ಕಲ್ಲಿಕೋಟೆ(ಆ.08): ಕೇರಳ ವಿಮಾನ ದುರಂತ ಪ್ರಕರಣದಲ್ಲಿ ಪೈಲಟ್ ಸೇರಿ 20 ಮಂದಿ ಸಾವನ್ನಪ್ಪಿದ್ದು, 125 ಮಂದಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2010ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ವಿಮಾನ ದುರಂತವನ್ನು ನೆನಪಿಸಿದ ಈ ವಿಮಾನ ಅಪಘಾತಕ್ಕೆ ಸಂಬಂಧಿಸಿದಂತೆ ಮತ್ತೊಂದು ಬೆಳವಣಿಗೆ ವರದಿಯಾಗಿದೆ.

ಏನಿದು ಟೇಬಲ್‌ಟಾಪ್‌ ರನ್‌ವೇ? ಮಂಗಳೂರು ದುರಂತ ನೆನಪಿಸಿದ ಕಲ್ಲಿಕೋಟೆ ವಿಮಾನ ಅಪಘಾತ!

ಹೌದು ವಿಮಾನದಲ್ಲಿದ್ದ ನಲ್ವತ್ತು ಮಂದಿಗೆ ಕೊರೋನಾ ಸೋಂಕು ತಗುಲಿದೆ ಎನ್ನಲಾಗಿದೆ. ಈಗಾಗಲೇ ನಡೆದ ದುರಂತದ ಮಧ್ಯೆ ಪ್ರಯಾಣಿಕರಿಗೆ ಕೊರೋನಾ ಸೋಂಕು ತಗುಲಿರುವುದು ಗಾಯದ ಮೇಲೆ ಬರೆ ಎಳೆದಂತಿದೆ.

ಅಪಘಾತ ನಡೆದದ್ದೆಲ್ಲಿ? ಕಾರಣವೇನು?

ಕೇರಳದ ಕಲ್ಲಿಕೋಟೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 7.40ಕ್ಕೆ ವೇಳೆ ದುಬಬೈನಿಂದ ಬಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಐಎಕ್ಸ್‌ 1344 ವಿಮಾನ ಲ್ಯಾಂಡಿಂಗ್‌ ವೇಳೆ ಅಪಘಾತಕ್ಕೀಡಾಗಿತ್ತು. 

ವಿಮಾನ ದುರಂತ ಸಾವಿನ ಸಂಖ್ಯೆ 12ಕ್ಕೆ, ಪಿಣರಾಯಿ ಜತೆ ಮಾತನಾಡಿದ ಮೋದಿ

ಏನಾಯ್ತು?

ಮಂದ ಬೆಳಕು ಮತ್ತು ಭಾರೀ ಮಳೆಯ ಕಾರಣ ಲ್ಯಾಂಡಿಂಗ್‌ ವೇಳೆ ವಿಮಾನ ರನ್‌ವೇನಿಂದ ಜಾರಿ ಕಂದಕಕ್ಕೆ ಉರುಳಿ ಎರಡು ಹೋಳಾಗಿದೆ.