ಕರ್ನಾಟಕದಲ್ಲಿ ನೈಟ್ ಕರ್ಫ್ಯೂ: ಏನಿರುತ್ತೆ? ಏನಿಲ್ಲ? ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
ಕೋವಿಡ್ 19 ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಬೆಂಗಳೂರು, (ಏ.09): ಕರ್ನಾಟಕದಲ್ಲಿ ಕೊರೋನಾ ಎರಡನೇ ಜೋರಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೆಲ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಿದೆ.
ಕೊರೋನಾ; ರಾಜ್ಯದ 8 ಕಡೆ ಏ. 10ರಿಂದ ನೈಟ್ ಕರ್ಫ್ಯೂ, ಅಧಿಕೃತ ಆದೇಶ
ರಾಜ್ಯ ಸರ್ಕಾರ ಕೊರೋನಾ ಸೋಂಕಿತ 8 ನಗರಗಳಲ್ಲಿ ನೈಟ್ ಕರ್ಪ್ಯೂ ಅನ್ನು ಏಪ್ರಿಲ್ 10ರಿಂದ ಜಾರಿಗೊಳಿಸಿ ಆದೇಶಿಸಿದೆ. ಬೆಂಗಳೂರು, ಮೈಸೂರು, ಮಂಗಳೂರು,ಕಲಬುರಗಿ, ಬೀದರ್ ,ತುಮಕೂರು, ಉಡುಪಿ, ಮಣಿಪಾಲ್‌ಗೆ ಜಿಲ್ಲಾ ಕೇಂದ್ರಕ್ಕೆ ನೈಟ್ ಕರ್ಫ್ಯೂ ಅನ್ವಯವಾಗಲಿದೆ.
ನೈಟ್ ಕರ್ಪ್ಯೂ ಯಾವ ರೀತಿಯಲ್ಲಿ ಜಾರಿಗೆ ತರಬೇಕು? ಯಾವೆಲ್ಲಾ ಕೊರೋನಾ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು? ಎನ್ನುವ ಬಗ್ಗೆ ಹೊಸ ನೈಟ್ ಕರ್ಫ್ಯೂ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಿದೆ. ಅದು ಈ ಕೆಳಗಿನಂತಿದೆ.
ನೈಟ್ ಕರ್ಫ್ಯೂ ಮಾರ್ಗಸೂಚಿ ಇಂತಿದೆ
1. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಸಂಚಾರಕ್ಕೆ ಅವಕಾಶ
2. ಅನಾರೋಗ್ಯಗೊಂಡವರ ಸಹಾಯಕರಿಗೂ ಸಂಚಾರಕ್ಕೆ ಅನುಮತಿ
3. ರಾತ್ರಿ ಪಾಳಿಯ ಕಾರ್ಖಾನೆ, ಕಂಪನಿಗೆ ಅನುಮತಿ
4. ನೈಟ್ ಕರ್ಫ್ಯೂಗಿಂತ ಮೊದಲೇ ಕಚೇರಿಗೆ ಹಾಜರು ಕಡ್ಡಾಯ
5. ವೈದ್ಯಕೀಯ, ತುರ್ತು ಸೇವೆಗೆ ಅವಕಾಶ
6. ಎಲ್ಲಾ ವಾಣಿಜ್ಯ ಚಟುವಟಿಕೆಗೆ ನಿರ್ಬಂಧ
7. ಅಗತ್ಯ ಸೇವೆ ಒದಗಿಸುವ ವಾಹನಕ್ಕೆ ಅನುಮತಿ
8. ಸರಕುಸಾಗಣೆ ವಾಹನ ಓಡಾಟಕ್ಕೆ ಅವಕಾಶ
9. ಫುಡ್ ಹೋಂ ಡೆಲಿವರಿಗೆ ಅನುಮತಿ
10. ಇ-ಕಾಮರ್ಸ್, ಖಾಲಿ ವಾಹನ ಸಂಚಾರಕ್ಕೆ ಅವಕಾಶ
11. ದೂರ ಪ್ರಯಾಣದ ಬಸ್ಗಳಿಗೆ ಅನುಮತಿ
12. ರೈಲು, ವಿಮಾನ ಪ್ರಯಾಣಕ್ಕೂ ಅವಕಾಶ
13. ಮನೆ-ನಿಲ್ದಾಣಗಳ ನಡುವೆ ಪ್ರಯಾಣಿಸಲು ಅವಕಾಶ
14. ಆಟೋ, ಕ್ಯಾಬ್ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅವಕಾಶ
15. ಟಿಕೆಟ್ ತೋರಿಸಿ ಸಂಚಾರಕ್ಕೆ ಅನುಮತಿ
16. ನೈಟ್ಕರ್ಪ್ಯೂ ವೇಳೆ ಬಾರ್, ಪಬ್ ಬಂದ್
17. ಲೇಟ್ನೈಟ್ ಪಾರ್ಟಿ, ಸಮಾರಂಭಗಳಿಗೆ ಬ್ರೇಕ್
18. ಎಲ್ಲಾ ಫುಡ್ ಸ್ಟ್ರೀಟ್ಗಳು ಬಂದ್
ಮಾರ್ಗಸೂಚಿ ಬಗ್ಗೆ ಸುಧಾಕರ್ ಪ್ರತಿಕ್ರಿಯೆ
ಕೊರೋನಾ ಕರ್ಫ್ಯೂ ಮಾರ್ಗಸೂಚಿ ಪ್ರಕಟದ ಬಗ್ಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಅಗತ್ಯ ಸೇವೆಗಳಿಗೆ ಅಡಚಣೆ ಇಲ್ಲ. ರಾತ್ರಿ ಪಾಳಿ ಕೆಲಸ ಮಾಡೋರಿಗೆ ತೊಂದರೆ ಇಲ್ಲ. ಅನಗತ್ಯ ಓಡಾಟ ಮಾಡಬಾರದು. ರಾತ್ರಿ ವೇಳೆ ಮಸ್ತಿ, ಮಜಾ ಮಾಡೋದಕ್ಕೆ ನಿರ್ಬಂಧಿಸಲಾಗಿದೆ. ಅಪಾರ್ಟ್ ಮೆಂಟ್ ಗಳಲ್ಲಿ ತಡ ರಾತ್ರಿ ಪಾರ್ಟಿಗಳು ಮಾಡುವಂತಿಲ್ಲ ಎಂದು ಹೇಳಿದರು.
ಇನ್ನು ರಾತ್ರಿ ಹೊತ್ತು ಮಾತ್ರ ಕೊರೋನಾ ಇರುತ್ತಾ ಅಂತ ಕೆಲವರು ಟೀಕಿಸ್ತಾರೆ. ಕೊರೋನಾ ರಾತ್ರಿಹೊತ್ತೂ ಇರುತ್ತೆ, ಹಗಲು ಹೊತ್ತೂ ಇರುತ್ತೆ.. ಈ ಅರಿವು ಸರ್ಕಾರಕ್ಕೆ ಇದೆ. ಎಲ್ಲ ಇಲಾಖೆಗಳ ಸಮನ್ವಯತೆ ಜೊತೆಗೆ ಮಾರ್ಗಸೂಚಿಗಳ ಜಾರಿ ಮಾಡುತ್ತಿದ್ದೇವೆ. ಕೊರೋನಾ ಬಗ್ಗೆ ಜನರಿಗೆ ಗಂಭೀರತೆ ಬರಲಿ, ಅರಿವು ಬರಲಿ ಅಂತ ಕೊರೋನಾ ಕರ್ಫ್ಯೂ ಜಾರಿ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
"