ನವದೆಹಲಿ(ಜು. 22) ಕೊನೆಯ 24 ಗಂಟೆ ಅವಧಿಯಲ್ಲಿ 9,440 ಕೊರೋನಾ ಸೋಂಕಿತರು ದೇಶದಲ್ಲಿ ಗುಣಮುಖವಾಗಿದ್ದಾರೆ.  ಈ ಕಾರಣದಿಂದ ರಿಕವರಿ ರೇಟ್ ಶೇ. 55.77 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.

ಇಲ್ಲಿಯವರೆಗೆ ದೇಶದಲ್ಲಿ ಕೊರೋನಾಕ್ಕೆ ತುತ್ತಾದ 2,37,195 ರೋಗಿಗಳು ಗುಣಮುಖವಾಗಿದ್ದಾರೆ ಎಂದು ಇಲಾಖೆ ಟ್ವೀಟ್ ಮೂಲಕ ತಿಳಿಸಿದೆ.

ಕೊರೋನಾ ಸೋಂಕು ಮಾಹಿತಿ ಗೌಪ್ಯವಾಗಿಟ್ಟರೆ ಕೇಸ್

ಆಕ್ಟೀವ್ ಇರುವ ಸಂಖ್ಯೆ {62,808} ಗುಣಮುಖರಾದವರ ಸಂಖ್ಯೆ ಮೀರಿಸಿದ್ದು ಹೊಸ ಆಶಾಭಾವ ಮೂಡಿಸಿದೆ.  1,74,387 ರೋಗಿಗಳು ಕೊರೋನಾ ಸೋಂಕಿನ ಕಾರಣ ಚಿಕಿತ್ಸೆ ಹಂತದಲ್ಲಿ ಇದ್ದಾರೆ ಎಂದು  ಇಲಾಖೆ ತಿಳಿಸಿದೆ.

ಒಂದು ಕಡೆ ಕೊರೋನಾಕ್ಕೆ ಮಾತ್ರೆಯೊಂದನ್ನು ಕಂಡುಹಿಡಿಯಲಾಗಿದೆ ಎಂಬ ವರದಿಗಳು ಬಂದಿವೆ.  ಆದರೆ ದಿನೇ ದಿನೇ ಸೋಂಕಿತರ ಸಂಖ್ಯೆ ಮಾತ್ರವ ಏರಿಕೆಯಲ್ಲೇ ಇದ್ದು ಮನೆಮಾಡಿರುವ ಆತಂಕ ಸದ್ಯಕ್ಕೆ ದೂರವಾಗುವ ಲಕ್ಷಣಗಳು ಇಲ್ಲ.