ಸಮೀಕ್ಷೆ ಮಾಡುವ ವಿಮಾನವೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶನಿವಾರ ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್ ಸೇರಿ ಮೂವರು ಗಾಯಗೊಂಡಿದ್ದಾರೆ.
ಭೋಪಾಲ್ (ಮಾ.28): ವೈಮಾನಿಕ ಸಮೀಕ್ಷೆಗೆ ಬಳಕೆ ಮಾಡುತ್ತಿದ್ದ ವಿಮಾನವೊಂದು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಶನಿವಾರ ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್ ಸೇರಿ ಮೂವರು ಗಾಯಗೊಂಡಿದ್ದಾರೆ.
ಭೋಪಾಲ್‌ನಿಂದ ಗುಣ ಕಡೆಗೆ ಸಾಗುತ್ತಿದ್ದ ಸಣ್ಣ ವಿಮಾನ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ಶನಿವಾರ ಮಧ್ಯಾಹ್ನ ಇಲ್ಲಿನ ಬದ್ವಾಯಿ ಗ್ರಾಮದಲ್ಲಿ ಪತನಗೊಂಡಿದೆ. ಪೈಲಟ್, ಸಹ ಪೈಲಟ್ ಹಾಗೂ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಮತ್ತೋರ್ವ ವ್ಯಕ್ತಿ ಸಮೀಕ್ಷೆಗೆಂದು ತೆರಳಿದ್ದರು.
ಏಕಕಾಲಕ್ಕೆ 2 ರನ್‌ವೇ ಬಳಸಬಹುದಾದ ದಕ್ಷಿಣ ಭಾರತದ ಏಕೈಕ ಏರ್‌ಪೋರ್ಟ್ ಕೆಐಎ ..
ಈ ವೇಳೆ ವಿಮಾನದಲ್ಲಿ ತಾಂತ್ರಿಕ ದೋಷ ಉಂಟಾಗಿ ದುರ್ಘಟನೆ ಸಂಭವಿಸಿದೆ ಎಂದು ರಾಜಾ ಭೋಜ್ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದಲ್ಲಿದ್ದ ಮೂವರಿಗೆ ಸಣ್ಣಪುಟ್ಟಗಾಯಗಳಾಗಿವೆ.
ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ ಎಂದು ಗಾಂಧಿನಗರ ಪೊಲೀಸ್ ಠಾಣೆ ಉಸ್ತುವಾರಿ ಅರುಣ್ ಶರ್ಮಾ ತಿಳಿಸಿದ್ದಾರೆ.
