Asianet Suvarna News Asianet Suvarna News

ದೇಶಾದ್ಯಂತ ದಾಳಿ: ಜಿಹಾದಿ ಗ್ಯಾಂಗ್‌ ಸಂಚು ಬಯಲು!

ತಮಿಳುನಾಡು ಮೂಲದ ‘ಜಿಹಾದಿ ಗ್ಯಾಂಗ್‌’ ಒಂದನ್ನು ಬುಧವಾರ ತಮಿಳುನಾಡು ಪೊಲೀಸರು ಭೇದಿಸಿದ್ದು, 8 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ 8 ಮಂದಿಯಲ್ಲಿ ಮೂವರು ಬೆಂಗಳೂರಿನ ‘ತೀವ್ರಗಾಮಿ’ ವ್ಯಕ್ತಿಗಳೂ ಇದ್ದಾರೆ.

8 Jihadi Gang Members Arrested in Chennai
Author
Bengaluru, First Published Jan 9, 2020, 7:17 AM IST

ಚೆನ್ನೈ [ಜ.09]:  ಕರ್ನಾಟಕದಲ್ಲಿನ ಜಿಹಾದಿ ಗುಂಪೊಂದರ ಜತೆ ನಂಟು ಹೊಂದಿದ್ದ ತಮಿಳುನಾಡು ಮೂಲದ ‘ಜಿಹಾದಿ ಗ್ಯಾಂಗ್‌’ ಒಂದನ್ನು ಬುಧವಾರ ತಮಿಳುನಾಡು ಪೊಲೀಸರು ಭೇದಿಸಿದ್ದು, 8 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಈ ಶಂಕಿತರ ಗುಂಪು ದೇಶದ ವಿವಿಧ ಕಡೆ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ತಿಳಿದುಬಂದಿದೆ.

ಬಂಧಿತರಲ್ಲಿ 8 ಮಂದಿಯಲ್ಲಿ ಮೂವರು ಬೆಂಗಳೂರಿನ ‘ತೀವ್ರಗಾಮಿ’ ವ್ಯಕ್ತಿಗಳೂ ಇದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಬಂಧಿತರಿಂದ ಪಿಸ್ತೂಲು ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ತಮಿಳುನಾಡಿನ ‘ಕ್ಯು’ ಬ್ರ್ಯಾಂಚ್‌ ಪೊಲೀಸರು ವಶಪಡಿಸಿಕೊಂಡಿದ್ದಾರೆ. ‘ಕ್ಯು’ ಬ್ರ್ಯಾಂಚ್‌, ತಮಿಳುನಾಡಿನಲ್ಲಿ ಭಯೋತ್ಪಾದಕರು ಹಾಗೂ ರಾಷ್ಟ್ರೀಯ ಭದ್ರತೆ ಕುರಿತ ವಿಷಯಗಳ ಬಗ್ಗೆ ತನಿಖೆ ನಡೆಸುವ ಪೊಲೀಸ್‌ ವಿಭಾಗವಾಗಿದೆ. ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ‘ಕ್ಯು’ ಬ್ರ್ಯಾಂಚ್‌ ಈ ಕಾರಾರ‍ಯಚರಣೆ ನಡೆಸಿದೆ.

ಸಿಕ್ಕಿತ್ತು ಸುಳಿವು:

ತಮಿಳುನಾಡಿನ ಗುಪ್ತಚರ ವಿಭಾಗಕ್ಕೆ ಈ ಶಂಕಿತ ಉಗ್ರರ ಜಾಲದ ಬಗ್ಗೆ ಮೊದಲು ಸುಳಿವು ಲಭಿಸಿತ್ತು. ‘ಕೆಲವು ಮೂಲಭೂತವಾದಿ ಶಕ್ತಿಗಳು ದೇಶದ ವಿವಿಧ ಭಾಗಗಳಲ್ಲಿ ಜಿಹಾದ್‌ (ಧರ್ಮಯುದ್ಧ) ಸಾರಲು ಸಿದ್ಧತೆ ನಡೆಸಿದ್ದಾರೆ ಹಾಗೂ ಅವರು ಕಳೆದ ವರ್ಷದ ಡಿಸೆಂಬರ್‌ 3ನೇ ವಾರದಲ್ಲಿ ರಾಜ್ಯದಿಂದ ನಾಪತ್ತೆಯಾಗಿದ್ದಾರೆ’ ಎಂಬುದೇ ಆ ಸುಳಿವಾಗಿತ್ತು.

ತಮಿಳುನಾಡಿನ ಈ ಜಿಹಾದಿ ಗ್ಯಾಂಗ್‌ನ ಹಲವರು ರಾಜ್ಯದಲ್ಲಿ ನಡೆದ ದೊಡ್ಡ ಕೊಲೆ ಪ್ರಕರಣಗಳು ಹಾಗೂ ಇತರ ಕೆಲವು ಕೋಮು ಸಂಬಂಧಿ ಪ್ರಕರಣಗಳ ಜತೆ ನಂಟು ಹೊಂದಿದ್ದಾರೆ.

‘ಈ ಉಗ್ರರ ಗುಂಪು ಬೆಂಗಳೂರಿನಲ್ಲಿರುವ ಇಂಥದ್ದೇ ಶಂಕಿತ ಉಗ್ರಗಾಮಿಗಳ ಗುಂಪಿನ ಜತೆ ನಂಟು ಬೆಳೆಸಿಕೊಂಡಿತ್ತು. ಈ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಸಂಚಾರ ಆರಂಭಿಸಿತ್ತು’ ಎಂದು ಪೊಲೀಸ್‌ ಪ್ರಕಟಣೆ ಹೇಳಿದೆ.

ಇವರ ಬಂಧನಕ್ಕೆ ತಮಿಳುನಾಡಿನ ವಿವಿಧ ಭಾಗಗಳಲ್ಲಿ ಬಲೆ ಬೀಸಲಾಯಿತು. ಇದೇ ವೇಳೆ ಸಂಬಂಧಿತ ರಾಜ್ಯಗಳಿಗೆ ಈ ಬಗ್ಗೆ ಮಾಹಿತಿ ನೀಡಿ, ಇವರ ಚಲನವಲನಗಳನ್ನು ಪತ್ತೆ ಮಾಡುವಂತೆ ಹಾಗೂ ತನಿಖೆಗೆ ಸಹಕಾರ ನೀಡುವಂತೆ ಕೋರಲಾಯಿತು.

ಈ ವೇಳೆ ನಡೆದ ತಲಾಶೆಯಲ್ಲಿ ಮೊದಲು ತಮಿಳುನಾಡಿನ ಐವರನ್ನು ಬಂಧಿಸಲಾಯಿತು. ನಂತರ ಕರ್ನಾಟಕ ಪೊಲೀಸರ ಸಹಕಾರದೊಂದಿಗೆ ಕರ್ನಾಟಕದ ಮೂವರನ್ನು ‘ಕ್ಯು’ ಬ್ರ್ಯಾಂಚ್‌ ಪೊಲೀಸರು ಬಂಧಿಸಿದರು. ಬಂಧಿತರಿಂದ 3 ಪಿಸ್ತೂಲು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಯಿತು.

ಬಂಧಿತರನ್ನು ಚೆನ್ನೈ ನ್ಯಾಯಾಲಯವೊಂದರ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Follow Us:
Download App:
  • android
  • ios