Asianet Suvarna News Asianet Suvarna News

ಭಾರತದ ಶೇ.42ರಷ್ಟು ಯುವಕರು ನಿರುದ್ಯೋಗಿಗಳು; Bharat Jodo Yatraಯಲ್ಲಿ ರಾಹುಲ್ ಗಾಂಧಿ!

ಭಾರತ್ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಹೊಸ ಸಂಚಲನ ಸೃಷ್ಟಿಸಿದ್ದಾರೆ. ನಾಲ್ಕನೆ ದಿನವಾದ ಇಂದು ತಮಿಳುನಾಡಲ್ಲಿ ಹೆಜ್ಜೆ ಹಾಕಿದ ರಾಹುಲ್ ಭಾರತದ ನಿರುದ್ಯೋಗ ಸಮಸ್ಯೆ ಕುರಿತು ಮತ್ತೆ ಗುಡುಗಿದ್ದಾರೆ. 

42 percent of our youth are unemployed  Rahul gandhi ask Is India future secure if theirs isnt in bharat jodo yatra ckm
Author
First Published Sep 10, 2022, 4:58 PM IST

ತಮಿಳುನಾಡು(ಸೆ.10): ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾರತದ ರಾಜಕೀಯ ಇತಿಹಾಸದಲ್ಲಿ ಅತೀ ದೊಡ್ಡ ಯಾತ್ರೆಯನ್ನು ಕಾಂಗ್ರೆಸ್ ಆಯೋಜಿಸಿದೆ. ತಮಿಳುನಾಡಿಲ್ಲಿ ಚಾಲನೆ ನೀಡಿದ ಈ ಯಾತ್ರೆ ಇದೀಗ ಕೇರಳದತ್ತ ಸಾಗುತ್ತಿದೆ. ಸೆಪ್ಟೆಂಬರ್ 11ರ ವರೆಗೆ ತಮಿಳುನಾಡಿನ ಮೂಲಕ ಕೇರಳಕ್ಕೆ ಪ್ರವೇಶ ಪಡೆಯಲಿದೆ. ನಾಲ್ಕನೇ ದಿನವಾದ ಇಂದು ರಾಹುಲ್ ಗಾಂಧಿ ಭಾರತ ಯುವ ಸಮೂಹದ ಜೊತೆ ಹೆಜ್ಜೆ ಹಾಕಿದ್ದಾರೆ. ಉದ್ಯೋಗ ಸಮಸ್ಯೆ ಕುರಿತು ಬೆಳಕು ಚೆಲ್ಲಿದ್ದಾರೆ. ಭಾರತದ ಶೇಕಡಾ 42 ರಷ್ಟು ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಸಮಸ್ಯೆಯಿಂದ ಭಾರತದ ಭವಿಷ್ಯ ಸದೃಢವಾಗಿದೆಯಾ ಎಂದು ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.  ದೇಶದಲ್ಲಿ ಪ್ರತಿ ವರ್ಷ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ ಸರ್ಕಾ ಕೇವಲ ಘೋಷಣೆಗಳನ್ನು, ಪ್ರಕಟಣೆಗಳನ್ನು ಮಾತ್ರ ಮಾಡುತ್ತಿದೆ. ಯುವಕರಿಗೆ ಉದ್ಯೋಗ ಕೊಡಿಸುವ ಯಾವುದೇ ಕೆಲಸ ಮಾಡುತ್ತಿಲ್ಲ. ಇದು ಭವಿಷ್ಯದಲ್ಲಿ ಭಾರತವನ್ನು ಅಧಪತನದತ್ತ ಕೊಂಡೊಯ್ಯಲಿದೆ ಎಂದು ರಾಹುಲ್ ಗಾಂಧಿ ಎಚ್ಚರಿಸಿದ್ದಾರೆ. 

ಕಾರ್ಪೋರೇಟ್ ನೆರವು ನೀಡಲು ನೀತಿಗಳನ್ನು ರಚಿಸಲಾಗುತ್ತಿದೆ. ಉದ್ಯಮಿಗಳಿಗೆ ಪೂರಕವಾದಂತೆ ವಾತವಾರಣ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಉದ್ಯೋಗ ಅರಸಿ ಬರುವ ಯುವ ಸಮೂಹಕ್ಕೆ ಯಾವುದೇ ಅವಕಾಶಗಳು ಸಿಗುತ್ತಿಲ್ಲ. ಉದ್ಯೋಗ(Employment) ಸೃಷ್ಟಿಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ದೇಶದಲ್ಲಿ ಕೆಲಸಕ್ಕಾಗಿ ಅರಸುವ ಯುವ ಸಮೂಹ ಭಾರತ್ ಜೋಡೋ ಯಾತ್ರೆಯಲ್ಲಿ(bharat jodo yatra) ಹೆಜ್ಜೆ ಹಾಕುತ್ತಿದ್ದಾರೆ. ಈ ಹೆಜ್ಜೆ ಉತ್ತಮ ಭವಿಷ್ಯಕ್ಕಾಗಿ ಎಂದು ರಾಹುಲ್ ಗಾಂಧಿ(Rahul Gandhi) ಹೇಳಿದ್ದಾರೆ. 

Bharat Jodo Yatra: ಸೆ.30ಕ್ಕೆ ಭಾರತ ಐಕ್ಯತಾ ಯಾತ್ರೆ ಕರ್ನಾಟಕ ಪ್ರವೇಶ

ಭಾರತ್ ಜೋಡೋ ಯಾತ್ರೆಯಿಂದ(Congress) ಒಡೆದ ಮನಸ್ಸುಗಳು ಒಂದಾಗುತ್ತಿದೆ. ಬಿಜೆಪಿ(BJP) ಸಿದ್ಧಾಂತದಿಂದ ದೇಶದಲ್ಲಿ ಅಶಾಂತಿಯ ವಾತಾವರಣ, ಆತಂಕ ವಾತಾವರಣ ನಿರ್ಮಾಣವಾಗಿದೆ. ಸೌಹಾರ್ಧಯುತ ಜೀವನ ಮರೆಯಾಗುತ್ತಿದೆ. ಆದರೆ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆಯಿಂದ ಒಡೆದ ಮನಸ್ಸುಗಳು ಒಂದಾಗುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. 

 

 

‘ಭಾರತ್‌ ಜೋಡೋ’ ಪಾದಯಾತ್ರೆಯನ್ನು ಔಪಚಾರಿಕ ನೀಡಿದ್ದ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಇತರ ಮುಖಂಡರು ಗುರುವಾರ ಅಧಿಕೃತವಾಗಿ ಕಾಲ್ನಡಿಗೆ ಆರಂಭಿಸಿದ್ದಾರೆ. ಕನ್ಯಾಕುಮಾರಿಯ ಅಗಸ್ತೀಶ್ವರಂನಿಂದ ರಾಹುಲ್‌ ಹಾಗೂ ಅವರ ಜತೆ ಇಡೀ ಭಾರತದಾತ್ಯಂತ ಕಾಲ್ನಡಿಗೆಯಲ್ಲಿ ಸಾಗುವ 118 ಇತರ ಭಾರತೀಯರು ಹೆಜ್ಜೆ ಹಾಕಿದರು. ಈ ವೇಳೆ ಅವರು ಈ ಸ್ಥಳದಲ್ಲಿ ರಾಷ್ಟ್ರಧ್ವಜಾರೋಹಣವನ್ನೂ ಮಾಡಿದರು. 3,570 ಕಿ.ಮೀ.ನಷ್ಟುದೂರ ಸಾಗಿ ಕಾಶ್ಮೀರದಲ್ಲಿ 5 ತಿಂಗಳ ಬಳಿಕ ಯಾತ್ರೆ ಸಮಾಪ್ತಿಯಾಗಲಿದೆ.

ದ್ವೇಷದ ರಾಜಕೀಯಕ್ಕೆ ತಂದೆ ಕಳೆದುಕೊಂಡೆ, ನನ್ನ ಪ್ರೀತಿಯ ದೇಶ ಕಳೆದುಕೊಳ್ಳಲ್ಲ: Rahul Gandhi

ಭಾರತ್‌ ಜೋಡೋ; ಪೂರ್ವಭಾವಿ ಸಭೆ
 ರಾಹುಲ್‌ ಗಾಂಧಿಯವರ ನೇತೃತ್ವದ ಭಾರತ್‌ ಜೋಡೋ ಪಾದಯಾತ್ರೆಯು ಅಕ್ಟೊಬರ್‌ 11 ಮತ್ತು 12 ಕ್ಕೆ ಹಿರಿಯೂರು ಆಗಮಿಸುವ ಪ್ರಯುಕ್ತ ಭಾರತ್‌ ಜೋಡೋ ಕಾರ್ಯಕ್ರಮದ ಉಸ್ತುವಾರಿಗಳಾದ ಡಾ. ರಾಘವೇಂದ್ರರವರು ನಗರದ ಬ್ಲಾಕ್‌ ಕಾಂಗ್ರೆಸ್‌ ಕಚೇರಿಗೆ ಆಗಮಿಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಖಾದಿ ರಮೇಶ್‌, ಈರಲಿಂಗೇ ಗೌಡ, ಕೆಪಿಸಿಸಿ ಸದಸ್ಯ ಅಮೃತೇಶ್ವರ ಸ್ವಾಮಿ, ನಗರಸಭೆ ಅಧ್ಯಕ್ಷೆ ಶಿವರಂಜಿನಿ, ಉಪಾಧ್ಯಕ್ಷ ಗುಂಡೇಶ್‌ ಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಡಾ ಸುಜಾತಾ, ಸುರೇಖಾ ಮಣಿ, ರಜಿಯಾ ಸುಲ್ತಾನ್‌, ಜಿ ಎಲ್‌ ಮೂರ್ತಿ, ಚಂದ್ರಪ್ಪ, ಸಮೀವುಲ್ಲಾ, ಮಮತಾ, ಗೀತಾ ಮುಂತಾದವರು ಹಾಜರಿದ್ದರು.

Follow Us:
Download App:
  • android
  • ios