ವಿದ್ಯುತ್ ಕಡಿತ; ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 3 ಕೊರೊನಾ ಸೋಂಕಿತರು ಸಾವು!
ಕೊರೋನಾಗೆ ಬಲಿಯಾಗಬಾರದು ಎಂದು ಆಸ್ಪತ್ರೆ ಸೇರಿದ ಮೂವರು ಸೋಂಕಿತರು ವಿದ್ಯುತ್ ಕಡಿತದ ಕಾರಣ ಉಪಕರಣಗಳು ಕೆಲಸ ನಿರ್ವಹಿಸದೆ ಸಾವನ್ನಪ್ಪಿದ ಘಟನೆ ನಡೆದಿದೆ.
ಭೋಪಾಲ್(ಡಿ.12): ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಗೆ ವಿದ್ಯುತ್ ಕಡಿತವಾಗೋ ಮೂಲಕ ಸೃಷ್ಟಿಯಾದ ಆವಾಂತರ ಒಂದೆರೆಡಲ್ಲ. ಇತ್ತ ವಿದ್ಯುತ್ ಕಡಿತವಾದಾಗ ಉಪಯೋಗಿಸಲು ಇಟ್ಟಿದ್ದ ಜನರೇಟರ್ ಕೂಡ ಸರಿಯಾಗಿ ಕಾರ್ಯನಿರ್ವಹಿಸಿಲ್ಲ. ಇದರ ಪರಿಣಾಮ ಕೊರೋನಾಗೆ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.
ಭೋಪಾಲದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಸಂಜೆ 6 ಗಂಟೆಗೆ ವಿದ್ಯುತ್ ಕಡಿತಗೊಂಡಿದೆ. ಸತತ 1 ಗಂಟೆ ವಿದ್ಯುತ್ ವ್ಯತ್ಯಯವಾಗಿದೆ. ಇತ್ತ ವಿದ್ಯುತ್ ಸಮಸ್ಯೆಯಾದಾಗ PWD ನಿರ್ವಹಣೆಯ ಜನರೇಟರ್ ಕೂಡ ಕಾರ್ಯನಿರ್ವಹಿಸಿಲ್ಲ. ಇದರ ಪರಿಣಾಮ ತುರ್ತು ಘಟಕದಲ್ಲಿ ಚಿಕಿಕ್ಸೆ ಪಡೆಯುತ್ತಿದ್ದ ಮೂವರು ರೋಗಿಗಳು ಸಾವನ್ನಪ್ಪಿದ್ದಾರೆ.
ಬೆಕ್ಕು, ನಾಯಿಗಳಿಗೂ ಕೊರೋನಾ ಭೀತಿ: ಹಂದಿ, ಕೋಳಿಗೆ ಸೋಂಕು ಸಾಧ್ಯತೆ ಕಡಿಮೆ!
ಮಧ್ಯ ಪ್ರದೇಶದ ಸರ್ಕಾರಿ ಆಸ್ಪತ್ರೆಯಾದ ಹಮಿದಿಯಾ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಈ ದುರಂತ ನಡೆದಿದೆ. ವಿದ್ಯುತ್ ಕಡಿತದಿಂದಾಗಿ ತುರ್ತು ನಿಘಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಿಗೆ ಸರಿಯಾಗಿ ಆಮ್ಮಜನಕ ಪೂರೈಕೆಯಾಗಿಲ್ಲ. ಇನ್ನು ಹೈ ಫ್ಲೋ ನೇಸನ್ ಕ್ಯಾನಲ್(HFNC) ಕೂಡ ಕಾರ್ಯನಿರ್ವಹಿಸಿಲ್ಲ.
ಮೃತಪಟ್ಟ ಮೂವರ ಪೈಕಿ 67 ವರ್ಷದ ಕಾಂಗ್ರೆಸ್ ಕೌನ್ಸಿಲರ್ ಅಕ್ಬರ್ ಖಾನ್ ಕೂಡ ಸೇರಿದ್ದಾರೆ. ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗೆ ಸರ್ಕಾರ ನೊಟೀಸ್ ನೀಡಿದೆ. ಇಷ್ಟೇ ಅಲ್ಲ ಪ್ರಕರಣದ ತನಿಖೆಗೆ ಆದೇಶಿಸಿದೆ.