Asianet Suvarna News Asianet Suvarna News

ಭಾರತದೊಳಗೆ ನುಗ್ಗಲು 30ರ ಉಗ್ರ ಸಂಚು: ಪಾಕ್ ನುಸುಳುಕೋರನನ್ನು ಹತ್ಯೆಗೈದ ಬಿಎಸ್‌ಎಫ್‌

ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಉಗ್ರ ದಾಳಿ ಪ್ರಕರಣಗಳಲ್ಲಿ 6 ಮಂದಿ ಮೃತಪಟ್ಟ ಘಟನೆಗಳ ಬೆನ್ನಲ್ಲೇ 25 ರಿಂದ 30 ಮಂದಿ ಉಗ್ರರು ಭಾರತದ ಗಡಿಯೊಳಗೆ ನುಸುಳಲು ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಲಾಂಚ್‌ಪ್ಯಾಡ್‌ಗಳಲ್ಲಿ ಕಾಯುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

30 terrorists plot to infiltrate into India: BSF kills Pak infiltrator akb
Author
First Published Jan 4, 2023, 8:10 AM IST

ರಜೌರಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಪ್ರತ್ಯೇಕ ಉಗ್ರ ದಾಳಿ ಪ್ರಕರಣಗಳಲ್ಲಿ 6 ಮಂದಿ ಮೃತಪಟ್ಟ ಘಟನೆಗಳ ಬೆನ್ನಲ್ಲೇ 25 ರಿಂದ 30 ಮಂದಿ ಉಗ್ರರು ಭಾರತದ ಗಡಿಯೊಳಗೆ ನುಸುಳಲು ಪಾಕಿಸ್ತಾನ ಗಡಿ ಪ್ರದೇಶದಲ್ಲಿರುವ ಲಾಂಚ್‌ಪ್ಯಾಡ್‌ಗಳಲ್ಲಿ ಕಾಯುತ್ತಿದ್ದಾರೆ ಎಂದು ವರದಿಯೊಂದು ತಿಳಿಸಿದೆ. ಜೈಷ್‌ ಎ ಮೊಹಮ್ಮದ್‌ ಅಥವಾ ಲಷ್ಕರ್‌-ಎ-ತೊಯ್ಬಾ ಸಂಘಟನೆಗೆ ಸೇರಿದ ಉಗ್ರರು ಭಾರತಕ್ಕೆ ನುಗ್ಗಲು ಲಾಂಚ್‌ಪ್ಯಾಡ್‌ಗಳಲ್ಲಿ ರಜೌರಿ ವಲಯದ ಬಳಿ ಕಾಯುತ್ತಿದ್ದಾರೆ. ಅಲ್ಲದೇ ಇವರು ಕಾಶ್ಮೀರದಲ್ಲಿ ಅಶಾಂತಿ ವಾತಾವರಣ ಸೃಷ್ಟಿಸುವ ಸಲುವಾಗಿ ನಾಗರಿಕರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ವರದಿ ಹೇಳಿದೆ. ಇದಕ್ಕೂ ಮೊದಲು ಕಾಶ್ಮೀರದ ರಜೌರಿ ವಲಯದಲ್ಲಿ ಉಗ್ರರು ನಡೆಸಿದ ಗುಂಡು ಹಾಗೂ ಬಾಂಬ್‌ ದಾಳಿಯಲ್ಲಿ 6 ಮಂದಿ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.

ಪಾಕ್‌ ನುಸುಳುಕೋರನನ್ನು ಹತ್ಯೆಗೈದ ಬಿಎಸ್‌ಎಫ್‌

ಇತ್ತ ಪಂಜಾಬ್‌ನಲ್ಲಿ ಭಾರತ  ಪಾಕಿಸ್ತಾನ  (India-Pakistan border) ಗಡಿಭಾಗದ ಬಳಿ, ಶಸ್ತ್ರಾಸ್ತ್ರ ಹೊಂದಿದ್ದ ಪಾಕಿಸ್ತಾನಿ ನುಸುಳುಕೋರನೊಬ್ಬನನ್ನು (Pakistani infiltrator)  ಭಾರತೀಯ ಗಡಿ ಭದ್ರತಾ ಪಡೆಯ ಸೈನಿಕರು (Indian Border Security Force troops) ಮಂಗಳವಾರ ಬೆಳಗ್ಗೆ ಹತ್ಯೆಗೈದಿದ್ದಾರೆ. ಗುರುದಾಸ್‌ಪುರ ಅಜ್ನಾಲ ಸೆಕ್ಟರ್‌ (Gurdaspur Ajnala sector) ಬಳಿ ಬೆಳಗ್ಗೆ 8 ಗಂಟೆಯ ಹೊತ್ತಿಗೆ ಪಾಕಿಸ್ತಾನದ ವ್ಯಕ್ತಿಯೊಬ್ಬ ಒಳನುಸುಳಲು ಪ್ರಯತ್ನಿಸುತ್ತಿದ್ದುದನ್ನು ಗಮನಿಸಿದ ಭಾರತೀಯ ಸೈನಿಕರು, ಆತನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಅತನ ಬಳಿಯಿದ್ದ ಅತ್ಯಾಧುನಿಕ ‘ಪಂಪ್‌ ಆಕ್ಷನ್‌’ ಶಾಟ್‌ಗನ್‌ನ್ನು ವಶಪಡಿಸಿಕೊಳ್ಳಲಾಗಿದ್ದು, ಘಟನೆ ನಡೆದ ಸ್ಥಳದ ಸುತ್ತಮುತ್ತ ಹೆಚ್ಚಿನ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆರಂಭದಲ್ಲಿ, ಈ ರೀತಿ ಒಳನನುಸುಳುವ ಪ್ರಯತ್ನ ಎರಡು ಕಡೆಗಳಲ್ಲಿ ನಡೆದಿದೆ ಎಂದು ಬಿಎಸ್‌ಎಫ್‌ (BSF) ಅಧಿಕಾರಿಗಳು ತಿಳಿಸಿದ್ದರು, ಬಳಿಕ ಒಂದೇ ಕಡೆ ಘಟನೆ ನಡೆದಿರುವುದಾಗಿ ಸ್ಪಷ್ಟನೆ ನೀಡಿದ್ದಾರೆ. ಗಡಿಭಾಗದಲ್ಲಿ ನಡೆದ ಈ ವರ್ಷದ ಮೊದಲ ಘಟನೆ ಇದಾಗಿದೆ.

ಗಡಿಯಲ್ಲಿ BSF ಯೋಧರು ಬಿರಿಯಾನಿ ತಿಂದು ಮಲಗಿದ್ದಾರಾ? ಬಾಂಗ್ಲಾ ನುಸುಳುವಿಕೆ ಆರೋಪಕ್ಕೆ ಒವೈಸ್ ಕೆಂಡ!

ಮತಾಂತರ, ಒಳನುಸುಳುವಿಕೆಯಿಂದ ಜನಸಂಖ್ಯಾ ಅಸಮಾನತೆ: ಹೊಸಬಾಳೆ

 

 

Follow Us:
Download App:
  • android
  • ios