ಟಿಟಿಡಿಯ 743 ಸಿಬ್ಬಂದಿಗೆ ಕೊರೋನಾ ಸೋಂಕು, ಮೂವರು ವೈರಸ್‌ಗೆ ಬಲಿ| ತಿಮ್ಮಪ್ಪ ದೇವಾಲಯದ ಅರ್ಚಕರು ಸೇರಿದಂತೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ

ತಿರುಪತಿ(ಆ.10): ಇಲ್ಲಿನ ತಿಮ್ಮಪ್ಪ ದೇವಾಲಯದ ಅರ್ಚಕರು ಸೇರಿದಂತೆ ತಿರುಮಲ ತಿರುಪತಿ ದೇವಸ್ಥಾನ ಮಂಡಳಿ (ಟಿಟಿಡಿ)ಯ 743 ಸಿಬ್ಬಂದಿಗಳಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಮೂವರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಟಿಟಿಡಿ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಬಿಎಸ್‌ವೈ, ಸಿದ್ದು ಬಹುತೇಕ ಚೇತರಿಕೆ: ಶೀಘ್ರದಲ್ಲೇ ಡಿಸ್ಚಾರ್ಜ್!

‘ಜೂನ್‌ 11ರಿಂದ ಒಟ್ಟು 743 ಟಿಟಿಡಿ ಸಿಬ್ಬಂದಿಗೆ ಕೋವಿಡ್‌-19 ಸೋಂಕು ತಗುಲಿದೆ. ಇವರಲ್ಲಿ 402 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ. ಉಳಿದ 338 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ಎಂದು ಟಿಟಿಡಿ ಕಾರ‍್ಯನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಾಲ್‌ ತಿಳಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮುಚ್ಚಿದ್ದ ತಿರುಪತಿ ದೇವಾಲಯವನ್ನು ಜೂನ್‌ 11ರಿಂದ ಮರು ಆರಂಭಿಸಲಾಗಿತ್ತು.