ನವದೆಹಲಿ(ಮೇ.14): ಕೊರೋನಾ ನಿಗ್ರಹಕ್ಕಾಗಿ ಲಾಕ್‌ಡೌನ್‌ ಜಾರಿಯಾದ ಬಳಿಕ ಶೇ.50ರಷ್ಟುಗ್ರಾಮೀಣ ಕುಟುಂಬಗಳು ಊಟದ ಪ್ರಮಾಣವನ್ನು ಕಡಿಮೆ ಮಾಡಿವೆ ಎಂಬ ಕಳವಳಕಾರಿ ಸಂಗತಿಯೊಂದು ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ.

ಕರ್ನಾಟಕ ಸೇರಿದಂತೆ 12 ರಾಜ್ಯಗಳ 47 ಜಿಲ್ಲೆಗಳಲ್ಲಿ 5000 ಮಂದಿಯನ್ನು ಮಾತನಾಡಿಸಿ ಅಧ್ಯಯನ ನಡೆಸಲಾಗಿದೆ. ಆಹಾರ ಭದ್ರತೆ ಮಾಡಿಕೊಳ್ಳುವ ಸಲುವಾಗಿ ಊಟ ಮಾಡುವ ಪ್ರಮಾಣವನ್ನು ಕಡಿಮೆ ಮಾಡಿರುವುದಾಗಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಶೇ.50 ಮಂದಿ ತಿಳಿಸಿದ್ದಾರೆ. ಶೇ.68ರಷ್ಟುಮಂದಿ ತಮ್ಮ ಊಟದಲ್ಲಿ ಇರುತ್ತಿದ್ದ ವಿವಿಧ ಬಗೆಯ ತಿನಿಸುಗಳನ್ನು ಕಡಿತಗೊಳಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಹಸಿದವರಿಗೆ ಅಡುಗೆ ಮಾಡಿ ಊಟ ಬಡಿಸುವ ಇನ್‌ಸ್ಪೆಕ್ಟರ್‌!

ಶೇ.24ರಷ್ಟುಮಂದಿ ತಾವು ಬೇರೆಯವರಿಂದ ಆಹಾರ ಧಾನ್ಯ ಸಾಲ ಪಡೆದಿರುವುದಾಗಿ ಹೇಳಿದ್ದರೆ, ಶೇ.12ರಷ್ಟುಮಂದಿ ಉಚಿತ ಆಹಾರ ಪಡೆದುಕೊಂಡಿರುವುದಾಗಿ ತಿಳಿಸಿದ್ದಾರೆ. ವೆಚ್ಚ ಕಡಿತ ಉದ್ದೇಶದಿಂದ ತಮ್ಮ ಮಕ್ಕಳು ಶಾಲೆ ತೊರೆಯುವ ಸಾಧ್ಯತೆ ಇದೆ ಎಂದು ಮೂರನೇ ಒಂದರಷ್ಟು ಮಂದಿ ತಿಳಿಸಿದ್ದಾರೆ.