* 4 ಗಂಟೆಯ ಅವಧಿಯಲ್ಲಿ 26 ಕೋವಿಡ್‌ ಸೋಂಕಿತರು ಸಾವು* ಕೋವಿಡ್‌ ಸೋಂಕಿತರ ಸಾವಿಗೆ ನಿಖರ ಕಾರಣವೇನು ಎಂಬುದರ ತನಿಖೆ* ಸರ್ಕಾರಿ ಸ್ವಾಮ್ಯದ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ಜಿಎಂಸಿಎಚ್‌)ಯಲ್ಲಿ ಘಟನೆ

ಪಣಜಿ(ಮೇ.12): ಮಂಗಳವಾರ ನಸುಕಿನ ಜಾವ ಕೇವಲ 4 ಗಂಟೆಯ ಅವಧಿಯಲ್ಲಿ 26 ಕೋವಿಡ್‌ ಸೋಂಕಿತರು ಸಾವಿಗೀಡಾದ ದಾರುಣ ಘಟನೆ ಸರ್ಕಾರಿ ಸ್ವಾಮ್ಯದ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ(ಜಿಎಂಸಿಎಚ್‌)ಯಲ್ಲಿ ನಡೆದಿದೆ.

ಕೋವಿಡ್‌ ಸೋಂಕಿತರ ಸಾವಿಗೆ ನಿಖರ ಕಾರಣವೇನು ಎಂಬುದರ ತನಿಖೆಯನ್ನು ಗೋವಾ ಆರೋಗ್ಯ ಸಚಿವ ವಿಶ್ವಜಿತ್‌ ರಾಣೆ ಅವರು ಹೈಕೋರ್ಟ್‌ಗೆ ವಹಿಸಿದ್ದಾರೆ. ಮತ್ತೊಂದೆಡೆ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು, ‘ಆಸ್ಪತ್ರೆಯಲ್ಲಿನ ವೈದ್ಯಕೀಯ ಆಮ್ಲಜನಕದ ಕೊರತೆಯೇ ಕೆಲ ಕೋವಿಡ್‌ ಸೋಂಕಿತರ ಸಾವಿಗೆ ಕಾರಣವಿರಬಹುದು’ ಎಂದು ಹೇಳಿದ್ದಾರೆ.

ಜಿಎಂಸಿಎಚ್‌ ಆಸ್ಪತ್ರೆಗೆ ಒಟ್ಟಾರೆ 1200 ಜಂಬೋ ಸಿಲಿಂಡರ್‌ಗಳ ಆಮ್ಲಜನಕದ ಅಗತ್ಯವಿದೆ. ಆದರೆ ಆಸ್ಪತ್ರೆಯಲ್ಲಿ ಕೇವಲ 400 ಜಂಬೋ ಸಿಲಿಂಡರ್‌ಗಳಿದ್ದವು ಎನ್ನಲಾಗಿದೆ.