Asianet Suvarna News Asianet Suvarna News

Hapur Fire : ಉತ್ತರ ಪ್ರದೇಶದಲ್ಲಿ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ, 8 ಸಾವು!

ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದಾರೆ.
 

A blast happened in a boiler in a chemical factory in Hapur district in Uttar Pradesh  casualties feared san
Author
Bengaluru, First Published Jun 4, 2022, 5:30 PM IST | Last Updated Jun 4, 2022, 6:15 PM IST

ನವದೆಹಲಿ (ಜೂ. 4): ಉತ್ತರ ಪ್ರದೇಶದ (Uttar Pradesh) ಹಾಪುರ (Hapur) ಜಲ್ಲೆಯಲ್ಲಿರುವ ಕೆಮಿಕಲ್‌ ಫ್ಯಾಕ್ಟರಿಯಲ್ಲಿ (chemical factory) ಸ್ಫೋಟ (explosion) ಸಂಭವಿಸಿದ್ದು, 8  ಜನ ಮೃತಪಟ್ಟಿದ್ದಾರೆಂದು ಹಾಪುರ್ ಐಜಿ  ಪ್ರವೀಣ್ ಕುಮಾರ್ (Hapur IG Praveen Kumar) ಹೇಳಿದ್ದಾರೆ. ಜತೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವವರು ಒಳಗೆ ಸಿಲುಕಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (uttar pradesh chief minister Yogi adityanath) ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಯೋಗಿ ಆದಿತ್ಯನಾಥ್‌ ಅವರ ಕಚೇರಿಯಿಂದ ಟ್ವೀಟ್‌ ಮಾಡಲಾಗಿದೆ. 

"ಮುಖ್ಯಮಂತ್ರಿಗಳು ಜಿಲ್ಲಾಡಳಿತಕ್ಕೆ ಆದೇಶ ನೀಡಿದ್ದು ತಕ್ಷಣ ಸ್ಥಳಕ್ಕೆ ಭೇಟಿ ಕೊಡುವಂತೆ ತಿಳಿಸಲಾಗಿದೆ. ಸಂತ್ರಸ್ತರಿಗೆ ಬೇಕಾದ ಎಲ್ಲ ರೀತಿಯ ನೆರವನ್ನು ತಕ್ಷಣ ನೀಡಬೇಕಾಗಿ ಸೂಚಿಸಲಾಗಿದೆ," ಎಂದು ಹಿಂದಿಯಲ್ಲಿ ಟ್ವೀಟ್‌ ಮಾಡಲಾಗಿದೆ.


ಉತ್ತರ ಪ್ರದೇಶ ಮಂತ್ರಿ ನಂದ್‌ ಗೋಪಾಲ್‌ ಗುಪ್ತಾ ನಂದಿ ಪ್ರತಿಕ್ರಿಯೆ ನೀಡಿದ್ದು, ಆರು ಜನ ಘಟನೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದರು. ಆದರೆ, ಸಮಯ ಕಳೆದಂತೆ ಸಾವಿನ ಸಂಖ್ಯೆಯಲ್ಲಿ ಏರಿಕೆ ಆಗುತ್ತಿದೆ.  "ದೇವರು ಮೃತಪಟ್ಟ ಜೀವಗಳಿಗೆ ಶಾಂತಿ ದೊರಕಿಸಿಕೊಡಲಿ ಎಂದು ಪ್ರಾರ್ಥಿಸುತ್ತೇನೆ. ತಮ್ಮವರನ್ನು ಕಳೆದುಕೊಂಡಿರುವ ಕುಟುಂಬಸ್ಥರಿಗೆ ಸಾವಿನ ಭಾರವನ್ನು ಬರಿಸುವ ಶಕ್ತಿ ಸಿಗಲಿ. ಗಾಯಗೊಂಡವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ," ಎಂದು ಸಚಿವ ನಂದಿ ಟ್ವೀಟ್‌ ಮಾಡಿದ್ದಾರೆ.

15 ರಿಂದ 20 ಮಂದಿ ಗಾಯಗೊಂಡಿದ್ದಾರೆ. 8 ಜನ ಸ್ಪೋಟದಲ್ಲಿ ಸಾವಿಗೀಡಾಗಿದ್ದಾರೆ. ಹಾಪುರ್‌ನಲ್ಲಿರುವ ಎಲೆಕ್ಟ್ರಾನಿಕ್ ಉಪಕರಣಗಳ ಉತ್ಪಾದನಾ ಘಟಕದಲ್ಲಿ ಸ್ಫೋಟ ಸಂಭವಿಸಿದೆ. ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾವು ವಿಷಯವನ್ನು ತನಿಖೆ ಮಾಡುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹಾಪುರ ಐಜಿ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.

ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಸ್ಪೋಟ ಸಂಭವಿಸಿದ ಬೆನ್ನಲ್ಲಿಯೇ ಅಗ್ನಿಶಾಮಕ ದಳದ ವಾಹನಗಳು ತುರ್ತಾಗಿ ಸ್ಥಳಕ್ಕೆ ಬಂದಿದ್ದವು. ಈ ವರೆಗೂ 8 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಈ ದೇಹಗಳು ಘಟನಾ ಸ್ಥಣದಲ್ಲಿಯೇ ಸಿಕ್ಕಿವೆ. ಸಂಪೂರ್ಣವಾಗಿ ಸುಟ್ಟುಹೋದ ರೀತಿಯಲ್ಲಿ ದೇಹಗಳು ಸಿಕ್ಕಿವೆ. ಸುಟ್ಟ ಗಾಯ ಹಾಗೂ ಉಸಿರಾಡಲು ಉಂಟಾದ ಸಮಸ್ಯೆಯಿಂದಾಗಿ ಸಾವಿಗೀಡಾಗಿರುವ ಶಂಕೆ ಮಾಡಲಾಗಿದೆ. ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿವೆ. ಇಡೀ ಆಕಾಶಕ್ಕೆ ಬೆಂಕಿ ಹೊತ್ತಿದೆಯೇಯೋ ಎನ್ನುವ ರೀತಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ವಿಶಾಖಪಟ್ಟಣದ ಕೆಮಿಕಲ್‌ ಫ್ಲಾಂಟ್‌ನಲ್ಲಿ ಅನಿಲ ಸೋರಿಕೆ: 178 ಉದ್ಯೋಗಿಗಳು ಅಸ್ವಸ್ಥ

ಅಗ್ನಿಶಾಮಕ ದಳದ ಅಧಿಕಾರಿಗಳ ಪ್ರಕಾರ, ಸಾವಿನ ಸಂಖ್ಯೆಯಲ್ಲಿ ಇನ್ನೂ ಏರಿಕೆಯಾಗುವ ಸಾಧ್ಯತೆ. ಸ್ಪೋಟಕ್ಕೆ ಕಾರಣವೇನು ಎನ್ನುವುದು ಇನ್ನೂ ಸ್ಪಷ್ಟವಾಗಿ ತಿಳಿದಿಲ್ಲ. ಅದರ ತನಿಖೆ ನಡೆಯುತ್ತಿದೆ. ಸ್ಫೋಟ ಸಂಭವಿಸುವ ವೇಳೆ ಸಾಕಷ್ಟು ಮಂದಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಜೀವ ಉಳಿಸಿಕೊಳ್ಳುವ ಸಲುವಾಗಿ ಬೆಂಕಿ ಕಂಡೊಡನೆ ಹೆಚ್ಚಿನವರು ಫ್ಯಾಕ್ಟರಿಯ ಹೊರಗೆ ಬಂದಿದ್ದಾರೆ.

ಹರ್ಯಾಣದ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಬೆಂಕಿ

ಕಳೆದ ಏಪ್ರಿಲ್ 17 ರಂದು, ಹಾಪುರದ ಹೆದ್ದಾರಿಗೆ ಸಂಪರ್ಕ ನೀಡುವ ಮಸೌಟಾ ಗ್ರಾಮದ ಬಳಿಯ ಪ್ಲಾಸ್ಟಿಕ್ ಫ್ಯಾಕ್ಟರಿಯಲ್ಲಿ ಲಕ್ಷಗಟ್ಟಲೆ ಮೌಲ್ಯದ ಸರಕುಗಳು ಬೆಂಕಿಗೆ ತುತ್ತಾಗಿ ಸುಟ್ಟು ಹೋಗಿದ್ದವು.  ಮಾಹಿತಿ ಪಡೆದ ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ಕಾರ್ಖಾನೆಯಲ್ಲಿ ಪ್ಲಾಸ್ಟಿಕ್ ಕರಗಿಸಲಾಗುತ್ತಿದ್ದು, ಬೆಂಕಿ ಹೊತ್ತಿಕೊಂಡಿದೆ. ಈ ಬೆಂಕಿ ಅವಘಡದಿಂದ ಕಾರ್ಖಾನೆಗೆ ಲಕ್ಷಾಂತರ ರೂಪಾಯಿ ನಷ್ಟವಾಗಿತ್ತು.

Latest Videos
Follow Us:
Download App:
  • android
  • ios