲ ಸಂಗ್ರಹಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಅದನ್ನು ಅಯೋಧ್ಯೆಗೆ ಕಳಿಸಿದ್ದಾರೆ. ಈ ಜಲವನ್ನು ಪಿಒಕೆಯಿಂದ ಬ್ರಿಟನ್‌ಗೆ ಕಳಿಸಿ ಅಲ್ಲಿಂದ ಅಯೋಧ್ಯೆಗೆ ರವಾನಿಸಲಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಪೋಸ್ಟಲ್‌ ಸೇವೆಯನ್ನು ನಿರ್ಬಂಧಿಸಿರುವ ಕಾರಣ ಬ್ರಿಟನ್‌ಗೆ ಕಳುಹಿಸಿ, ಅಲ್ಲಿಂದ ಭಾರತಕ್ಕೆ ರವಾನಿಸಲಾಗಿದೆ.

 

ಕೇಂದ್ರದ ನೋಟೀಸ್ ಬೆನ್ನಲ್ಲೇ ಅಮೇಜಾನ್‌ನಿಂದ ಅಯೋಧ್ಯೆ ಪ್ರಸಾದ ಔಟ್‌

ನವದೆಹಲಿ: ‘ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಸಾದ’ ಎಂಬ ಹೆಸರಿನಲ್ಲಿ ಆನ್‌ಲೈನ್‌ ವ್ಯಾಪಾರ ಸಂಸ್ಥೆ ಅಮೆಜಾನ್‌ನಲ್ಲಿ ಲಾಡು ಸೇರಿದಂತೆ ಹಲವು ಸಿಹಿ ತಿಂಡಿಗಳನ್ನು ಮಾರಾಟ ಮಾಡುತ್ತಿರುವುದನ್ನು ಪ್ರಶ್ನಿಸಿ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (ಸಿಸಿಪಿಎ) ಅಮೆಜಾನ್‌ಗೆ ನೋಟಿಸ್‌ ಜಾರಿ ಮಾಡಿದೆ. ಇದರ ಬೆನ್ನಲ್ಲೇ ತಾನು ಮಾರಾಟ ಮಾಡುತ್ತಿದ್ದ ಮಂದಿರ ಪ್ರಸಾದ ಖಾದ್ಯಗಳನ್ನು ಅಮೆಜಾನ್ ತೆಗೆದು ಹಾಕಿದೆ.

ಘೀ ಬೂಂದಿ ಲಾಡು, ಖೋಯಾ ಖೋಬಿ ಲಾಡು, ರಘುಪತಿ ಘೀ ಲಾಡು ಮತ್ತು ದೇಸಿ ಹಸುವಿನ ಹಾಲಿನ ಪೇಡ ಎಂಬ ಹಲವು ಸಿಹಿ ಖಾದ್ಯಗಳನ್ನು ‘ರಾಮ ಮಂದಿರ ಪ್ರಸಾದ’ ಎಂದು ನಮೂದಿಸಿ, ಅವುಗಳಿಗೆ ಬೆಲೆ ನಿಗದಿ ಮಾಡಿ ಅಮೆಜಾನ್‌ನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಈ ಬಗ್ಗೆ ಏಳು ದಿನಗಳಲ್ಲಿ ಪ್ರತಿಕ್ರಿಯಿಸುವಂತೆ ಸಿಸಿಪಿಎ ಸೂಚಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆಜಾನ್‌ ಅಮೆಜಾನ್‌ ಯಾವುದೇ ವಸ್ತುವಿನ ಮಾರಾಟಗಾರ ಅಲ್ಲ. ಅದು ಮಾರಾಟಗಾರ ಮತ್ತು ಗ್ರಾಹಕನ ಮಧ್ಯೆ ಇರುವ ಮೂರನೇ ವ್ಯಕ್ತಿ. ಕೆಲ ಮಾರಾಟಗಾರರಿಂದ ಗ್ರಾಹಕರನ್ನು ತಪ್ಪುದಾರಿಗೆಳೆಯುವ ತಂತ್ರ ನಡೆದಿದೆ. ಈ ಬಗ್ಗೆ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದೆ.

ರಾಮಮಂದಿರ ಧ್ವಂಸ ಬಳಿಕ ಕಠೋರ ಪ್ರತಿಜ್ಞೆ ಮಾಡಿದ್ದ ಕುಟುಂಬ, 500 ವರ್ಷದ ಬಳಿಕ ಅಂತ್ಯ!

ರಾಮಮಂದಿರ ಉದ್ಘಾಟನೆಗೆ ರಾಮನ ವಂಶಜೆ ಕೊರಿಯಾ ರಾಣಿಗೂ ಆಹ್ವಾನ

ನವದೆಹಲಿ: ಜ.22ರಂದು ನಡೆಯಲಿರುವ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆಗೆ 55 ರಾಷ್ಟ್ರಗಳಿಂದ 100 ವಿದೇಶಿ ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್‌ ಜಂಟಿ ಕಾರ್ಯದರ್ಶಿ ಸ್ವಾಮಿ ವಿಜ್ಞಾನಾನಂದ ತಿಳಿಸಿದ್ದಾರೆ. ಶನಿವಾರ ಮಾಹಿತಿ ನೀಡಿದ ಅವರು, ಶ್ರೀರಾಮನ ವಂಶಜೆ ಎಂದು ಹೇಳಿಕೊಳ್ಳುವ ಕೊರಿಯಾ ರಾಣಿಯೂ ಸೇರಿದಂತೆ 6 ಭೂಖಂಡಗಳಲ್ಲಿರುವ 55 ದೇಶಗಳಿಂದ 100 ಗಣ್ಯರನ್ನು ಆಹ್ವಾನಿಸಲಾಗಿದೆ. ಇದರಲ್ಲಿ ಜನಪ್ರತಿನಿಧಿಗಳು ಮತ್ತು ರಾಯಭಾರಿಗಳೂ ಸೇರಿದ್ದಾರೆ. ಭಾರತದ ವಾಯುಮಾರ್ಗದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ಎಲ್ಲರಿಗೂ ಮುಂಜಾಗ್ರತಾ ಕ್ರಮವಾಗಿ 1 ದಿನ ಮೊದಲೇ ಭಾರತಕ್ಕೆ ಬರಲು ಕೋರಲಾಗಿದೆ ಎಂದು ತಿಳಿಸಿದರು.

ಇಂದು ರಾತ್ರಿ 8 ಗಂಟೆಯಿಂದ ಜ.23ರ ವರೆಗೆ ಆಯೋಧ್ಯೆ ಗಡಿ ಬಂದ್, ಅನುಮತಿ ಇಲ್ಲದೆ ಪ್ರವೇಶವಿಲ್ಲ!

Follow Us:
Download App:
  • android
  • ios