ಚೆನ್ನೈ[ಜ.20]: ಪೌರತ್ವ ತಿದ್ದುಪಡಿ ಕಾಯ್ದೆಯು ಮುಸ್ಲಿಮರ ಬಗ್ಗೆ ತಾರತಮ್ಯ ಧೋರಣೆ ಹೊಂದಿದೆ ಎಂಬ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಕಳೆದ 6 ವರ್ಷಗಳಲ್ಲಿ ಮುಸ್ಲಿಮರು ಸೇರಿದಂತೆ 2838 ಪಾಕಿಸ್ತಾನಿ ನಾಗರಿಕರಿಗೆ, 914 ಆಫ್ಘನ್ನರಿಗೆ ಹಾಗೂ 172 ಬಾಂಗ್ಲಾದೇಶೀಯರಿಗೆ ಭಾರತೀಯ ಪೌರತ್ವ ನೀಡಲಾಗಿದೆ ಎಂದು ಹೇಳಿದ್ದಾರೆ.

ಮಂಗಳೂರಿನ ಕೆವಿ ಕಾಮತ್‌ಗೆ ಹಣಕಾಸು ಹೊಣೆ?: ಕನ್ನಡಿಗ ವಿತ್ತ ತಜ್ಞನಿಗೆ ಪ್ರಧಾನಿ ಮಣೆ?

ಸುದ್ದಿಗಾರರ ಜತೆ ಭಾನುವಾರ ಮಾತನಾಡಿದ ಅವರು, 2014ರವರೆಗೆ ಪಾಕಿಸ್ತಾನ, ಆಷ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ವಲಸೆ ಬಂದ 566 ಮುಸ್ಲಿಮರಿಗೂ ಭಾರತೀಯ ಪೌರತ್ವ ನೀಡಲಾಗಿತ್ತು. 2016ರಿಂದ 2018ರ ನಡುವೆ 391 ಆಷ್ಘಾನಿಸ್ತಾನದ ಮುಸ್ಲಿಮರು ಹಾಗೂ 1595 ಪಾಕಿಸ್ತಾನಿ ವಲಸಿಗರಿಗೆ ಭಾರತೀಯ ಪೌರತ್ವ ನೀಡಲಾಯಿತು ಎಂದು ಹೇಳಿದರು.

‘2016ರ ಸಮಯದಲ್ಲೇ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದ ಮುಸ್ಲಿಂ ಗಾಯಕ ಅದ್ನಾನ್‌ ಸಮಿಗೆ ನಮ್ಮ ಪೌರತ್ವ ನೀಡಲಾಯಿತು. ಇದರಿಂದಾಗಿ ಪೌರತ್ವ ಕಾಯ್ದೆಯು ಮುಸ್ಲಿಂ ವಿರೋಧಿಯಾಗಿದೆ ಎಂಬ ಆರೋಪ ನಿರಾಧಾರದಿಂದ ಕೂಡಿದೆ’ ಎಂಬುದು ಸ್ಪಷ್ಟವಾಗುತ್ತದೆ ಎಂದರು. 1964ರಿಂದ 2008ರವರೆಗೆ 4 ಲಕ್ಷ ಶ್ರೀಲಂಕಾ ತಮಿಳರಿಗೂ ಪೌರತ್ವ ದೊರೆತಿದೆ ಎಂದು ವಿವರಿಸಿದರು.

ನೋಟುಗಳ ಮೇಲೆ ಲಕ್ಷ್ಮಿ ಫೋಟೋ ಇದ್ದರೆ ರೂಪಾಯಿ ಮೌಲ್ಯ ವೃದ್ಧಿ: ಸ್ವಾಮಿ!