ಗಾಂಧಿನಗರ (ಅ.30): ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಶಾಸಕರು 25 ಕೋಟಿಗೆ ಬಿಕರಿಯಾಗಿದ್ದಾರೆ ಎನ್ನುವ ಆರೋಪಕ್ಕೆ ತಿರುಗೇಟು ನೀಡಿರುವ ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ, ಇಡೀ ಗುಜರಾತ್‌ ಕಾಂಗ್ರೆಸ್‌ ಅನ್ನು 25 ಕೋಟಿಗೆ ಖರೀದಿ ಮಾಡಬಹುದು ಎಂದು ಲೇವಡಿ ಮಾಡಿದ್ದಾರೆ. 

ಉಪ ಚುನಾವಣೆಯ ಪ್ರಚಾರದಲ್ಲಿ ಮಾತನಾಡಿದ ಅವರು, ಒಮ್ಮೆ ಪಕ್ಷ ಬಿಟ್ಟರೆ ಕಾಂಗ್ರೆಸ್‌ ನಾಯಕರು ಅವರ ಶಾಸಕರನ್ನೇ ಗೌರವಿಸುವುದಿಲ್ಲ. ಹಾಗಾಗಿ ಕರ್ಜನ್‌ ಕ್ಷೇತ್ರದ ಕಾಂಗ್ರೆಸ್‌ ಮಾಜಿ ಶಾಸಕ 25 ಕೋಟಿಗೆ ಮಾರಾಟವಾಗಿದ್ದಾರೆ ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. 

ರಾರಾದಲ್ಲಿ ಫೈಟ್ ಇರೋದು ಮುನಿರತ್ನ VS ಡಿಕೆ ಸುರೇಶ್ ನಡುವೆಯಾ? ಕುಸುಮಾ ನೆಪ ಮಾತ್ರ? ..

25 ಕೋಟಿಗೆ ಇಡೀ ಗುಜರಾತ್‌ ಕಾಂಗ್ರೆಸ್‌ ಅನ್ನೇ ಖರೀದಿ ಮಾಡಬಹುದು ಎಂದು ವ್ಯಂಗ್ಯವಾಡಿದರು.