ಹರ್ಯಾಣ(ಮಾ.11): ಚಿನ್ನ, ಬೆಳ್ಳಿಯಂತಹ ಬೆಲೆ ಬಾಳುವ ವಸ್ತುಗಳು ಇಟ್ಟಲ್ಲಿಂದ ಕಳುವಾದವು ಅಂದರೆ ನಂಬಬಹುದು. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ 29,000 ಲೀಟರ್‌ ಮದ್ಯ ನಾಪತ್ತೆ ಆಗಿದೆ ಅಂದರೆ ನಂಬಲು ಸಾಧ್ಯವೇ?

ಹೌದು, ಇಂಥದ್ದೊಂದು ವಿಚಿತ್ರ ಘಟನೆ ಹರ್ಯಾಣದಲ್ಲಿ ನಡೆದಿದೆ. ಮದ್ಯದ ಬಾಟಲಿಗಳು ನಾಪತ್ತೆ ಆಗಿದ್ದು ಕೇವಲ ಒಂದು ಠಾಣೆಯಲ್ಲೂ ಅಲ್ಲ. ಬದಲಾಗಿ 30 ಪೊಲೀಸ್‌ ಠಾಣೆಗಳ ಪೈಕಿ 25 ಠಾಣೆಗಳಲ್ಲಿ ಮದ್ಯದ ಬಾಟಲಿಗಳು ಕಣ್ಮರೆ ಆಗಿವೆ.

ಪೊಲೀಸರು ಇತ್ತೀಚೆಗೆ 50 ಸಾವಿರ ಲೀಟರ್‌ ದೇಶೀ ಮದ್ಯ, 30 ಸಾವಿರ ಲೀಟರ್‌ ವೈನ್‌ ಅನ್ನು ವಶಪಡಿಸಿಕೊಂಡಿದ್ದರು. ಆದರೆ, ಪೊಲೀಸರ ಪ್ರಕಾರ ಕಾಣೆಯಾಗಿರುವ 29,000 ಲೀಟರ್‌ ಮದ್ಯವನ್ನು ಇಲಿಗಳು ಕುಡಿದಿವೆಯಂತೆ.