Asianet Suvarna News Asianet Suvarna News

ಕುಡಿದು ಹಳಿ ಮೇಲೆ ಸಂಚಾರ ವೇಳೆ ರೈಲು ಡಿಕ್ಕಿ: 4 ವಿದ್ಯಾರ್ಥಿಗಳ ಸಾವು!

ಕುಡಿದು ಹಳಿ ಮೇಲೆ ಸಂಚಾರ ವೇಳೆ ರೈಲು ಡಿಕ್ಕಿ| 4 ವಿದ್ಯಾರ್ಥಿಗಳ ಸಾವು| ಸಂಜೆ ಕಾಲೇಜು ಸಮೀಪದ ಬಾರ್‌ ಒಂದರಲ್ಲಿ ಮದ್ಯಪಾನ ಮಾಡಿ ರೈಲ್ವೇ ಟ್ರಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳು

4 Students Die In Tamil Nadu Coimbatore After Getting Hit By A Train
Author
Bangalore, First Published Nov 15, 2019, 8:03 AM IST
  • Facebook
  • Twitter
  • Whatsapp

ಕೊಯಮತ್ತೂರು[ನ.15]: ಕುಡಿದು ರೈಲ್ವೇ ಟ್ರಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ರೈಲು ಹರಿದ ಪರಿಣಾಮ ನಾಲ್ವರು ಸಾವನ್ನಪ್ಪಿದ ಘಟನೆ ಕೊಯಮತ್ತೂರು ಸಮೀಪದ ಇರ್‌ಗೂರ್‌ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಮೈಸೂರಿನಿಂದ ಚೆನ್ನೈಗೆ ಪ್ರಯಾಣ ಆರಂಭಿಸಲಿದೆ ಹೊಸ ವಿಮಾನ..!

ಐವರು ಕಾಲೇಜು ವಿದ್ಯಾರ್ಥಿಗಳು ಪಾನ ಮತ್ತರಾಗಿ ರೈಲ್ವೇ ಟ್ರಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿರುವಾಗ, ಮುಂಬದಿಯಿಂದ ಬಂದ ಆಲಪ್ಪುಳ-ಚೆನ್ನೈ ಎಕ್ಸ್‌ಪ್ರೆಸ್‌ ರೈಲನ್ನು್ನ ಗಮನಿಸದೇ ಹೋಗಿದ್ದರಿಂದ ಈ ಘಟನೆ ನಡೆದಿದೆ.

ಮಲೆನಾಡಿಗರಿಗೆ ಮತ್ತೊಂದು ಗುಡ್ ನ್ಯೂಸ್ : ಚೆನ್ನೈ, ತಿರುಪತಿಗೆ ನೇರ ರೈಲು

ಬುಧವಾರ ಸಂಜೆ ಕಾಲೇಜು ಸಮೀಪದ ಬಾರ್‌ ಒಂದರಲ್ಲಿ ಮದ್ಯಪಾನ ಮಾಡಿ ರೈಲ್ವೇ ಟ್ರಾಕ್‌ನಲ್ಲಿ ನಡೆದುಕೊಂಡು ಹೋಗುವ ವೇಳೆ ಘಟನೆ ನಡೆದಿದೆ. ಘಟನೆಯಲ್ಲಿ ನಾಲ್ವರು ಮೃತ ಪಟ್ಟಿದ್ದು, ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದಾನೆ. ವಿದ್ಯಾರ್ಥಿಗಳೆಲ್ಲರೂ 21-23 ವಯಸ್ಸಿನವರು ಎಂದು ತಿಳಿದು ಬಂದಿದೆ.

ಪೊಲೀಸ್‌ ಮಾಮನ ಕೈಗೆ ಸಿಕ್ಕೇಬಿಟ್ರು ತುಂಟ ಹುಡುಗೀರು

Follow Us:
Download App:
  • android
  • ios