ದೆಹಲಿ(ಎ.02): ಜಮ್ಮುಕಾಶ್ಮೀರದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿ ಮೂವರು ಹೊಡೆದುರುಳಿಸಿದೆ. ಉಗ್ರರು ನೆಲೆಸಿದ್ದ ಸ್ಥಳದ ಖಚಿತ ಮಾಹಿತಿ ಮೇರೆಗೆ ಕಾಶ್ಮೀರ ಜಿಲ್ಲೆಯ ಕಾಕಾಪೋರಾ ಪ್ರದೇಶದಲ್ಲಿ ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಚರಣೆಯಲ್ಲಿ 3 ಉಗ್ರರನ್ನು ಭಾರತೀಯ ಸೇನೆ ಸದೆಬಡಿದಿದೆ.

ಸೇನೆ ಹೊಡೆದುರುಳಿಸಿದ ಮೂವರು ಉಗ್ರರು ಜಮ್ಮು ಕಾಶ್ಮೀರದ ಬಿಜೆಪಿ ನಾಯಕ ಅನ್ವರ್ ಖಾನ್ ಮನೆ ಮೇಲೆ ನಡೆದ ದಾಳಿಯಲ್ಲಿ ಪಾಲ್ಗೊಂಡಿದ್ದರು. ಈ ದಾಳಿಯಲ್ಲಿ ಒಬ್ಬ ಪೋಲಿಸ್ ಪೇದೆ ಕೂಡ ಸಾವನಪ್ಪಿದ್ದರು.

https://kannada.asianetnews.com/india-news/army-soldiers-to-get-new-bulletproof-jackets-snr-qqxaqp

ಉಗ್ರರ ನೆಲೆಸಿದ್ದ ಖಚಿತ ಮಾಹಿತಿ ಪಡೆದುಕೊಂಡು ಸೇನೆ ದಾಳಿ ಮಾಡಿದೆ. ಈ ವೇಳೆ ಸೇನೆ ಮತ್ತು ಉಗ್ರರ ನಡುವೆ ಗುಂಡಿನ ಚಕಾಮಕಿ ನಡೆದಿದ್ದು ಮೂವರು ಉಗ್ರರರನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆದಿದ್ದು ಹೆಚ್ಚಿನ ಮಾಹಿತಿಗಳು ಸೀಗಬೇಕಿದೆ.

ಗುರುವಾರ ಜಮ್ಮು ಕಾಶೀರದ ಬಿಜೆಪಿ ನಾಯಕ ಅನ್ವರ್ ಖಾನ್ ಮನೆ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆ ಕಾವಲು ಕಾಯುತ್ತಿದ್ದ ಪೋಲಿಸ್ ಪೇದೆ ಮೇಲೆ ಉಗ್ರರು ಗುಂಡು ಹಾರಿಸಿದ್ದರು. ತೀವ್ರ ಗಾಯಗೊಂಡಿದ್ದ ಪೋಲಿಸ್ ಪೇದೆ ಸಾವನಪ್ಪಿದ್ದರು. ಪೇದೆ ಮೇಲೆ ಗುಂಡು ಹಾರಿಸಿದ ಉಗ್ರ ಬುರ್ಖಾ ಧರಿಸಿಕೊಂಡು ಬಂದಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.