25 ಭಾರತೀಯ ಸಿಬ್ಬಂದಿ ಇದ್ದ ಕಚ್ಚಾ ತೈಲ ಹಡಗಿನ ಮೇಲೆ ಕೆಂಪು ಸಮುದ್ರದಲ್ಲಿ ಡ್ರೋನ್‌ ದಾಳಿ

ಗ್ಯಾಬನ್ ಒಡೆತನದ M/V ಸಾಯಿಬಾಬಾ ಹಡಗಿಗೆ ತೊಂದರೆಯಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಮಾಹಿತಿ ನೀಡಿದ್ದು, ಈ ಹಡಗಿನಲ್ಲಿ 25 ಭಾರತೀಯ ಸಿಬ್ಬಂದಿ ಇದ್ದರು ಎಂದು ಭಾರತೀಯ ನೌಕೆ ತಿಳಿಸಿದೆ. 

25 indian crew onboard mv saibaba oil ship attacked by houthi drone in red sea indian navy informs ash

ನವದೆಹಲಿ (ಡಿಸೆಂಬರ್ 24, 2023): ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೂತಿ ಬಂಡುಕೋರರು ಭಾರತಕ್ಕೆ ಹೊರಟಿದ್ದ ಕಚ್ಚಾ ತೈಲ ಟ್ಯಾಂಕರ್‌ ಮೇಲೆ ಡ್ರೋನ್‌ ದಾಳಿ ಮಾಡಿದೆ. ಅಮೆರಿಕ ಮಿಲಿಟರಿ ಈ ಬಗ್ಗೆ ಮಾಹಿತಿ ನೀಡಿದ್ದು, ಭಾರತದ ಈ ಹಡಗಿನಲ್ಲಿ ಸುಮಾರು 25 ಭಾರತೀಯ ಸಿಬ್ಬಂದಿ ಈ ಬಗ್ಗೆ ಮಾಹಿತಿ ನೀಡಿದೆ. 

ಗ್ಯಾಬನ್ ಒಡೆತನದ M/V ಸಾಯಿಬಾಬಾ ಹಡಗಿಗೆ ತೊಂದರೆಯಾಗಿದೆ ಎಂದು ಅಮೆರಿಕ ಸೆಂಟ್ರಲ್ ಕಮಾಂಡ್ ಎಕ್ಸ್‌ (ಈ ಹಿಂದಿನ ಟ್ವಿಟ್ಟರ್‌) ಮೂಲಕ ಮಾಹಿತಿ ನೀಡಿದೆ. ನಿನ್ನೆ ರಾತ್ರಿ 10:30 ರ ಸುಮಾರಿಗೆ (IST) ಈ ದಾಳಿ ಸಂಭವಿಸಿದೆ ಎಂದು ತಿಳಿದುಬಂದಿದ್ದು, ಈ ಸಂಬಂಧ ಇರಾನ್ ಮೇಲೆ ಅಮೆರಿಕ ದೂಷಿಸಿದೆ.

ಇದನ್ನು ಓದಿ: Breaking: ಇಸ್ರೇಲ್‌ ಮೂಲದ ಹಡಗಿನ ಮೇಲೆ ಅರಬ್ಬಿ ಸಮುದ್ರದಲ್ಲಿ ಡ್ರೋನ್‌ ದಾಳಿ, ಸಹಾಯಕ್ಕೆ ಧಾವಿಸಿದ ಭಾರತ!

ಕೆಂಪು ಸಮುದ್ರದಲ್ಲಿ ಡ್ರೋನ್ ದಾಳಿಗೆ ಒಳಗಾದ  ಎಂವಿ ಸಾಯಿಬಾಬಾದಲ್ಲಿ 25 ಭಾರತೀಯ ಸಿಬ್ಬಂದಿ ಇದ್ದಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಹಾಗೂ,  ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಭಾರತೀಯ ನೌಕಾಪಡೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕೆಂಪು ಸಮುದ್ರದಲ್ಲಿ ಯೆಮೆನ್‌ನ ಹೂತಿ ಬಂಡುಕೋರರಿಂದ ಡ್ರೋನ್ ದಾಳಿಗೆ ಒಳಗಾದ ಎರಡು ಹಡಗುಗಳಲ್ಲಿ ಕಚ್ಚಾ ತೈಲ ಟ್ಯಾಂಕರ್ ಸೇರಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಈ ಬಗ್ಗೆ ತಿಳಿಸಿತ್ತು. ಆದರೆ ಯಾವುದೇ ಹಡಗುಗಳು ಬ್ಯಾಲಿಸ್ಟಿಕ್ ಕ್ಷಿಪಣಿಗಳಿಂದ ಪ್ರಭಾವಿತವಾದ ವರದಿಯಾಗಿಲ್ಲ.

ಅಮೆರಿಕದಲ್ಲಿ ಹಿಂದೂ ದೇವಾಲಯ ವಿರೂಪ: ಖಲಿಸ್ತಾನಿ ಪರ ಘೋಷಣೆಗಳ ಬರೆದ ಕಿಡಿಗೇಡಿಗಳು

ಮಧ್ಯಾಹ್ನ 3 ಮತ್ತು 8 ಗಂಟೆಯ ನಡುವೆ (ಸನಾ ಸಮಯ), USS LABOON (DDG 58) ಆಪರೇಷನ್ ಪ್ರಾಸ್ಪೆರಿಟಿ ಗಾರ್ಡಿಯನ್ (OPG) ನ ಭಾಗವಾಗಿ ದಕ್ಷಿಣ ಕೆಂಪು ಸಮುದ್ರದಲ್ಲಿ ಗಸ್ತು ತಿರುಗುತ್ತಿತ್ತು ಮತ್ತು ಯೆಮೆನ್‌ನ ಹೂತಿ ನಿಯಂತ್ರಿತ ಪ್ರದೇಶದಲ್ಲಿ 4 ಮಾನವರಹಿತ ವೈಮಾನಿಕ ಡ್ರೋನ್‌ಗಳನ್ನು ಹೊಡೆದುರುಳಿಸಿತು. ಈ ಘಟನೆಯಲ್ಲಿ ಯಾವುದೇ ಗಾಯ ಅಥವಾ ಹಾನಿಯಾಗಿಲ್ಲ.

ನಂತರ ಸರಿಸುಮಾರು ರಾತ್ರಿ 8 ಗಂಟೆಗೆ (ಸನಾ ಸಮಯ), ಯುಎಸ್ ನೇವಲ್ ಫೋರ್ಸ್ ಸೆಂಟ್ರಲ್ ಕಮಾಂಡ್ ದಕ್ಷಿಣ ಕೆಂಪು ಸಮುದ್ರದಲ್ಲಿ ಎರಡು ಹಡಗುಗಳು ದಾಳಿಗೆ ಒಳಗಾಗಿದೆ ಎಂದು ವರದಿಗಳನ್ನು ಸ್ವೀಕರಿಸಿತು. ಈ ಪೈಕಿ,  M/V BLAAMANEN, ಒಂದು ನಾರ್ವೇ ಧ್ವಜದ, ಮಾಲೀಕತ್ವದ ಮತ್ತು ಕಾರ್ಯನಿರ್ವಹಿಸುವ ರಾಸಾಯನಿಕ/ತೈಲ ಟ್ಯಾಂಕರ್‌ನಲ್ಲಿದ್ದವರಿಗೆ ಯಾವುದೇ ಗಾಯಗಳು ಅಥವಾ ಹಾನಿ ವರದಿಯಾಗಿಲ್ಲ. ಹೂತಿ ಏಕಮುಖ ಡ್ರೋನ್‌ ದಾಳಿಯಿಂದ ಮಿಸ್‌ ಆಗಿದೆ ಎಂದು ವರದಿ ಮಾಡಿದೆ.

ಹಾಗೂ, ಎರಡನೇ ನೌಕೆ, ಗ್ಯಾಬೊನ್ ಒಡೆತನದ M/V ಸಾಯಿಬಾಬಾ, ಭಾರತೀಯ ಧ್ವಜದ ಕಚ್ಚಾ ತೈಲ ಟ್ಯಾಂಕರ್ ಮೇಲೆ ಸಹ ಏಕಮುಖ ಡ್ರೋನ್‌ ದಾಳಿಯಾಗಿದೆ ಎಂದು ವರದಿಯಾಗಿದೆ. ಈ ದಾಳಿಗಳು ಅಕ್ಟೋಬರ್ 17 ರಿಂದ ಹೂತಿ ಉಗ್ರಗಾಮಿಗಳು ವಾಣಿಜ್ಯ ಹಡಗು ಸಾಗಣೆಯ ಮೇಲಿನ 14 ಮತ್ತು 15 ನೇ ದಾಳಿಗಳನ್ನು ಪ್ರತಿನಿಧಿಸುತ್ತವೆ ಎಂದೂ ಯುಎಸ್ ಸೆಂಟ್ರಲ್ ಕಮಾಂಡ್ ಹೇಳಿದೆ.

ಇಸ್ರೇಲ್-ಹಮಾಸ್ ಸಂಘರ್ಷದ ನಡುವೆ ಇರಾನ್ ಬೆಂಬಲಿತ ಹೂತಿ ಬಂಡುಕೋರರು ಕೆಂಪು ಸಮುದ್ರದಲ್ಲಿ ಹಡಗುಗಳ ಮೇಲೆ ದಾಳಿಯನ್ನು ಹೆಚ್ಚಿಸಿದರು.

Latest Videos
Follow Us:
Download App:
  • android
  • ios