ಕ್ಯಾ.ಅಭಿಲಾಷಾ ಮೊದಲ ಯುದ್ಧ ವಿಮಾನ ಪೈಲಟ್‌!

* ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್‌ ಆಗಿ ಭಾರತೀಯ ಸೇನೆಗೆ ಸೇರ್ಪಡೆಯಾದ ಕ್ಯಾ.ಅಭಿಲಾಷಾ

* ನಾಸಿಕ್‌ನಲ್ಲಿ ಯುದ್ಧ ವಿಮಾನ ಚಾಲನಾ ತರಬೇತಿ

26 year old Abhilasha Barak from Haryana becomes Indian Army first woman combat aviator pod

ನವದೆಹಲಿ(ಮೇ.27): ಕ್ಯಾ. ಅಭಿಲಾಷಾ ಬರಾಕ್‌ ಅವರು ಬುಧವಾರ ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್‌ ಆಗಿ ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದಾರೆ. ನಾಸಿಕ್‌ನಲ್ಲಿ ಯುದ್ಧ ವಿಮಾನ ಚಾಲನಾ ತರಬೇತಿಯನ್ನು ಯಶಸ್ವಿಯಾಗಿ ಮುಗಿಸಿದ ಬಳಿಕ ಅವರು ಸೇನೆಯ ಏವಿಯೇಶನ್‌ ಕಾಫ್ಸ್‌ರ್‍ಗೆ ಸೇರಿದ ಮೊದಲ ಮಹಿಳಾ ಅಧಿಕಾರಿಯೆನಿಸಿದ್ದಾರೆ.

ಅಭಿಲಾಷಾ ಅವರಿಗೆ ಆರ್ಮಿ ಏವಿಯೇಶನ್‌ನ ಮಹಾನಿರ್ದೇಶಕ ಹಾಗೂ ಕರ್ನಲ್‌ ಕಮಾಂಡಂಟ್‌ ‘ವಿಂಗ್‌್ಸ’ (ಯುದ್ಧ ವಿಮಾ ಚಾಲನೆಗೆ ಪರವಾನಗಿ) ನೀಡಿ ಗೌರವಿಸಿದ್ದಾರೆ. ಕ್ಯಾ. ಅಭಿಲಾಷಾ ಹರಾರ‍ಯಣ ಮೂಲದವರಾಗಿದ್ದು, 2018ರಲ್ಲಿ ಸೇನೆಯ ವಾಯು ರಕ್ಷಣಾ ಪಡೆಯಲ್ಲಿ ನಿಯೋಜಿಸಲ್ಪಟ್ಟಿದ್ದರು. ಇವರು ನಿವೃತ್ತ ಕರ್ನಲ್‌ ಎನ್‌. ಓಂ ಸಿಂಗ್‌ ಅವರ ಪುತ್ರಿಯಾಗಿದ್ದಾರೆ.

2021ರಲ್ಲಿ ಸೇನೆಯ ಮುಖ್ಯಸ್ಥರಾದ ಜ. ಎಂ.ಎಂ. ನರವಣೆ ಸೇನೆಯ ಏವಿಯೇಶನ್‌ ಕಾಪ್‌ರ್‍ನಲ್ಲಿ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಪ್ರಸ್ತಾವನೆಗೆ ಒಪ್ಪಿಗೆ ನೀಡಿದ್ದರು. ಇದರೊಂದಿಗೆ ಇನ್ನು ಮಹಿಳೆಯರು ವಾಯುಪಡೆ ಹಾಗೂ ನೌಕಾಪಡೆಗಳಲ್ಲಿ ಯುದ್ಧ ಹೆಲಿಕಾಪ್ಟರ್‌ ಚಾಲನೆ ಮಾಡುವ ಅಧಿಕಾರಿಗಳಾಗಿ ಸೇನೆ ಸೇರಬಹುದಾಗಿದೆ.

Latest Videos
Follow Us:
Download App:
  • android
  • ios