Asianet Suvarna News Asianet Suvarna News

ಸೈಕಲ್‌ನಲ್ಲಿ ಪೋಹಾ ಮಾರಿ ವಯೋವೃದ್ಧನ ಸ್ವಾಭಿಮಾನಿ ಜೀವನ.... ನೆಟ್ಟಿಗರಿಂದ ಸೆಲ್ಯೂಟ್‌

  • 70 ರ ಇಳಿವಯಸ್ಸಿನಲ್ಲೂ ವೃದ್ಧನ ಸ್ವಾಭಿಮಾನಿ ಜೀವನ
  • ಸೈಕಲ್‌ ಗಾಡಿಯಲ್ಲಿ ಉಪಹಾರ ಮಾರಿ ಬದುಕುತ್ತಿರುವ ಜಯಂತಿ ಭಾಯ್‌
  • ವೃದ್ಧನ ಸ್ವಾಭಿಮಾನಕ್ಕೆ ನೆಟ್ಟಿಗರ ಸೆಲ್ಯೂಟ್‌
70 year old man from Nagpur sells poha nettizens selutes for his self respect akb
Author
Bangalore, First Published Dec 19, 2021, 6:45 PM IST

ಮುಂಬೈ(ಡಿ.19): 70 ವರ್ಷದ ವಯೋವೃದ್ಧರೊಬ್ಬರು ತನ್ನ ಸೈಕಲ್‌ನಲ್ಲಿ ಕೇವಲ 20 ರೂ.ಗೆ ಪೋಹ, ಚಣ, ಚಿವುಡ ಮುಂತಾದ ಉಪಾಹಾರಗಳನ್ನು ಮಾರುವ ಮೂಲಕ ಸ್ವಾಭಿಮಾನದ ಜೀವನ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಈ ಸ್ವಾಭಿಮಾನಿ ವಯೋವೃದ್ಧನನ್ನು ನಾಗಪುರದ ಜಯಂತಿ ಭಾಯ್(Jayanti Bhai) ಎಂದು ಗುರುತಿಸಲಾಗಿದೆ. ಅವರು ಎಲ್ಲಾ ತಿಂಡಿಗಳನ್ನು ಸ್ವತಃ ತಯಾರಿಸುತ್ತಾರೆ ಮತ್ತು ನಾಗಪುರದ ಗಾಂಧಿಬಾಗ್ (Gandhibagh) ಮತ್ತು ಇಟ್ವಾರಿಯ Itwari) ಬೀದಿಗಳಲ್ಲಿ ಸಂಜೆ 6 ರಿಂದ ರಾತ್ರಿ 8 ರವರೆಗೆ ಅವುಗಳನ್ನು ಮಾರಾಟ ಮಾಡುತ್ತಾರೆ.

ಜಯಂತಿ ಭಾಯ್ ಅವರು ತಾವು ಕಾರ್ಯ ನಿರ್ವಹಿಸುತ್ತಿರುವ ಪ್ರದೇಶದಲ್ಲಿ ಸ್ಥಳೀಯರಿಗೆ ಚಿರಪರಿಚಿತರು. ಆದರೆ ಈಗ, ಬ್ಲಾಗರ್( blogger) ಅಭಿನವ್ ಜೆಸ್ವಾನಿ (Abhinav Jeswani) ಅವರು, ಜಯಂತಿ ಭಾಯ್ ಅವರು ತಮ್ಮ ಸೈಕಲ್‌ನಲ್ಲಿ ಪೋಹಾ ಮಾರಾಟ ಮಾಡುತ್ತಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಾಕಿದ ನಂತರ ಭಾರತದಾದ್ಯಂತ ನೆಟಿಜನ್‌ಗಳು ಇವರಿಗೆ ಶಹಭಾಷ್‌ ಅನುತ್ತಿದ್ದಾರೆ. ಜಯಂತಿ ಭಾಯ್‌ ಅವರು ಮಹಾಜನವಾಡಿ(Mahajanwadi)ಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿಯೂ ಕೆಲಸ ಮಾಡುತ್ತಾರೆ ಎಂದು ಬ್ಲಾಗರ್ ಹೇಳಿದ್ದಾರೆ. 

Suvarna FIR : ಆಸ್ತಿಗಾಗಿ 98ರ ಅಜ್ಜಿ ಕಿಡ್ನಾಪ್... ಎಂಥಾ  ಸಂಬಂಧಿಕರು!

ಅವರು ತಾವು ತಯಾರಿಸಿದ ಎಲ್ಲಾ ಆಹಾರ ಪದಾರ್ಥಗಳನ್ನು ತಮ್ಮ ಬೈಸಿಕಲ್‌ನಲ್ಲಿ ಹಾಕಿ ಕೊಂಡೊಯ್ಯುತ್ತಾರೆ. ಆ ಬೈಸಿಕಲ್‌ಗೆ ಕೆಂಪು ಬಣ್ಣದ ಹಾರ್ನ್‌ ಅನ್ನು ಜೋಡಿಸಲಾಗಿದೆ. ಜೊತೆಗೆ ಕೆಳ ಭಾಗದಲ್ಲಿ ಪೋಹಾ, ಚನಾ(Chana) ಮತ್ತು ಚಿವ್ಡಾ (Chiwda) ಎಂದು ದೊಡ್ಡದಾಗಿ ಹಿಂದಿ(Hindhi) ಅಕ್ಷರಗಳಲ್ಲಿ ಕಾಗದದ ಮೇಲೆ ಕೈಯಿಂದ ಬರೆದು ಈ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಅಂಟಿಸಿದ್ದಾರೆ. 

ಈ ಬೈಸಿಕಲ್‌ನ ಹಿಂಭಾಗದಲ್ಲಿ  ಕಟ್ಟಿದ ಚಿಕ್ಕ ಬುಟ್ಟಿಯಲ್ಲಿ ಅವರು ಮಾರುವ ಮೂರು ತಿಂಡಿಗಳಿಗೆ ಬೇಕಾದ ಎಲ್ಲಾ ಸಾಮಾಗ್ರಿಗಳನ್ನು ಇರಿಸಲಾಗಿದೆ. ಈ ವಿಡಿಯೋದಲ್ಲಿ ಜಯಂತಿ ಭಾಯ್‌ ಅವರು ವ್ಲಾಗರ್‌ಗಾಗಿ ಒಂದು ಪ್ಲೇಟ್ ತಿಂಡಿಗಳನ್ನು ತಯಾರಿಸುವ ವಿಡಿಯೋ ಇದೆ. ಹೀಗೆಂದು ಅಭಿನವ್ ಜೆಸ್ವಾನಿ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಬರೆದು ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ನ ಕೊನೆಯಲ್ಲಿ ಅವರ ವಯಸ್ಸು ಹಾಗೂ ದೂರವಾಣಿ ಸಂಖ್ಯೆಯನ್ನು ಬರೆದ ಬ್ಲಾಗರ್‌ ಅವರನ್ನು ಬೆಂಬಲಿಸುವಂತೆ ಕೇಳಿದ್ದಾರೆ. ಜಯಂತಿ ಭಾಯ್‌ ಅವರಿಂದ ಪೋಹಾ, ಚನಾ, ಚಿವ್ಡಾವನ್ನು ಖರೀದಿಸುವ ಮೂಲಕ ನಾವೆಲ್ಲರೂ ಅವನನ್ನು ಬೆಂಬಲಿಸೋಣ.  ಎಂದು ಬರೆದಿರುವ ಅವರು ಅಲ್ಲಿ ಅವರ ದೂರವಾಣಿ ಸಂಖ್ಯೆಯನ್ನು ಕೂಡ ಬರೆದಿದ್ದಾರೆ. ಸಂಜೆ 6 ರಿಂದ ರಾತ್ರಿ 8 ರ ನಡುವೆ ನೀವು ಅವರಿರುವ ಸ್ಥಳಕ್ಕೆ ತೆರಳಿ ಪೋಹಾ ತಿನ್ನಲು ಅವರಿಗೆ ಕರೆ ಮಾಡಬಹುದು ಎಂದು ಬರೆದಿದ್ದಾರೆ. 

Abandoned Parents : ಒಂಭತ್ತು ಮಕ್ಕಳಿದ್ದರೂ ಒಂಟಿಯಾದ 85 ವರ್ಷದ ವೃದ್ಧೆ!

ಒಂದು ವಾರದೊಳಗೆ ಈ ವೀಡಿಯೊವನ್ನು 6 ಲಕ್ಷಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ ಮತ್ತು 2 ಲಕ್ಷ ಜನ ಇದಕ್ಕೆ ಲೈಕ್‌ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂಟರ್‌ನೆಟ್‌ನಲ್ಲಿ ಸ್ಫೂರ್ತಿದಾಯಕ ಕಥೆಗಳಿಗೆ ಕೊರತೆಯಿಲ್ಲ. ನೀವು ಧೈರ್ಯ, ದಾನ ಮತ್ತು ಸಾಹಸದ ಕೆಲವು ಕಥೆಗಳ ಬಗ್ಗೆ ಅರಿಯುವ ಮನಸ್ಥಿತಿಯಲ್ಲಿದ್ದರೆ, ನೀವು ಮಾಡಬೇಕಾಗಿರುವುದು ಇಷ್ಟೇ ನಿಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸ್ಟೋರಿಗಳನ್ನು ಹುಡುಕಿದರೆ ಸಾಕು. ಸ್ಫೂರ್ತಿದಾಯಕ ಸ್ಟೋರಿಗಳು ಬೇಕಾದಷ್ಟು ಕಾಣ ಸಿಗುತ್ತವೆ. ಆದರೆ ಕೆಲವು ಕಥೆಗಳು ಮಾತ್ರ ಅಂತರ್ಜಾಲದ ಜಾಗದಲ್ಲಿ ಅಳಿಸಲಾಗದ ಗುರುತು ಹಾಕುತ್ತವೆ. ಈ ಚಿತ್ರಗಳು ಮತ್ತು ವೀಡಿಯೊಗಳು ತಕ್ಷಣವೇ ವೈರಲ್ ಆಗುತ್ತವೆ ಮತ್ತು ನಮ್ಮನ್ನು ಭಾವನಾತ್ಮಕವಾಗಿ ಕಾಡುತ್ತವೆ. ಇದು ಕೂಡ ಅಂತಹ ಸ್ಪೂರ್ತಿದಾಯಕ ಕತೆ ಎಂದರೆ ತಪ್ಪಾಗಲಾರದು. 

Follow Us:
Download App:
  • android
  • ios