ರಾಯ್ಪುರ, (ಜುಲೈ.05): ಮಗ ಸತ್ತ ಬಳಿಕ ಒಬ್ಬಂಟಿಯಾಗಿದ್ದ 22 ವರ್ಷದ ವಿಧವೆ ಸೊಸೆಯನ್ನು ಆಕೆಯ ಮಾವನೇ ಮದುವೆಯಾದ ಘಟನೆ ಛತ್ತೀಸ್ ಗಡದ ಬಿಲಾಸ್ ಪುರದಲ್ಲಿ ನಡೆದಿದೆ.

ಬಿಲಾಸ್ ಪುರ ನಿವಾಸಿಯಾಗಿರುವ ಕೃಷ್ಣ ರಜಪೂತ್ ಸಿಂಗ್ ಎಂಬಾತ ತನ್ನ ಮಗನ ಹೆಂಡತಿ 22 ವರ್ಷದ ಸೊಸೆ ಆರತಿ ಸಿಂಗ್ ಎಂಬಾಕೆಯೊಂದಿಗೆ ವಿವಾಹವಾಗಿದ್ದಾನೆ.

ಅರೇಂಜ್ಡ್ ಮ್ಯಾರೇಜ್‌ನ ಸಾಮಾನ್ಯ ಸಮಸ್ಯೆಗಳಿವು..

ಕೃಷ್ಣ ರಜಪೂತ್ ಸಿಂಗ್ ನ ಮಗ ಎರಡು ವರ್ಷದ ಹಿಂದೆ ಮರಣ ಹೊಂದಿದ್ದ. ನಂತರ ಆತನ ಸೊಸೆ ಒಂಟಿ ಜೀವನ ನಡೆಸುತ್ತಿದ್ದಳು. ಹೀಗಾಗಿ ವಿಧವೆ ಸೊಸೆಗೆ ಬಾಳು ನೀಡಲು ನಿರ್ಧರಿಸಿ, ಮದುವೆಯಾಗಿದ್ದಾನೆ.

ಕಳೆದೆರಡು ವರ್ಷಗಳಿಂದ ಮಾವ ಸೊಸೆಯನ್ನು ಮುತುವರ್ಜಿಯಿಂದ ನೋಡಿಕೊಂಡಿದ್ದಾನೆ. ಹೀಗಾಗಿ ಸೊಸೆಯೂ ಈ ಮದುವೆಗೆ ಒಪ್ಪಿಗೆ ನೀಡಿದ್ದಾಳೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಒಟ್ಟಾಗಿ ಸೇರಿ ಮದುವೆ ಮಾಡಿದ್ದಾರೆ.

ರಜಪೂತ್ ಕ್ಷತ್ರೀಯ ಮಹಾಸಭಾ ಸಮಿತಿಯ ಅಧ್ಯಕ್ಷ ಹರಿ ಸಿಂಗ್ ದೌಡ್ ನೇತೃತ್ವದಲ್ಲಿ ಮದುವೆ ನಡೆದಿದ್ದು, ಕೊರೋನಾ ಭೀತಿಯಿಂದ ವಿಶಿಷ್ಟ ಸರಳ ವಿವಾಹ ಕಾರ್ಯಕ್ರಮ ಮಾಡಿ ಮುಗಿಸಲಾಗಿದೆ.