ಲೋಕಸಭಾ ಚುನಾವಣೆ 6ನೇ ಹಂತವೂ ಮುಕ್ತಾಯ: ಇನ್ನೊಂದೇ ಚರಣ ಬಾಕಿ
ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ದಿನ ಲೋಕಸಭೆ ಚುನಾವಣೆ ನಡೆದಿದೆ. ಒಡಿತಾ ವಿಧಾನಸಭೆಯ 42 ಕ್ಷೇತ್ರಗಳಿಗೂ ಮತದಾನ ಆಗಿದ್ದು ಅಲ್ಲೂ ಶೇ.60ರಷ್ಟು ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಶೇ.78ರಷ್ಟು ಮತದಾನ ದಾಖಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅತಿ ಕಡಿಮೆ ಶೇ.52ರಷ್ಟು ಮತದಾನವಾಗಿದೆ.
ನವದೆಹಲಿ(ಮೇ.26): ಶನಿವಾರ ದೇಶಾದ್ಯಂತ 58 ಕ್ಷೇತ್ರಗಳಿಗೆ ಆರನೇ ಹಂತದ ಲೋಕಸಭಾ ಚುನಾವಣೆ, ಅಲ್ಲಲ್ಲಿ ಹಿಂಸಾಚಾರ ಹೊರತುಪಡಿಸಿ ಶಾಂತ ರೀತಿ ಮುಕ್ತಾಯಗೊಂಡಿದೆ. ಸುಮಾರು ಶೇ.61.11ರಷ್ಟು ಮತದಾನವಾಗಿದೆ. ಇದ ರೊಂದಿಗೆ ದೇಶಾದ್ಯಂತ 428 ಕ್ಷೇತ್ರಗಳಿಗೆ ಮತದಾನ ಸಂಪನ್ನಗೊಂಡಿದ್ದು, ಜೂ.1ರಂದು ನಡೆಯುವ ಇನ್ನೊಂದು ಹಂತದ ಮತದಾನ ಬಾಕಿ ಉಳಿದುಕೊಂಡಿದೆ.
ಆರು ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ದಿನ ಲೋಕಸಭೆ ಚುನಾವಣೆ ನಡೆದಿದೆ. ಒಡಿತಾ ವಿಧಾನಸಭೆಯ 42 ಕ್ಷೇತ್ರಗಳಿಗೂ ಮತದಾನ ಆಗಿದ್ದು ಅಲ್ಲೂ ಶೇ.60ರಷ್ಟು ಮತದಾನ ದಾಖಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚು ಶೇ.78ರಷ್ಟು ಮತದಾನ ದಾಖಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಅತಿ ಕಡಿಮೆ ಶೇ.52ರಷ್ಟು ಮತದಾನವಾಗಿದೆ.
'ಮೋದಿ ಇನ್ನೊಮ್ಮೆ ಗೆದ್ರೆ ತಮ್ಮ ದೇವಸ್ಥಾನ ತಾವೇ ಕಟ್ಕೋತಾರೆ': ಶಿವರಾಜ ತಂಗಡಗಿ ವಾಗ್ದಾಳಿ
2019ರ ಚುನಾವಣೆಯ 6ನೇ ಹಂತದಲ್ಲಿ ಶೇ.63.13 ರಷ್ಟು ಮತ ಚಲಾವಣೆಯಾಗಿತ್ತು. ದೆಹಲಿಯಲ್ಲಿ ರಾಷ್ಟ್ರಪತಿ ಬ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ ಕರ್, ಮುಖ್ಯ ನ್ಯಾ| ಡಿ.ವೈ, ಚಂದ್ರಚೂಡ್ ಸೇರಿದಂತೆ ಗಣ್ಯರು ಮತ ಚಲಾಯಿಸಿದ್ದು ಗಮನ ಸೆಳೆಯಿತು.
ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಪುತ್ರಿ ಮೊದಲನೇ ಬಾರಿ ಮತ ಹಾಕಿದ್ದು ಕೂಡ ವಿಶೇಷವಾಗಿತ್ತು. ಏಳನೇ ಹಾಗೂ ಕಡೆಯ ಹಂತದ ಮತದಾನ ಜೂ.1ರಂದು ನಡೆಯಲಿದ್ದು, 2.4 ರಂದು ಹೊರಬೀಳಲಿದೆ.