Asianet Suvarna News Asianet Suvarna News

ಒಂದೇ ಆಸ್ಪತ್ರೆಯ 37 ವೈದ್ಯರಿಗೆ ಕೊರೋನಾ ಪಾಸಿಟಿವ್ ದೃಢ..!

ಹೆಚ್ಚುತ್ತಿದೆ ಕೊರೋನಾ ಪ್ರಕರಣ | ಒಂದೇ ಆಸ್ಪತ್ರೆಯಲ್ಲಿ 37 ವೈದ್ಯರಿಗೆ ಕೊರೋನಾ ಪಾಸಿಟಿವ್

37 doctors test positive for Covid-19 at Delhis Sir Gangaram Hospital dpl
Author
Bangalore, First Published Apr 9, 2021, 5:14 PM IST

ದೆಹಲಿ(ಎ.09): ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಾಗಲೇ ದೆಹಲಿಯ ಶ್ರೀ ಗುರುಗ್ರಾಮ ಆಸ್ಪತ್ರೆಯಲ್ಲಿ 37 ವೈದ್ಯರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಆಸ್ಪತ್ರೆಯ 37 ವೈದ್ಯರಿಗೆ ಕೋವಿಡ್ -19 ಪಾಸಿಟಿವ್ ಬಂದಿದೆ.

ಇವರಲ್ಲಿ ಹೆಚ್ಚಿನವರಲ್ಲಿ ಸಣ್ಣಮಟ್ಟಿನ ಲಕ್ಷಣಗಳು ಕಂಡುಬಂದಿದೆ. 32 ವೈದ್ಯರು ಮನೆಯಲ್ಲೇ ಕ್ವಾರೆಂಟೈನ್ ಆಗಿದ್ದು 5 ಜನರನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ನೈಟ್ ಕರ್ಫ್ಯೂ: ಏನಿರುತ್ತೆ? ಏನಿಲ್ಲ? ಸರ್ಕಾರದಿಂದ ಮಾರ್ಗಸೂಚಿ ಪ್ರಕಟ

ದೆಹಲಿ ಸರ್ಕಾರವು 115 ಖಾಸಗಿ ಆಸ್ಪತ್ರೆಗಳಿಗೆ ತಮ್ಮ ಒಟ್ಟು ಐಸಿಯು ಮತ್ತು ವಾರ್ಡ್ ಬೆಡ್ ಸಾಮರ್ಥ್ಯವನ್ನು ಶೇ .50 ರಷ್ಟು ಕೋವಿಡ್ -19 ರೋಗಿಗಳಿಗೆ ಕಾಯ್ದಿರಿಸುವಂತೆ ಆದೇಶ ಹೊರಡಿಸಿದೆ.

ಕೋವಿಡ್ -19 ರೋಗಿಗಳಿಗೆ ಮೀಸಲಾಗಿರುವ ಒಟ್ಟು ಹಾಸಿಗೆಗಳ ಸಂಖ್ಯೆಯನ್ನು ಪ್ರಸ್ತುತ ಲೋಕ ನಾಯಕ ಆಸ್ಪತ್ರೆಯಲ್ಲಿ 1000 ರಿಂದ 1500 ಕ್ಕೆ ಮತ್ತು ಜಿಟಿಬಿ ಆಸ್ಪತ್ರೆಯಲ್ಲಿ 500 ರಿಂದ 1000 ಕ್ಕೆ ಹೆಚ್ಚಿಸಲು ದೆಹಲಿ ಸರ್ಕಾರ ಆದೇಶಿಸಿದೆ. ದೆಹಲಿಯ ಕೋವಿಡ್ -19 ಆಸ್ಪತ್ರೆಗಳಲ್ಲಿ ಡೆಂಟಲ್ ಮತ್ತು ಆಯುಷ್ ವೈದ್ಯರನ್ನು ನಿಯೋಜಿಸುವಂತೆ ಅದು ಆದೇಶಿಸಿದೆ.

Follow Us:
Download App:
  • android
  • ios