Asianet Suvarna News Asianet Suvarna News

ಕೆಂಪುಕೋಟೆಯಲ್ಲಿ ಸಿಖ್‌ ಧ್ವಜಾರೋಹಣಕ್ಕೆ ಪಾಕ್‌ ಸಂಭ್ರಮ!

ಪ್ರತಿಭಟನಾ ಸ್ಥಳದಲ್ಲಿ ಸಿಕ್ಕ ಮುಸುಕುಧಾರಿಯಿಂದ ಹಿಂಸಾಚಾರದ ಮಾಹಿತಿ| ರೈತರ ನಡುವೆ ಖಲಿಸ್ತಾನ್‌ ಉಗ್ರರ ಸೇರ್ಪಡೆ ಬಗ್ಗೆ ಸರ್ಕಾರದ ಸುಳಿವು| ಕೆಂಪುಕೋಟೆಯಲ್ಲಿ ಸಿಖ್‌ ಧ್ವಜಾರೋಹಣಕ್ಕೆ ಪಾಕ್‌ ಸಂಭ್ರಮ!

300 Pak Twitter Handles Created To Disrupt Farmers Rally Claim Police pod
Author
Bangalore, First Published Jan 27, 2021, 5:05 PM IST

ನವದೆಹಲಿ: ನವದೆಹಲಿ: ದಿಲ್ಲಿಯ ಕೆಂಪುಕೋಟೆ ಮೇಲೆ ಪ್ರತಿಭಟನಾನಿರತ ಸಿಖ್‌ ರೈತರು ತಮ್ಮ ಧಾರ್ಮಿಕ ಧ್ವಜ ಹಾರಿಸಿದ್ದರ ಬಗ್ಗೆ ಹಲವು ಪಾಕಿಸ್ತಾನೀಯರು ಸಂಭ್ರಮಿಸಿದ್ದಾರೆ. ‘ಭಾರತದ ರಾಷ್ಟ್ರಧ್ವಜವನ್ನು ತೆಗೆದು ಖಲಿಸ್ತಾನಿ ಧ್ವಜವನ್ನು ಸಿಖ್ಖರು ಹಾರಿಸಿದ್ದಾರೆ’ ಎಂಬ ಸಂದೇಶಗಳನ್ನುಸಾಮಾಜಿಕ ಮಾಧ್ಯಮಗಳಲ್ಲಿ ಅವರು ಹರಿಬಿಟ್ಟಿದ್ದಾರೆ. ಇದು ಕೆಂಪುಕೋಟೆ ಘಟನೆ ಪೂರ್ವನಿಯೋಜಿತವೇ ಎಂಬ ಅನುಮಾನ ಹುಟ್ಟು ಹಾಕಿದೆ.

ಶಾಂತಿಯುತವಾಗಿ ನಡೆಯುತ್ತಿದ್ದ ದೆಹಲಿ ರೈತರ ಪ್ರತಿಭಟನೆ ಏಕಾಏಕಿ ಹಿಂಸಾಚಾರದ ಸ್ವರೂಪ ಪಡೆದು, ಕೆಂಪುಕೋಟೆಯನ್ನೇ ಬೇಧಿಸುವ ಮಟ್ಟಕ್ಕೆ ತಲುಪಿದ್ದು ಸಾಕಷ್ಟುಅನುಮಾನಗಳಿಗೆ ಕಾರಣವಾಗಿದೆ. ಕಳೆದ 60 ದಿನಗಳಿಂದ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿಕೊಂಡು ಬಂದಿದ್ದ ರೈತರು, ಟ್ರ್ಯಾಕ್ಟರ್‌ ರಾರ‍ಯಲಿಯನ್ನೂ ಶಾಂತಿಯುತವಾಗಿಯೇ ನಡೆಸುವ ಭರವಸೆ ನೀಡಿ ಅನುಮತಿ ಗಿಟ್ಟಿಸಿಕೊಂಡಿದ್ದರು. ಹಾಗಿದ್ದರೆ ಅದು ಹಿಂಸೆಯ ಸ್ವರೂಪ ಪಡೆದುಕೊಂಡಿದ್ದು ಹೇಗೆ?

ಇದೊಂದು ಪೂರ್ವ ಯೋಜಿತ ಸಂಚೇ? ರೈತರ ನಡುವೆ ಸೇರಿಕೊಂಡಿದ್ದಾರೆ ಎನ್ನಲಾದ ಖಲಿಸ್ತಾನ್‌ ಉಗ್ರರ ದುಷ್ಕೃತ್ಯವೇ? ಅಥವಾ ರಾರ‍ಯಲಿಯನ್ನು ಬಳಸಿಕೊಂಡು ಭಾರತದಲ್ಲಿ ಹಿಂಸೆ ಸೃಷ್ಟಿಸಲು ಪಾಕಿಸ್ತಾನ ನಡೆಸಿದ ಕುತಂತ್ರವೇ?

ಈ ಮೇಲ್ಕಂಡ ಎಲ್ಲಾ ಅನುಮಾನಗಳು ಸತ್ಯ ಎನ್ನುವಂಥ ಹಲವು ಬೆಳವಣಿಗೆ ಕೆಲ ದಿನಗಳಿಂದ ನಡೆದುಕೊಂಡೇ ಬಂದಿದೆ. ಹೀಗಾಗಿಯೇ ದೇಶ ಕಂಡುಕೇಳರಿಯದ ಮಂಗಳವಾರದ ಹಿಂಸಾಚಾರದ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

Follow Us:
Download App:
  • android
  • ios