ನವದೆಹಲಿ(ಜೂ.03): ಖ್ಯಾತ ಸಂಗೀತ ಸಂಯೋಜಕ ಹಾಗೂ ಗಾಯಕ ವಾಜಿದ್‌ ಖಾನ್‌ ಅವರು ಕೊರೋನಾ ಸೋಂಕು ತಗುಲಿ ಮೃತಪಟ್ಟಬೆನ್ನಲ್ಲೇ, ಅವರ ತಾಯಿ ರಜಿನಾ ಖಾನ್‌ ಅವರಿಗೂ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

‘ರಜಿನಾ ಖಾನ್‌ ಅವರಿಗೂ ಕೊರೋನಾ ಸೋಂಕಿರುವುದು ಪತ್ತೆಯಾಗಿದೆ. ಪುತ್ರ ವಾಜಿದ್‌ ಕೊನೆಯುಸಿರೆಳೆದ ಮುಂಬೈನ ಆಸ್ಪತ್ರೆಯಲ್ಲೇ ರಜಿನಾ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಇನ್ನೂ ಕೆಲ ದಿನ ಆಸ್ಪತ್ರೆಯಲ್ಲಿಯೇ ಇದ್ದು, ಅನಂತರ ಹೋಂ ಕ್ವಾರಂಟೈನ್‌ಗೆ ಒಳಪಡಲಿದ್ದಾರೆ’ ಎಂದು ಅವರು ತಿಳಿಸಿದ್ದಾರೆ.

ದಬಾಂಗ್‌ ಸೇರಿದಂತೆ ಹಲವು ಜನಪ್ರಿಯ ಹಿಂದಿ ಚಲನಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದ ವಾಜಿದ್‌ ಖಾನ್‌ ಕೊರೋನಾ ಸೋಂಕು ತಗುಲಿ ಭಾನುವಾರವಷ್ಟೇ ಮೃತಪಟ್ಟಿದ್ದರು.