ನವದೆಹಲಿ[ಜ.28]: ಭಾರತದಲ್ಲಿ 8 ಲಕ್ಷ ವಿವಾಹಿತ ಪುರುಷ ಮತ್ತು ಮಹಿಳೆಯರು, ವಿವಾಹೇತರ ಸಂಬಂಧಕ್ಕೆ ಅವಕಾಶ ಕಲ್ಪಿಸುವ ‘ಗ್ಲೀಡೆನ್‌’ ಎಂಬ ಮೊಬೈಲ್‌ ಆ್ಯಪ್‌ ಅನ್ನು ಬಳಸುತ್ತಿದ್ದಾರೆ ಎಂಬ ಸಂಗತಿ ಬೆಳಕಿಗೆ ಬಂದಿದೆ. ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಇಂಥ ಆ್ಯಪ್‌ ಬಳಕೆ ಮಾಡುತ್ತಿರುವ ವಿವಾಹಿತ ಮಹಿಳೆ ಮತ್ತು ಪುರುಷರ ಪಟ್ಟಿಯಲ್ಲಿ ಭಾರತದ ಸಿಲಿಕಾನ್‌ ಸಿಟಿ ಖ್ಯಾತಿಯ ಬೆಂಗಳೂರು ನಂ.1 ಸ್ಥಾನದಲ್ಲಿದೆ!

ವಿವಾಹಿತ ಮಹಿಳೆಯರಿಗಾಗಿ ಸಿದ್ಧಪಡಿಸಲಾಗಿರುವ ಪ್ರೆಂಚ್‌ ಮೂಲದ್ದು ಎನ್ನಲಾಗಿರುವ ‘ಗ್ಲೀಡೆನ್‌’ ಆ್ಯಪ್‌ನಲ್ಲಿ 2019ರ ನವೆಂಬರ್‌ವರೆಗೂ ಬೆಂಗಳೂರು ಅಷ್ಟೇ ಅಲ್ಲದೆ, ದೇಶದ ಇನ್ನಿತರ ಮೆಟ್ರೋ ನಗರಗಳಾದ ಕೋಲ್ಕತಾ, ಮುಂಬೈ, ದೆಹಲಿ, ಪುಣೆ, ನವದೆಹಲಿ, ಹೈದರಾಬಾದ್‌, ಚೆನ್ನೈ, ಗುರುಗ್ರಾಮ, ಅಹಮದಾಬಾದ್‌, ಜೈಪುರ, ಚಂಡೀಗಢ, ಲಖನೌ, ಕೊಚ್ಚಿ, ನೋಯ್ಡಾ, ವಿಶಾಖಪಟ್ಟಣಂ, ನಾಗ್ಪುರ, ಸೂರತ್‌, ಇಂದೋರ್‌ ಹಾಗೂ ಭುವನೇಶ್ವರ ನಗರಗಳ ಮಹಿಳೆ ಮತ್ತು ಪುರುಷರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು, 2020ರ ಜನವರಿಯಲ್ಲಿ ಈ ಆ್ಯಪ್‌ಗೆ ಸೇರ್ಪಡೆಯಾಗುವವರ ಪ್ರಮಾಣ ಶೇ.300ರಷ್ಟುಏರಿಕೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಡೇಟಿಂಗ್ ಆ್ಯಪ್ ಸಹವಾಸ, 73 ಲಕ್ಷ ಕಳಕೊಂಡ 65 ವರ್ಷದ ಅಂಕಲ್!

ಸುಖಕರವಾಗಿಲ್ಲದ ಲೈಂಗಿಕ ಜೀವನ, ಪತಿಗೆ ಪತ್ನಿ, ಪತ್ನಿಗೆ ಪತಿಯಿಂದ ಮೋಸ, ದೈಹಿಕ ಸಂಬಂಧದಲ್ಲಿ ಬಿರುಕು, ಭಾವಪರತೆಯ ಕೊರತೆಯಿಂದಾಗಿ ದಾಂಪತ್ಯ ಜೀವನದಲ್ಲಿ ಬಿರುಕು ಮೂಡುತ್ತಿದ್ದು, ಇಂಥವರು ತಮ್ಮ ಜೀವನ ಸಂಗಾತಿಗಾಗಿ ಇಂಥ ಆ್ಯಪ್‌ಗಳ ಮೊರೆ ಹೋಗುತ್ತಿರಬಹುದು ಎಂದು ಮನೋವೈದ್ಯರಾದ ಡಾ. ಸುನೀಲ್‌ ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.