ರೈಲ್ವೆ ಕ್ರಾಸಿಂಗ್‌ನಲ್ಲಿ ಗೇಟ್ ಮುಚ್ಚದೆ ಅವಘಡ ಸಂಭವಿಸಿದೆ. ವಾಹನಕ್ಕೆ ರೈಲು ಡಿಕ್ಕಿಯಾಗಿ ಐವರು ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಶಹಜಹಾನ್‌ಪುರ (ಏ.23): ಮಾನವಸಹಿತವಾದ ರೈಲ್ವೆ ಕ್ರಾಸಿಂಗ್‌ನಲ್ಲಿ ಹಲವು ವಾಹನಗಳಿಗೆ ರೈಲೊಂದು ಡಿಕ್ಕಿ ಹೊಡೆದು ಐವರು ಸಾವನ್ನಪ್ಪಿದ ಹಾಗೂ ಓರ್ವ ಗಾಯಗೊಂಡ ದುರಂತ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ರೈಲ್ವೆ ಕ್ರಾಸಿಂಗ್ ಗೇಟ್‌ಗಳನ್ನು ಮುಚ್ಚದ ಕಾರಣಕ್ಕೆ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಲಖನೌ-ಚಂಡೀಗಢ ಸೂಪರ್‌ಫಾಸ್ಟ್ ರೈಲು ಗುರುವಾರ ಬೆಳಗ್ಗೆ ಮೀರನ್‌ಪುರ ಕಟ್ರಾ ರೈಲು ನಿಲ್ದಾಣದಿಂದ ಹೊರಟ ಬಳಿಕ ರೈಲ್ವೆ ಗೇಟ್ ಮುಚ್ಚಿರಲಿಲ್ಲ.
ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ರೈಲ್ವೇ ಸಿಬ್ಬಂದಿ: ಮೈ ಜುಮ್ಮೆನಿಸುವ ವಿಡಿಯೋ ವೈರಲ್! .
ಆಗ 2 ಟ್ರಕ್‌ಗಳು, ಒಂದು ಕಾರು ಮತ್ತು ಒಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ರೈಲು ಕೂಡ ಹಳಿ ತಪ್ಪಿದೆ. ಇದರಿಂದಾಗಿ 6 ಗಂಟೆಗಳ ಕಾಲ ಈ ಭಾಗದಲ್ಲಿ ರೈಲ್ವೆ ಸಂಚಾರ ಅಸ್ತವ್ಯಸ್ತವಾಗಿದೆ.
