Asianet Suvarna News Asianet Suvarna News

ಅಂಬಾನಿ ಪುತ್ರನ ಮದುವೆಯಲ್ಲಿ ಹಾಡಲು ಬಂದ ಗಾಯಕ ಜಸ್ಟೀನ್ ಬೈಬರ್‌ ಪಡೆದ ಸಂಭಾವನೆ ಎಷ್ಟು?

ಜು.12ರಂದು ನಡೆಯಲಿರುವ ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹ ಸಮಾರಂಭದಲ್ಲಿ ಸಂಗೀತ ಸುಧೆ ಹರಿಸಲು ಪ್ರಖ್ಯಾತ ಪಾಪ್ ಗಾಯಕ ಜಸ್ಟಿನ್‌ ಬೈಬರ್ ಮುಂಬೈಗೆ ಆಗಮಿಸಿದ್ದಾರೆ. 

83 crore payment for singer Justin Bieber who came to india to sing at Ambani's son anant ambani radhika merchant wedding akb
Author
First Published Jul 6, 2024, 9:12 AM IST

ಮುಂಬೈ: ಜು.12ರಂದು ನಡೆಯಲಿರುವ ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್‌ ಅವರ ವಿವಾಹ ಸಮಾರಂಭದಲ್ಲಿ ಸಂಗೀತ ಸುಧೆ ಹರಿಸಲು ಪ್ರಖ್ಯಾತ ಪಾಪ್ ಗಾಯಕ ಜಸ್ಟಿನ್‌ ಬೈಬರ್ ಮುಂಬೈಗೆ ಆಗಮಿಸಿದ್ದಾರೆ. 

ಮದುವೆಯ ‘ಸಂಗೀತ್‌’ ಸಮಾರಂಭದಲ್ಲಿ ಪ್ರದರ್ಶನ ನೀಡಲು ಈ ಪಾಶ್ಚಾತ್ಯ ಗಾಯಕ ಜಸ್ಟಿನ್‌ಗೆ ಬರೋಬ್ಬರಿ 83 ಕೋಟಿ ರು. ಸಂಭಾವನೆ ಪಡೆದಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಜಸ್ಟಿನ್‌ ಅವರು 2017ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿದ್ದರು. ಅಮೆರಿಕದ ಲಾಸ್‌ ಏಂಜಲೀಸ್‌ ನಿವಾಸಿಯಾದ ಬೈಬರ್‌, ‘ಬೇಬಿ’, ‘ಸಾರಿ’, ‘ಲವ್ ಯುವರ್‌ ಸೆಲ್ಫ್‌’ ಹಾಗೂ ‘ಬಾಯ್‌ಫ್ರೆಂಡ್‌’ ಆಲ್ಬಂಗಳಿಂದ ಹೆಸರುವಾಸಿಯಾದವರು. 2 ಸಲ ಸಂಗೀತ ಕ್ಷೇತ್ರದ ಪ್ರಸಿದ್ಧ ‘ಗ್ರ್ಯಾಮಿ’ ಪ್ರಶಸ್ತಿಗೂ ಜಸ್ಟೀನ್ ಬೈಬರ್ ಪಾತ್ರರಾಗಿದ್ದಾರೆ. 

ಗಾಯಕ ಜಸ್ಟಿನ್ ಬೀಬರ್‌ ಮುಖಕ್ಕೆ ಪಾರ್ಶ್ವವಾಯು; ನಗಲೂ ಆಗದ ವಿಚಿತ್ರ ಕಾಯಿಲೆಗೆ ಕಾರಣವಾಗೋದೇನು ?

ಜಸ್ಟೀನ್ ಬೈಬರ್ ಜತೆ ಅಂತಾರಾಷ್ಟ್ರೀಯ ಖ್ಯಾತಿಯ ಗಾಯಕರಾದ ಅಡೇಲೆ, ಡ್ರೇಕ್‌ ಹಾಗೂ ಲಾನಾ ಡೆ ರೇ ಅವರೂ ಅಂಬಾನಿ ಮಗನ ಮದುವೆಯಲ್ಲಿ ಸಂಗೀತ ರಸದೌತಣ ನೀಡಲಿದ್ದಾರೆ. ಈ ಹಿಂದೆ ಜಾಮ್‌ನಗರದಲ್ಲಿ ನಡೆದ ಅನಂತ್‌-ರಾಧಿಕಾ ಅವರ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಪಾಪ್‌ ಗಾಯಕಿ ರಿಹಾನಾ ಅವರು ಹಾಡಿ ರಂಜಿಸಿದ್ದರು. ಅವರು 65 ರಿಂದ 75 ಕೋಟಿ ರು. ಪಡೆದಿದ್ದರು ಎನ್ನಲಾಗಿತ್ತು.

ಸೋನಿಯಾ ಗಾಂಧಿ ನಿವಾಸಕ್ಕೆ ಉದ್ಯಮಿ ಮುಖೇಶ್ ಅಂಬಾನಿ ಭೇಟಿ: ಮಗನ ಮದ್ವೆಗೆ ಆಹ್ವಾನ?

 

 

Latest Videos
Follow Us:
Download App:
  • android
  • ios