ರಾಂಚಿ(ಆ.22): ಬಹುಕೋಟಿ ಮೇವು ಹಗರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ಗೂ ಇದೀಗ ಕೊರೋನಾ ಭೀತಿ ಎದುರಾಗಿದೆ.

ಅನಾರೋಗ್ಯ ಹಿನ್ನೆಲೆ ಇಲ್ಲಿನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ(ರಿಮ್ಸ್‌) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲಾಲು ಭದ್ರತೆಗಾಗಿ ನಿಯೋಜನೆಗೊಂಡ 9 ಪೊಲೀಸ್‌ ಸಿಬ್ಬಂದಿ ಕೊರೋನಾಗೆ ತುತ್ತಾಗಿರುವುದು ಗುರುವಾರ ದೃಢಪಟ್ಟಿದೆ. ಆದರೆ, ಸೋಂಕು ದೃಢಪಟ್ಟಿರುವ ಪೊಲೀಸ್‌ ಸಿಬ್ಬಂದಿ ಲಾಲು ಇರುವ ಕೊಠಡಿಯಿಂದ ಹೊರಗಿರುತ್ತಾರೆ.

ಹೀಗಾಗಿ, ಲಾಲುಗೆ ಪೊಲೀಸ್‌ ಸಿಬ್ಬಂದಿಯಿಂದ ಸೋಂಕು ಹಬ್ಬಿದ ಸಾಧ್ಯತೆ ಕ್ಷೀಣ. ಅಲ್ಲದೆ, ಲಾಲುರಲ್ಲಿ ಕೊರೋನಾ ಲಕ್ಷಣ ಕಂಡುಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.