Asianet Suvarna News Asianet Suvarna News

ವಕ್ಫ್‌ ತಿದ್ದುಪಡಿ ಮಸೂದೆ ಜೆಪಿಸಿಗೆ 31 ಸದಸ್ಯರ ತಂಡ, ತೇಜಸ್ವಿ ಸೂರ್ಯ, ಡಾ. ವೀರೇಂದ್ರ ಹೆಗ್ಗಡೆ, ನಾಸಿರ್‌ ಹುಸೇನ್‌ಗೆ ಸ್ಥಾನ

WaqF JPC Members ವಕ್ಫ್‌ ಕಾನೂನಿಗೆ ತಿದ್ದುಪಡಿ ತರುವ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಗಿದೆ. ಇದಕ್ಕಾಗಿ ಲೋಕಸಭೆ 31 ಸದಸ್ಯರ ತಂಡವನ್ನು ರಚಿಸಿದ್ದು, ಇದರಲ್ಲಿ ರಾಜ್ಯಸಭೆಯ 10 ಸಂಸದರು ಕೂಡ ಸೇರಿದ್ದಾರೆ.
 

31 member JPC for Wakf Amendment Bill Tejasvi Surya Veerendra Hegde Got Place san
Author
First Published Aug 9, 2024, 10:31 PM IST | Last Updated Aug 9, 2024, 10:31 PM IST

ನವದೆಹಲಿ (ಆ.9): ವಕ್ಫ್ ತಿದ್ದುಪಡಿ ಮಸೂದೆಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸುವ ಪ್ರಸ್ತಾವನೆಯನ್ನು ಲೋಕಸಭೆ ಶುಕ್ರವಾರ (ಆಗಸ್ಟ್ 9) ಅಂಗೀಕರಿಸಿದೆ. ಈ ಸಮಿತಿಯು 31 ಸದಸ್ಯರನ್ನು ಹೊಂದಿರಲಿದೆ. ಇದು ಲೋಕಸಭೆಯಿಂದ 21 ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಹೊಂದಿರುತ್ತದೆ. ಸಂಸತ್ತಿನ ಮುಂದಿನ ಅಧಿವೇಶನದ ಮೊದಲ ವಾರದಲ್ಲಿ ಸಮಿತಿಯು ತನ್ನ ವರದಿಯನ್ನು ಸಲ್ಲಿಕೆ ಮಾಡಲಿದೆ. ಸಂಸದೀಯ ವ್ಯವಹಾರಗಳು ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಲೋಕಸಭೆಯಲ್ಲಿ ಮಸೂದೆಯನ್ನು ಜೆಪಿಸಿಗೆ ಕಳುಹಿಸಲು ಪ್ರಸ್ತಾಪ ಮಾಡಿದರು. ರಿಜಿಜು ಅವರು ವಕ್ಫ್ ಮಸೂದೆ 2024 ಅನ್ನು ಲೋಕಸಭೆಯಲ್ಲಿ ಒಂದು ದಿನ ಮುಂಚಿತವಾಗಿ ಅಂದರೆ ಗುರುವಾರ, ಆಗಸ್ಟ್ 8 ರಂದು ಮಂಡಿಸಿದ್ದರು. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಸೇರಿದಂತೆ ವಿರೋಧ ಪಕ್ಷಗಳು ಈ ಮಸೂದೆಯನ್ನು ವಿರೋಧಿಸಿದವು ಮತ್ತು ಅದನ್ನು ಮುಸ್ಲಿಂ ವಿರೋಧಿ ಎಂದು ಕರೆದವು. ಪ್ರತಿಪಕ್ಷಗಳ ಆಕ್ಷೇಪ ಮತ್ತು ತೀವ್ರ ಪ್ರತಿಭಟನೆಯ ನಡುವೆಯೇ ಈ ಮಸೂದೆಯನ್ನು ಲೋಕಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಜೆಪಿಸಿಗೆ ಕಳುಹಿಸಲಾಯಿತು.

ಲೋಕಸಭೆಯಿಂದ ಜೆಪಿಸಿಗೆ 21 ಸದಸ್ಯರು: ಬಿಜೆಪಿಯಿಂದ 7 ಕಾಂಗ್ರೆಸ್‌ನಿಂದ 3: ಲೋಕಸಭೆಯಿಂದ ಜೆಪಿಸಿಗೆ 21 ಸದಸ್ಯರನ್ನು ಸೂಚಿಸಲಾಗಿದೆ. ಇದರಲ್ಲಿ ಬಿಜೆಪಿಯ 7 ಹಾಗೂ ಕಾಂಗ್ರೆಸ್‌ನ 3 ಮಂದಿ ಸದಸ್ಯರಿದ್ದಾರೆ. ಇದರಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸತ ತೇಜಸ್ವಿ ಸೂರ್ಯ ಕೂಡ ಸ್ಥಾನ ಪಡೆದಿದ್ದಾರೆ.  1. ಜಗದಾಂಬಿಕಾ ಪಾಲ್ (ಬಿಜೆಪಿ) 2. ನಿಶಿಕಾಂತ್ ದುಬೆ (ಬಿಜೆಪಿ) 3. ತೇಜಸ್ವಿ ಸೂರ್ಯ (ಬಿಜೆಪಿ) 4. ಅಪರಾಜಿತಾ ಸಾರಂಗಿ (ಬಿಜೆಪಿ) 5. ಸಂಜಯ್ ಜೈಸ್ವಾಲ್ (ಬಿಜೆಪಿ) 6. ದಿಲೀಪ್ ಸೈಕಿಯಾ (ಬಿಜೆಪಿ) 7. ಅಭಿಜಿತ್ ಗಂಗೋಪಾಧ್ಯಾಯ 8 ಶ್ರೀಮತಿ ಡಿಕೆ ಅರುಣಾ (ವೈಎಸ್‌ಆರ್‌ಸಿಪಿ) 9. ಗೌರವ್ ಗೊಗೊಯ್ (ಕಾಂಗ್ರೆಸ್) 10. ಇಮ್ರಾನ್ ಮಸೂದ್ (ಕಾಂಗ್ರೆಸ್) 11. ಮೊಹಮ್ಮದ್ ಜಾವೇದ್ (ಕಾಂಗ್ರೆಸ್) 12. ಮೌಲಾನಾ ಮೊಹಿಬುಲ್ಲಾ (ಎಸ್‌ಪಿ) 13. ಕಲ್ಯಾಣ್ ಬ್ಯಾನರ್ಜಿ (ಟಿಎಂಸಿ) 14. ಎ ರಾಜಾ (ಡಿಎಂಕೆ) ಎಲ್.ಎಸ್.ದೇವರಾಯು (ಟಿಡಿಪಿ) 16. ದಿನೇಶ್ವರ್ ಕಾಮತ್ (ಜೆಡಿಯು) 17. ಅರವಿಂದ್ ಸಾವಂತ್ (ಶಿವಸೇನೆ, ಉದ್ಧವ್ ಬಣ) 18. ಸುರೇಶ್ ಗೋಪಿನಾಥ್ (ಎನ್‌ಸಿಪಿ, ಶರದ್ ಪವಾರ್) 19. ನರೇಶ್ ಗಣಪತ್ ಮ್ಹಾಸ್ಕೆ (ಶಿವಸೇನೆ, ಶಿಂಧೆ ಬಣ) 20. (LJP-R) 21. ಅಸಾದುದ್ದೀನ್ ಓವೈಸಿ (AIMIM)

ರಾಜ್ಯಸಭೆಯಿಂದ 10 ಮಂದಿ ಸದಸ್ಯರನ್ನು ಸೂಚಿಸಲಾಗಿದ್ದು, ಬಿಜೆಪಿಯ 4 ಹಾಗೂ ಕಾಂಗ್ರೆಸ್‌ ಒಬ್ಬ ಸದಸ್ಯರಿದ್ದಾರೆ. ಬಿಜೆಪಿಯ,  ಬ್ರಿಜ್ ಲಾಲ್, ಡಾ. ಮೇಧಾ ವಿಶ್ರಮ ಕುಲಕರ್ಣಿ, ಗುಲಾಂ ಅಲಿ, ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್, ಕಾಂಗ್ರೆಸ್‌ನ ಸೈಯದ್ ನಸೀರ್ ಹುಸೇನ್, ಟಿಎಂಸಿಯ ಮೊಹಮ್ಮದ್ ನದೀಮ್ ಉಲ್ ಹಕ್, ವೈಎಸ್‌ಆರ್‌ಸಿಪಿಯ ವಿ ವಿಜಯಸಾಯಿ ರೆಡ್ಡಿ, ಡಿಎಂಕೆಯ ಎಂ. ಮೊಹಮ್ಮದ್ ಅಬ್ದುಲ್ಲಾ, ಆಪ್‌ನ ಸಂಜಯ್ ಸಿಂಗ್, ರಾಷ್ಟ್ರಪತಿ ನಾಮ ನಿರ್ದೇಶಿತ ಸಂಸದ ಡಾ.ವೀರೇಂದ್ರ ಹೆಗ್ಗಡೆ ಇದ್ದಾರೆ.

ವಕ್ಫ್ ಬೋರ್ಡ್‌ ಪರಮಾಧಿಕಾರಕ್ಕೆ ಮೋದಿ ಅಂಕುಶ! ಈ ತನಕ ಇದ್ದ ಕಾನೂನು ಏನು..? ಈಗ ಬದಲಾಗೋದೇನು..?

ವಕ್ಫ್ ಕಾನೂನು (ತಿದ್ದುಪಡಿ) ಮಸೂದೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಆಗಸ್ಟ್ 8 ರಂದು ಲೋಕಸಭೆಯಲ್ಲಿ ಮಂಡಿಸಿದರು. ಅದೇ ದಿನ, ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು. ಹಲವು ವಿರೋಧ ಪಕ್ಷದ ಸಂಸದರು ಈ ಮಸೂದೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ರಿಜಿಜು ಹೇಳಿದರು. ಅವರು ಪ್ರತ್ಯೇಕವಾಗಿ ಬಂದು ಬೆಂಬಲಿಸುತ್ತಾರೆ, ಆದರೆ ಪಕ್ಷದ ಕಾರಣದಿಂದಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ರಾವ್ ಮಾತನಾಡಿ, ಸರಕಾರ ಸಮುದಾಯಗಳ ನಡುವೆ ವಿವಾದ ಸೃಷ್ಟಿಸಲು ಬಯಸುತ್ತಿದೆ. ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ, ಈ ಮಸೂದೆಯನ್ನು ತರುವುದರ ಮೂಲಕ ನೀವು (ಕೇಂದ್ರ ಸರ್ಕಾರ) ದೇಶವನ್ನು  ವಿಭಜಿಸುತ್ತಿದ್ದೀರಿ. ನೀವು ಮುಸ್ಲಿಮರ ಶತ್ರು ಎಂಬುದಕ್ಕೆ ಈ ಮಸೂದೆಯೇ ಸಾಕ್ಷಿ ಎಂದು ಹೇಳಿದ್ದಾರೆ.

ವಕ್ಫ್‌ ಬೋರ್ಡ್‌ಗಳ ವಿಶೇಷ ಸ್ಥಾನಮಾನ ರದ್ದು ಮಾಡಲು ಕೇಂದ್ರದ ನಿರ್ಧಾರ!

Latest Videos
Follow Us:
Download App:
  • android
  • ios