ನವದೆಹಲಿ(ಆ.26): ದೇಶಾದ್ಯಂತ ಮಂಗಳವಾರ ದಾಖಲೆಯ 71867 ಹೊಸ ಕೊರೋನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದು ಈವರೆಗೆ ಯಾವುದೇ ದಿನವೊಂದರಲ್ಲಿ ದಾಖಲಾದ ಗರಿಷ್ಠ ಪ್ರಮಾಣವಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 32.25 ಲಕ್ಷ ದಾಟಿದೆ.

ಇದೇ ವೇಳೆ ನಿನ್ನೆ 1188 ಜನರ ಸಾವಿನೊಂದಿಗೆ, ಈವರೆಗೆ ಸೋಂಕಿಗೆ ಬಲಿಯಾದವರ ಸಮಖ್ಯೆ 59523ಕ್ಕೆ ತಲುಪಿದೆ. ಮಂಗಳವಾರದ ಸಾವಿನ ಪ್ರಮಾಣ ಈವರೆಗಿನ 2ನೇ ದೈನಂದಿನ ಗರಿಷ್ಠವಾಗಿದೆ. ಜು.20ರಂದು 1199 ಮಂದಿ ಬಲಿಯಾಗಿರುವುದು ಈವರೆಗಿನ ಗರಿಷ್ಠ ಪ್ರಮಾಣವಾಗಿದೆ.

ಇದೇ ವೇಳೆ ನಿನ್ನೆ ಒಂದೇ ದಿನ 69,968 ಮಂದಿ ಕೊರೋನಾ ಮಹಾಮಾರಿ ವಿರುದ್ಧ ಜಯಿಸಿ, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ದೇಶಾದ್ಯಂತ ಈವರೆಗೆ ಕೊರೋನಾದಿಂದ 24.60 ಲಕ್ಷಕ್ಕೂ ಹೆಚ್ಚು ಮಂದಿ ಗುಣಮುಖರಾದಂತಾಗಿದೆ. ಹೀಗಾಗಿ, ಒಟ್ಟು 32 ಲಕ್ಷಕ್ಕೂ ಹೆಚ್ಚು ಸೋಂಕಿತರ ಪೈಕಿ ಕೇವಲ 7 ಲಕ್ಷ ಮಂದಿ ಮಾತ್ರವೇ ಸಕ್ರಿಯ ಸೋಂಕಿತರಾಗಿದ್ದಾರೆ.

ಇನ್ನು ಮಂಗಳವಾರ ಮಹಾರಾಷ್ಟ್ರದಲ್ಲಿ 10,425(329 ಬಲಿ), ಆಂಧ್ರಪ್ರದೇಶದಲ್ಲಿ 9927(92 ಬಲಿ), ಕರ್ನಾಟಕದಲ್ಲಿ 8161(ದಾಖಲೆಯ 148 ಸಾವು), ತಮಿಳುನಾಡು 5951(107 ಬಲಿ), ಉತ್ತರ ಪ್ರದೇಶದಲ್ಲಿ 5006 ಮಂದಿಗೆ ಹೊಸದಾಗಿ ಸೋಂಕು ದೃಢಪಟ್ಟಿದ್ದು, 72 ಮಂದಿ ಕೊರೋನಾಕ್ಕೆ ಬಲಿಯಾಗಿದ್ದಾರೆ.