Asianet Suvarna News Asianet Suvarna News

Covid 19 Threat: ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ, ಮೂರೇ ದಿನದಲ್ಲಿ ಕೇಸು ಡಬಲ್‌!

*ಸೋಂಕಿನ ಪ್ರಮಾಣದಲ್ಲಿ ಭಾರೀ ಏರಿಕೆ
*33750 ಕೋವಿಡ್‌ ಕೇಸು: 123 ಜನರ ಸಾವು
*3.5 ತಿಂಗಳ ಗರಿಷ್ಠ ತಲುಪಿದ ದೈನಂದಿನ ಪ್ರಕರಣ
*ಮತ್ತೆ 175 ಜನರಲ್ಲಿ ಒಮಿಕ್ರೋನ್‌ ಪತ್ತೆ
*ಪೀಡಿತರ ಸಂಖ್ಯೆ 1700ಕ್ಕೇರಿಕೆ
 

33750 New Cases 123 Covid 19 Deaths reported in India on Monday mnj
Author
Bengaluru, First Published Jan 4, 2022, 5:50 AM IST

ನವದೆಹಲಿ (ಜ.4): ನಿರೀಕ್ಷೆಯಂತೆಯೇ ಒಮಿಕ್ರೋನ್‌ ಭಾರತದಲ್ಲೂ (Omicron Variant) ತನ್ನ ಪ್ರಚಂಡ ವೇಗವನ್ನು ಮುಂದುವರೆಸಿದ್ದು ಭಾರೀ ಪ್ರಮಾಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಗೆ ಕಾರಣವಾಗಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯಗೊಂಡ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 33750 ಜನರಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದ್ದು, 123 ಜನರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸೋಂಕಿತರ ಪ್ರಮಾಣ ಕೇವಲ ಮೂರು ದಿನದಲ್ಲಿ ಡಬಲ್‌ ಆದಂತಾಗಿದೆ. ಶುಕ್ರವಾರ 16764 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, ಸೋಮವಾರ ಅದು 33750ಕ್ಕೆ ತಲುಪಿದೆ. ಜೊತೆಗೆ ದೈನಂದಿನ ಪ್ರಕರಣ ಸಂಖ್ಯೆ ಮೂರೂವರೆ ತಿಂಗಳಲ್ಲೇ ಗರಿಷ್ಠ ಮಟ್ಟಮುಟ್ಟಿದಂತೆ ಆಗಿದೆ. ಈ ಹಿಂದೆ ಸೆ.17ರಂದು 34,403 ಕೇಸು ದಾಖಲಾಗಿದ್ದು, ಈ ಹಿಂದಿನ ದೈನಂದಿನ ಗರಿಷ್ಠವಾಗಿತ್ತು.

ಇದೇ ವೇಳೆ ಸಕ್ರಿಯ ಸೋಂಕಿತೆ ಸಂಖ್ಯೆ ಒಂದೇ ದಿನದಲ್ಲಿ 23 ಸಾವಿರದಷ್ಟುಹೆಚ್ಚಿದ್ದು, ಅದರ ಪ್ರಮಾಣ 1.45ಲಕ್ಷಕ್ಕೆ ಮುಟ್ಟಿದೆ.ಸೋಮವಾರದ ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3.49 ಕೋಟಿಗೆ ಮತ್ತು ಸಾವಿನ ಪ್ರಮಾಣ 4.81 ಲಕ್ಷ ಮುಟ್ಟಿದೆ. ಸಕ್ರಿ ದೈನಂದಿನ ಪಾಸಿಟಿವಿಟಿ ದರ ಶೇ.3.84 ಮತ್ತು ವಾರದ ಪಾಸಿಟಿವಿಟಿ ದರ ಶೇ.1.68ರಷ್ಟಿದೆ.

"

175 ಒಮಿಕ್ರೋನ್‌ ಕೇಸು:

ಈ ನಡುವೆ ಸೋಮವಾರ 175 ಜನರಲ್ಲಿ ಒಮಿಕ್ರೋನ್‌ ವೈರಸ್‌ ಪತ್ತೆಯಾಗಿದೆ. ಇದರೊಂದಿಗೆ ಹೊಸ ರೂಪಾಂತರಿಗೆ ತುತ್ತಾದವರ ಸಂಖ್ಯೆ 1700 ತಲುಪಿದೆ. ಮಹಾರಾಷ್ಟ್ರದಲ್ಲಿ 510, ದೆಹಲಿ 351, ಕೇರಳ 156, ಗುಜರಾತ್‌ 136, ತಮಿಳುನಾಡು 121, ರಾಜಸ್ಥಾನದಲ್ಲಿ 120 ಕೇಸು ದಾಖಲಾಗಿದೆ.

ದಿಲ್ಲಿ ಹೊಸ ಕೇಸುಗಳಲ್ಲಿ ಒಮಿಕ್ರೋನ್‌ ಪಾಲು ಶೇ.81!

ದೆಹಲಿಯಲ್ಲಿ ಜಿನೋಮ್‌ ಸೀಕ್ವೆನ್ಸಿಂಗ್‌ಗೆ ಒಳಪಡಿಸಿದ ಕೊರೋನಾ ಸೋಂಕಿತರ ಮಾದರಿ ಪೈಕಿ ಶೇ.81ರಷ್ಟುಪ್ರಕರಣಗಳು ರೂಪಾಂತರಿ ಒಮಿಕ್ರೋನ್‌ ವೈರಸ್‌, ಶೇ.8.5ರಷ್ಟುಡೆಲ್ಟಾಮತ್ತು 11.5ರಷ್ಟುಇತರೆ ಎಂದು ಖಚಿತಪಟ್ಟಿದೆ. ಇದರೊಂದಿಗೆ ಜೊತೆಗೆ, ರಾಜಧಾನಿಯಲ್ಲಿ ಸೋಂಕು ಏರಿಕೆಗೆ ಏರಿಕೆಗೆ ಒಮಿಕ್ರೋನ್‌ ಕಾರಣ ಎಂದು ಸಾಬೀತಾಗಿದೆ.

ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಕೊರೋನಾ ಭಾರಿ ಹೆಚ್ಚಳ, ಹೀಗೆ ಮುಂದುವರಿದ್ರೆ ಲಾಕ್‌ ಫಿಕ್ಸ್!

187 ಮಾದರಿ ಪರೀಕ್ಷೆಯಲ್ಲಿ 152 ಕೇಸು ಒಮಿಕ್ರೋನ್‌ ಸೋಂಕಿತರದ್ದಾಗಿದೆ. ಆದರೆ ಈ ಪೈಕಿ ಯಾವುದೇ ಸೋಂಕಿತರೂ ಆಕ್ಸಿಜನ್‌ ವ್ಯವಸ್ಥೆಯ ಅಗತ್ಯ ಎದುರಿಸಿಲ್ಲ. ದೆಹಲಿಯಲ್ಲಿ 8000 ಸಕ್ರಿಯ ಕೇಸುಗಳಿದ್ದು, ಆಸ್ಪತ್ರೆಗಳಲ್ಲಿನ 9024 ಬೆಡ್‌ ಪೈಕಿ ಶೇ.3.4ರಷ್ಟುಮಾತ್ರವೇ ಭರ್ತಿಯಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ.

ಭಾರೀ ಕೇಸು ಹೆಚ್ಚಳ:

ಖಾಸಗಿ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ ಡಾ.ಎನ್‌.ಕೆ.ಅರೋರಾ, ‘ಭಾರತದಲ್ಲಿ ಒಮಿಕ್ರೋನ್‌ ಮೊದಲ ಬಾರಿಗೆ ಪತ್ತೆಯಾಗಿದ್ದು ಡಿಸೆಂಬರ್‌ ಮೊದಲ ವಾರದಲ್ಲಿ. ಕಳೆದ ವಾರ ದೇಶಾದ್ಯಂತ ನಡೆಸಲಾದ ಜಿನೋಮ್‌ ಸೀಕ್ವೆನ್ಸಿಂಗ್‌ನಲ್ಲಿ ಒಮಿಕ್ರೋನ್‌ ಪಾಲು ಶೇ.12ಕ್ಕೆ ಏರಿತ್ತು. ನಂತರದ ವಾರದಲ್ಲಿ ಅದರ ಪ್ರಮಾಣ ಶೇ.28ನ್ನು ತಲುಪಿದೆ. ಅಂದರೆ ಕೋವಿಡ್‌ ಸೋಂಕಿತರ ಪ್ರಮಾಣ ಹೆಚ್ಚಿದಂತೆ ಅವರಲ್ಲಿ ಒಮಿಕ್ರೋನ್‌ನಿಂದಾಗಿ ಸೋಂಕಿಗೆ ತುತ್ತಾದವರ ಪ್ರಮಾಣವೂ ಹೆಚ್ಚಾಗಿದೆ. ಇನ್ನು ದೇಶದಲ್ಲಿ ಒಟ್ಟಾರೆ ಪತ್ತೆಯಾದ ಒಮಿಕ್ರೋನ್‌ ಪ್ರಕರಣಗಳಲ್ಲಿ ಶೇ.75ರಷ್ಟುಪಾಲು ಮೆಟ್ರೋ ನಗರಗಳಾದ ದೆಹಲಿ, ಮುಂಬೈ ಮತ್ತು ಕೋಲ್ಕತಾಕ್ಕೆ ಸೇರಿವೆ’ ಎಂದಿದ್ದಾರೆ.

ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಕೊರೋನಾ ಭಾರಿ ಹೆಚ್ಚಳ, ಹೀಗೆ ಮುಂದುವರಿದ್ರೆ ಲಾಕ್‌ ಫಿಕ್ಸ್!

‘ಈ ಎಲ್ಲಾ ಅಂಶಗಳು ಸ್ಪಷ್ಟವಾಗಿ ದೇಶ 3ನೇ ಅಲೆಗೆ ತುತ್ತಾಗಿದೆ ಎಂಬುದನ್ನು ಹೇಳುತ್ತಿವೆ. ಜೊತೆಗೆ ಈ ಅಲೆಗೆ ಹೊಸ ಮಾದರಿಯಾದ ಒಮಿಕ್ರೋನ್‌ ಕಾರಣ ಎಂಬುದೂ ಸಾಬೀತಾಗಿದೆ. ಕಳೆದ 4-5 ದಿನಗಳ ಹೊಸ ಕೇಸಿನ ಅಂಕಿ ಅಂಶಗಳು ಇದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದೆ’ ಎಂದು ಅರೋರಾ ಹೇಳಿದ್ದಾರೆ.

Follow Us:
Download App:
  • android
  • ios