* ಓವೈಸಿ ಮನೆ ಮೇಲೆ ದಾಳಿ* ಹಿಂದೂ ಸೇನೆಯ ಐವರು ಅರೆಸ್ಟ್* ದೊಣ್ಣೆ, ಕೊಡಲಿ ಹಿಡಿದು ದಾಳಿ ನಡೆಸಿದ ದುಷ್ಕರ್ಮಿಗಳು

ನವದೆಹಲಿ(ಸೆ.22): ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ(Asaduddin Owaisi) ಮನೆ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಪ್ರಕರಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗೆ ಸೇರಿದವರೆನ್ನಲಾದ ಐವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ.

ದೆಹಲಿಯ ಅಶೋಕ ರಸ್ತೆಯಲ್ಲಿರುವ ಎಐಎಂಐಎಂ(AIMIM) ಮುಖ್ಯಸ್ಥ ಹಾಗೂ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಮನೆಗೆ ಮಂಗಳವಾರ ಸಂಜೆ ನುಗ್ಗಿದ್ದ ದುಷ್ಕರ್ಮಿಗಳು, ಅಲ್ಲದ್ದ ಧ್ವಂಸಗೊಳಿಸಿದ್ದರು. ಈ ಸಂಬಂಧ ತನಿಖೆ ನಡೆಸಿದ ದೆಹಲಿ ಪೊಲೀಸರು, ಈಶಾನ್ಯ ದೆಹಲಿಯ ಮಂಡೋಲಿ ಪ್ರದೇಶದ ನಿವಾಸಿಗಳಾದ ಐವರನ್ನು ಆರೋಪಿಗಳನ್ನು ಬಂಧಿದ್ದಾರೆ. 

ಈ ಬಗ್ಗೆ ಟ್ವೀಟ್(Tweet) ಮಾಡಿರುವ ಓವೈಸಿ ತನ್ನ ಮನೆ ಮೇಲೆ 'ಉಗ್ರವಾದಿ ಗೂಂಡಾ'ಗಳು ದಾಳಿ ನಡೆಸಿದ್ದಾರೆ. ಎಂದಿಂತೆ ಈ ಬಾರಿಯೂ ಗುಂಪಿನಲ್ಲೇ ಆಗಮಿಸಿ, ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ನಾನು ಮನೆಯಲ್ಲಿ ಇಲ್ಲದ ವೇಳೆ ಕೊಡಲಿ, ದೊಣ್ಣೆಯಿಂದ ದಾಳಿ ನಡೆಸಿದ್ದಾರೆ. ಕಲ್ಲುಗಳನ್ನೂ ಎಸೆದಿದ್ದಾರೆ ಎಂಧಿದ್ದಾರೆ.

Scroll to load tweet…

ಮನೆಗೆ ಹಾಕಿದ್ದ ನಾಮಫಲಕನ್ನು ಛಿದ್ರಗೊಳಿಸಿರುವ ಗೂಂಡಾಗಳು, ಮನೆಯಲ್ಲಿ ಕಳೆದ ನಲ್ವತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಆಳಿನ ಮೇಲೆ ಹಲ್ಲೆ ನಡೆಸಿದ್ದಾರೆ. ಕೋಮು ಪ್ರಚೋದಿತ ಘೋಷಣೆಗಳನ್ನು ಕೂಗುತ್ತಿದ್ದ ವರು ನನ್ನನ್ನ ಸಾಯಿಸುವ ಬೆದರಿಕೆ ಹಾಕಿದ್ದಾರೆ. ಇವರ ಈ ವರ್ತನೆಯಿಂದ ಮನೆಯಲ್ಲಿದ್ದ ಕೆಲಸದವನ ಮಗ ಭಯಭೀತನಾಗಿದ್ದಾಎ ಎಂದಿದ್ದಾರೆ.

ನನ್ನ ಮನೆಗೆ ಮೂರನೇ ಬಾರಿ ನಡೆಯುತ್ತಿರುವ ದಾಳಿ ಇದಾಗಿದೆ. ನನ್ನ ಮನೆ ಬಳಿ ಗೃಹ ಸಚಿವರ ನಿವಾಸವಿದೆ. ಪ್ರಧಾನ ಮಂತ್ರಿಗಳ ನಿವಾಸ ಕೇವಲ ಎಂಟು ನಿಮಿಷದಷ್ಟು ದೂರದಲ್ಲಿದೆ. ಸಂಸದನ ಮನೆಯೇ ಇಲ್ಲಿ ಸರಕ್ಷಿತವಾಗಿಲ್ಲ ಎಂದ ಮೇಲೆ ಜನ ಸಾಮಾನ್ಯರಿಗೆ ಭದ್ರತೆ ಕೊಡುವ ಬಗ್ಗೆ ನೀವು ಹೇಗೆ ಮಾತನಾಡುತ್ತೀರಿ ಎಂದು ಅಮಿತ್ ಶಾಗೆ ಪ್ರಶ್ನಿಸಿದ್ದಾರೆ ಓವೈಸಿ.