ದೆಹಲಿ ಪೊಲೀಸರ ವಿಶೇಷ ಸೆಲ್ 9 ಶಂಕಿತ ಉಗ್ರರನ್ನು ಬಂಧಿಸುವ ಮೂಲಕ ರಾಷ್ಟ್ರ ರಾಜಧಾನಿ ಮತ್ತು ಮುಂಬೈನಲ್ಲಿ ನಡೆಯಬೇಕಿದ್ದ ಭಾರಿ ಉಗ್ರ ದಾಳಿಯ ಸಂಚನ್ನು ವಿಫಲಗೊಳಿಸಿದೆ. ಬಂಧಿತರು ಪಾಕಿಸ್ತಾನದ ಐಎಸ್‌ಐ ಮತ್ತು ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದರು ಎಂದು ತಿಳಿದುಬಂದಿದೆ.

ನವದೆಹಲಿ (ಮೇ.31): ರಾಷ್ಟ್ರರಾಜಧಾನಿ ದೆಹಲಿ(Delhi) ಹಾಗೂ ಆರ್ಥಿಕ ರಾಜಧಾನಿಯ ಪ್ರಮುಖ ಸ್ಥಳಗಳಲ್ಲಿ ಉಗ್ರದಾಳಿಗೆ ಸಂಚು ರೂಪಿಸಿದ್ದ 9 ಶಂಕಿತ ಉಗ್ರರನ್ನು ದೆಹಲಿ ಪೊಲೀಸರ ವಿಶೇಷ ಸೆಲ್‌(Delhi Police Special Cell) ಬಂಧಿಸಿದ್ದು, ಸಂಭವಿಸಬಹುದಾಗಿದ್ದ ಬಹುದೊಡ್ಡ ಅನಾಹುತವನ್ನು ತಪ್ಪಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಂಧಿತರು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ(Pakistan's intelligence agency ISI) ಹಾಗೂ ಭೂಗತಲೋಕದ ಡಾನ್‌ ದಾವೂದ್‌ ಇಬ್ರಾಹಿಂ(Dawood Ibrahim) ಜತೆ ನಂಟು ಹೊಂದಿದ್ದು, ಇವರ ಮೇಲೆ ಬಹುಕಾಲದಿಂದ ಕಣ್ಣಿಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಉಗ್ರ ದಾಳಿ ನಡೆವ ಬಗ್ಗೆ ಭದ್ರತಾ ಇಲಾಖೆಗೆ ಮಾಹಿತಿ ಲಭಿಸಿ, ಆ ಬಗ್ಗೆ ಅವರು ಸಾರ್ವಜನಿಕರನ್ನು ಎಚ್ಚರಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಯಾಗಿದೆ.

ಸೆರೆಸಿಕ್ಕವರಲ್ಲಿ ದೆಹಲಿ, ಮುಂಬೈ, ಪಂಜಾಬ್‌ ನಿವಾಸಿಗಳ ಜತೆ ವಿದೇಶಿಗರೂ ಇದ್ದಾರೆ. ಅವರಿಂದ ಭಾರೀ ಪ್ರಮಾಣದ ಮದ್ದುಗುಂಡುಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಸದ್ಯ ಇವರಿಗೆ ಆರ್ಥಿಕ ನೆರವು ಹರಿದುಬರುತ್ತಿದ್ದ ಮಾರ್ಗ ಹಾಗೂ ಅದರ ಹಿಂದಿರುವ ಮಾರ್ಗದರ್ಶಕರ ಪತ್ತೆಗೆ ವಿಚಾರಣೆ ನಡೆಸಲಾಗುತ್ತಿದೆ.

ಏನೇನು ಗುರಿ?:

ಜನಸ್ತೋಮವಿರುವ ವಿಮಾನ ನಿಲ್ದಾಣ, ರೈಲು ನಿಲ್ದಾಣದಂತಹ ಪ್ರದೇಶಗಳು, ಪರಮಾಣು, ವಿದ್ಯುತ್ ಸ್ಥಾವರಗಳು, ಧಾರ್ಮಿಕ ಸ್ಥಳಗಳು, ಹಾಗೂ ಭದ್ರತಾ ಸಿಬ್ಬಂದಿ ಬಂಧಿತರ ಗುರಿಯಾಗಿದ್ದರು ಎಂದು ತಿಳಿದುಬಂದಿದೆ.