ದೇಶದಲ್ಲಿ ತಯಾರಾಗ್ತಿವೆ 3 ಲಸಿಕೆ: ಯಾವಾಗಿಂದ ಉತ್ಪಾದನೆ? ಸಿಕ್ತು ಸುಳಿವು!
ವಿಜ್ಞಾನಿಗಳು ಓಕೆ ಎನ್ನುತ್ತಿದ್ದಂತೆ ಕೋವಿಡ್ ಲಸಿಕೆ ಉತ್ಪಾದನೆ| ಪ್ರತಿಯೊಬ್ಬರಿಗೂ ಲಸಿಕೆ ನೀಡಲು ಮಾರ್ಗಸೂಚಿ| 3 ಲಸಿಕೆಗಳು ವಿವಿಧ ಪರೀಕ್ಷಾ ಹಂತದಲ್ಲಿವೆ| ನಮ್ಮ ವಿಜ್ಞಾನಿಗಳದ್ದು ಋುಷಿ ಮುನಿಗಳಂತೆ
ನವದೆಹಲಿ(ಆ.16): ವಿಜ್ಞಾನಿಗಳು ಒಪ್ಪಿಗೆ ನೀಡುತ್ತಿದ್ದಂತೆ ಭಾರತದಲ್ಲಿ ಕೋವಿಡ್-19 ಲಸಿಕೆಯ ಸಮೂಹ ಉತ್ಪಾದನೆ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೋನಾ ಕುರಿತು ಚರ್ಚೆಯಾದಾಗಲೆಲ್ಲಾ ಪ್ರತಿಯೊಬ್ಬರ ಮನಸ್ಸಿನಲ್ಲೂ ಲಸಿಕೆ ಯಾವಾಗ ಎಂಬ ಪ್ರಶ್ನೆ ಏಳುತ್ತದೆ. ಎಲ್ಲರಿಗೂ ಹೇಳುತ್ತೇನೆ.. ನಮ್ಮ ವಿಜ್ಞಾನಿಗಳ ಪ್ರತಿಭೆ ಋುಷಿಮುನಿಗಳಂತಿದೆ. ಅವರು ಪ್ರಯೋಗಾಲಯಗಳಲ್ಲಿ ಶ್ರಮವಹಿಸಿ ಕೆಲಸ ಮಾಡುತ್ತಿದ್ದಾರೆ. ಮೂರು ಲಸಿಕೆಗಳು ವಿವಿಧ ಪರೀಕ್ಷಾ ಹಂತಗಳಲ್ಲಿವೆ. ವಿಜ್ಞಾನಿಗಳು ಹಸಿರು ನಿಶಾನೆ ತೋರುತ್ತಿದ್ದಂತೆ, ಸಮೂಹ ಉತ್ಪಾದನೆ ಆರಂಭವಾಗಲಿದೆ. ಇದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ತಿಳಿಸಿದರು.
'ಆತಂಕ ಪಡುವ ಅಗತ್ಯವಿಲ್ಲ : ಶೀಘ್ರ ಹತೋಟಿಗೆ ಬರಲಿದೆ ಕೊರೋನಾ'
ದೇಶದ ಪ್ರತಿಯೊಬ್ಬರಿಗೂ ಅತ್ಯಂತ ಕಡಿಮೆ ಅವಧಿಯಲ್ಲಿ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಲು ಮಾರ್ಗಸೂಚಿಯನ್ನು ಸಿದ್ಧಪಡಿಸಲಾಗಿದೆ ಎಂದೂ ಮಾಹಿತಿ ನೀಡಿದರು.
3 ಲಸಿಕೆಗಳು:
1. ಭಾರತೀಯ ವೈದ್ಯ ಸಂಶೋಧನಾ ಮಂಡಳಿ (ಐಸಿಎಂಆರ್) ಜತೆಗೂಡಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್. 1ನೇ ಹಂತದ ಪ್ರಯೋಗ ಮುಗಿದಿದ್ದು, ಯಶಸ್ವಿಯಾಗಿದೆ.
2. ಝೈಡಸ್ ಕ್ಯಾಡಿಲ್ಲಾ ಕಂಪನಿಯ ಲಸಿಕೆ ಪ್ರಯೋಗ ಹಂತದಲ್ಲಿದೆ.
ಸ್ವದೇಶಿ ಲಸಿಕೆ ‘ಕೋವ್ಯಾಕ್ಸಿನ್’ ಮೊದಲ ಪರೀಕ್ಷೆಯಲ್ಲಿ ಪಾಸ್!
3. ಆಕ್ಸ್‌ಫರ್ಡ್ ವಿವಿ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ಪ್ರಯೋಗಕ್ಕೆ ಒಳಪಡಿಸಲು ಪುಣೆಯ ಸೆರಂ ಇನ್ಸ್‌ಟಿಟ್ಯೂಟ್‌ಗೆ ಅನುಮತಿ ನೀಡಲಾಗಿದೆ. ಇದರ ಉತ್ಪಾದನೆಗೆ ಸೆರಂ ಸಂಸ್ಥೆ ಆಸ್ಟ್ರಾಝೆನೆಕಾ ಜತೆ ಒಪ್ಪಂದ ಮಾಡಿಕೊಂಡಿದೆ.