Asianet Suvarna News Asianet Suvarna News

Covid Crisis: ದೇಶದಲ್ಲಿ ಕೊರೋನಾ ಭಾರೀ ಏರಿಕೆ: ಆತಂಕದಲ್ಲಿ ಜನತೆ..!

*  ಕೋವಿಡ್‌ ತೀವ್ರ ಏರಿಕೆ: 3712 ಕೇಸು
*  5 ಸಾವು, ಸಕ್ರಿಯ ಕೇಸು 19,509ಕ್ಕೇರಿಕೆ
*  ಪಾಸಿಟಿವಿಟಿ ದರ ಶೇ.0.84ಕ್ಕೆ ಏರಿಕೆ
 

3712 New Coronavirus Cases on June 2nd in India grg
Author
Bengaluru, First Published Jun 3, 2022, 4:36 AM IST

ನವದೆಹಲಿ(ಜೂ.03): ದೇಶದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಗುರುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 3712 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ.

ಇದೇ ವೇಳೆಯಲ್ಲಿ ಒಟ್ಟು 5 ಸೋಂಕಿತರು ಸಾವನ್ನಪ್ಪಿದ್ದಾರೆ. 5 ಸಾವುಗಳು ಕೇರಳದಲ್ಲೇ ವರದಿಯಾಗಿವೆ. ಸಕ್ರಿಯ ಸೋಂಕಿತರ ಸಂಖ್ಯೆಯು 19,509ಕ್ಕೆ ಏರಿಕೆಯಾಗಿದೆ. ಮಂಗಳವಾರ ಶೇ.0.6 ಇದ್ದ ದೈನಂದಿನ ಪಾಸಿಟಿವಿಟಿ ದರವು 0.84 ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.67 ರಷ್ಟಿದೆ. ಮಹಾರಾಷ್ಟ್ರದಲ್ಲಿ ಮಂಗಳವಾರ 3 ತಿಂಗಳ ದಾಖಲೆ ಎನ್ನಬಹುದಾದ 1000 ಪ್ರಕರಣ ದಾಖಲಾಗಿದ್ದು, ಇದು ಕೋವಿಡ್‌ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

Covid Crisis: ಕರ್ನಾಟಕದಲ್ಲಿ 300 ಗಡಿಗೆ ಕೊರೋನಾ ಕೇಸ್‌!

ಈ ನಡುವೆ, ದೇಶದಲ್ಲಿ ಕೋವಿಡ್‌ ಚೇತರಿಕೆ ದರ ಶೇ. 98.74ರಷ್ಟಿದೆ. ಈವರೆಗೆ ಕೋವಿಡ್‌ ಸೋಂಕಿಗೆ ತುತ್ತಾದವರ ಸಂಖ್ಯೆಯು 4,31,64,544ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಪ್ರಮಾಣ 5,24,641ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಇದುವರೆಗೆ 193.70 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.
 

Follow Us:
Download App:
  • android
  • ios