ಭಾರತದಲ್ಲಿ 3500 ಟನ್ ಚಿನ್ನದ ನಿಕ್ಷೇಪ ಏನಿದರ ಹಕೀಕತ್ತು!?
3500 ಟನ್ ಚಿನ್ನದ ನಿಕ್ಷೇಪ ಪತ್ತೆ!| ಇದುವರೆಗೆ ಭಾರತದಲ್ಲಿ ಪತ್ತೆಯಾಗಿರುವ ಒಟ್ಟು ಚಿನ್ನದ ನಿಕ್ಷೇಪ (626 ಟನ್)ಕ್ಕಿಂತ 5 ಪಟ್ಟು ಹೆಚ್ಚು/ ಮಾಧ್ಯಮಗಳ ವರದಿ ತಿರಸ್ಕರಿಸಿದ ಜಿಯಾಲೋಜಿಕಲ್ ಸರ್ವೆ ವಿಭಾಗ/ ಯಾವ ಚಿನ್ನದ ನಿಕ್ಷೇಪವೂ ಇಲ್ಲ
ಲಖನೌ[ಫೆ.22]: ಉತ್ತರಪ್ರದೇಶ ಸೋನ್‌ಭದ್ರಾ ಜಿಲ್ಲೆಯಲ್ಲಿ ಭರ್ಜರಿ 3500 ಟನ್‌ಗಳಷ್ಟುಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಇದು ಇದುವರೆಗೆ ಭಾರತದಲ್ಲಿ ಪತ್ತೆಯಾಗಿರುವ ಒಟ್ಟು ಚಿನ್ನದ ನಿಕ್ಷೇಪ (626 ಟನ್)ಕ್ಕಿಂತ 5 ಪಟ್ಟು ಹೆಚ್ಚು ಎಂಬುದು ನಿಕ್ಷೇಪ.
ಗುದನಾಳದಲ್ಲಿ 58 ಲಕ್ಷ ಮೌಲ್ಯದ ಚಿನ್ನ ಸಾಗಾಟ
ಭೂಗರ್ಭಶಾಸ್ತ್ರಜ್ಞರು ಸುಮಾರು 2 ದಶಕಗಳ ಸತತ ಸಂಶೋಧನೆ ಬಳಿಕ ಇಷ್ಟುದೊಡ್ಡ ಪ್ರಮಾಣದ ಚಿನ್ನದ ನಿಕ್ಷೇಪ ಇರುವ ಬಗ್ಗೆ ಖಚಿತಪಡಿಸಲಾಗಿದೆ. ಈ ಚಿನ್ನದ ಗಣಿಯನ್ನು ಗುತ್ತಿಗೆ ನೀಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
ಜಿಲ್ಲೆಯ ಹರ್ದಿ ಮತ್ತು ಮಹೌಲಿ ಗ್ರಾಮದಲ್ಲಿ ಈ ಚಿನ್ನದ ನಿಕ್ಷೇಪಗಳು ಪತ್ತೆಯಾಗಿವೆ. ಜೊತೆಗೆ ಇವು ಆಳ ಪ್ರದೇಶದ ಬದಲಾಗಿ ಬೆಟ್ಟಗಳಲ್ಲೇ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಗಣಿಗಾರಿಕೆಯೂ ಸುಲಭ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಈ ಎಲ್ಲ ವಿಚಾರವನ್ನು ಭೂವೈಜ್ಞಾನಿಕ ವಿಭಾಗ ತಿರಸ್ಕರಿಸಿದ್ದು ಇಂಥ ಯಾವುದೇ ನಿಕ್ಷೇಪ ಸಿಕ್ಕಿಲ್ಲ ಎಂದು ಅಧಿಕೃತವಾಗಿ ತಿಳಿಸಿದೆ.
ವ್ಯಾಪಾರಿಯೇ ಚಿನ್ನವನ್ನು ಠಾಣೆಗೆ ತಂದೊಪ್ಪಿಸಿದ..!