ದೇವಸ್ಥಾನಗಳ ಮುಂದೆ ಬಾಬಾಗಳು, ಸನ್ಯಾಸಿಗಳು ಕುಳಿತು ಜನರಿಗೆ ಆಶೀರ್ವಾದ ನೀಡುವುದನ್ನು ನೋಡಿರುತ್ತೀರಿ. ಆದರೆ, ದೇವಸ್ಥಾನದ ಮುಂದೆ ಕುಳಿತ ಶ್ವಾನವೊಂದು ಭಕ್ತರಿಗೆ ಆಶೀರ್ವಾದ ನೀಡುತ್ತಿದೆ ಅಂದರೆ ನಂಬುತ್ತೀರಾ?

ಹೌದು, ಮಹಾರಾಷ್ಟ್ರದ ಸಿದ್ಧತೇಕ್‌ ಪ್ರಾಂತ್ಯದ ಸಿದ್ಧಿವಿನಾಯಕ ದೇವಾಲಯಲ್ಲಿ ಇಂಥದ್ದೊಂದು ದೃಶ್ಯವೀಗ ಎಲ್ಲರ ಗಮನ ಸೆಳೆಯುತ್ತಿದೆ. ದೇವಾಲಯದ ಹೊರಗಿನ ಮೆಟ್ಟಿಲ ಮೇಲೆ ಕುಳಿತ ಶ್ವಾನ, ಬಂದು ಹೋಗುವ ಭಕ್ತರಿಗೆಲ್ಲಾ ಆಶೀರ್ವಾದ ನೀಡುತ್ತಿದೆ.

45500 ವರ್ಷ ಹಳೆಯ, ಅತಿಪುರಾತನ ಗುಹಾ ಚಿತ್ರ ಇಂಡೋನೇಷ್ಯಾದಲ್ಲಿ ಪತ್ತೆ

ಗಣಪತಿ ದೇವಸ್ಥಾನದಲ್ಲಿ ನಾಯಿ ಆಶೀರ್ವದಿಸುವ ವಿಡಿಯೋವೊಂದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ವಿಡಿಯೋವನ್ನು ಅರುಣ್ ಲಿಮಾಡಿಯಾ ಎಂಬವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ದೇವಾಲಯದ ಮುಖ್ಯ ದ್ವಾರದ ಹೊರಗಡೆ ಕಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳುವ ಸ್ನೇಹಪರ, ಶಾಂತ ನಾಯಿ ಎಲ್ಲರ ಕೈ ಕುಲುಕುತ್ತದೆ. ನಾಯಿ ಭಕ್ತರೊಂದಿಗೆ ಹ್ಯಾಂಡ್‌ಶೇಕ್ ಮಾಡಿ ಮಾಡುವುದು ಮತ್ತು ಅವರನ್ನು ಆಶೀರ್ವದಿಸುವುದನ್ನು ಕಾಣಬಹುದು.