ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಹಿರಿಯ ನಾಯಕಿ ಪ್ರಿಯಾಂಕಾ ವಾದ್ರಾ ಸೋಮವಾರ ಚಾಲನೆ ನೀಡಿದ್ದು, ‘ಬಿಜೆಪಿ ವೈಫಲ್ಯಗಳ’ ವಿರುದ್ಧ ಹರಿಹಾಯ್ದಿದ್ದಾರೆ.
ಜಬಲ್ಪುರ: ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಪ್ರಚಾರಕ್ಕೆ ಹಿರಿಯ ನಾಯಕಿ ಪ್ರಿಯಾಂಕಾ ವಾದ್ರಾ ಸೋಮವಾರ ಚಾಲನೆ ನೀಡಿದ್ದು, ‘ಬಿಜೆಪಿ ವೈಫಲ್ಯಗಳ’ ವಿರುದ್ಧ ಹರಿಹಾಯ್ದಿದ್ದಾರೆ.
ಜಬಲ್ಪುರದಲ್ಲಿ ಪ್ರಚಾರ ಆರಂಭಿಸಿ ಮಾತನಾಡಿದ ಪ್ರಿಯಾಂಕಾ, ‘ಕೊಟ್ಟ ಭರವಸೆಗಳನ್ನು ಮಧ್ಯಪ್ರದೇಶ ಸರ್ಕಾರ ಈಡೇರಿಸಿಲ್ಲ ಹಾಗೂ ಹಗರಣದಲ್ಲಿ (scam) ನಿರತವಾಗಿದೆ. 3 ವರ್ಷದಲ್ಲಿ ಕೇವಲ 21 ಜನರಿಗೆ ಸರ್ಕಾರಿ ನೌಕರಿ ನೀಡಿದೆ. ತನ್ನ ಈವರೆಗಿನ 220 ತಿಂಗಳ ಆಡಳಿತದಲ್ಲಿ (ಶಿವರಾಜ್ ಸಿಂಗ್‌ರ ಎಲ್ಲ ಹಾಗೂ ಉಮಾಭಾರತಿ ಅವಧಿ ಸೇರಿ) ಆದರೆ 225 ಹಗರಣಗಳನ್ನು ಮಾಡಿದೆ. ಅದರಲ್ಲಿ ವ್ಯಾಪಂ ಹಗರಣ (Vyapam Scam), ಪಡಿತರ ಹಗರಣ (Ration scam) ಸೇರಿವೆ’ ಎಂದು ಆರೋಪಿಸಿದರು.
‘ಮಧ್ಯಪ್ರದೇಶ ಜನರನ್ನು 18 ವರ್ಷದ ಆಡಳಿತದಲ್ಲಿ ಬಿಜೆಪಿ ಬಳಸಿ ಬಿಸಾಕಿದೆ. ಆದರೆ ಅವರ ಕನಸು ಈಡೇರಿಸಿಲ್ಲ. ಹೀಗಾಗಿಯೇ ಕರ್ನಾಟಕ ಹಾಗೂ ಹಿಮಾಚಲದಲ್ಲಿ ಬಿಜೆಪಿಗೆ ಜನ ದಿಟ್ಟಉತ್ತರ ನೀಡಿದ್ದಾರೆ. ಕಾಂಗ್ರೆಸ್‌ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಾಡುತ್ತಿರುವ ಅವಮಾನಗಳ ಪಟ್ಟಿಗಿಂತ, ಬಿಜೆಪಿ ಹಗರಣಗಳ ಪಟ್ಟಿದೊಡ್ಡದಿದೆ’ ಎಂದರು.
ಕಾಂಗ್ರೆಸ್ನ ‘ಕರ್ನಾಟಕ ಗ್ಯಾರಂಟಿ’ಗಳ ಬಗ್ಗೆ ಕುಹಕವಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕಾ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 1500 ರು. ಭತ್ಯೆ, 100 ಯುನಿಟ್ ಉಚಿತ ವಿದ್ಯುತ್, 500 ರು.ಗೆ ಗ್ಯಾಸ್ ಸಿಲಿಂಡರ್, ರೈತ ಸಾಲ ಮನ್ನಾ, ಹಳೇ ಪಿಂಚಣಿ ಯೋಜನೆ ಜಾರಿ- ಈ 5 ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದರು.
ಪ್ರಿಯಾಂಕಾ ಗಾಂಧಿ ಚುನಾವಣಾ ಹಿಂದೂ
ಈ ನಡುವೆ ಜಬಲ್ಪುರದಲ್ಲಿ ನರ್ಮದಾ ನದಿಗೆ ಪ್ರಿಯಾಂಕಾ ಆರತಿ ಮಾಡಿದರು. ಹೀಗಾಗಿ ಅವರನ್ನು 'ಚುನಾವಣಾ ಹಿಂದೂ' ಎಂದು ಬಿಜೆಪಿ ಟೀಕಿಸಿದೆ.
ತೆಲಂಗಾಣ, ಮಧ್ಯ ಪ್ರದೇಶ ಚುನಾವಣೆ: ಪ್ರಿಯಾಂಕಾಗೆ ಹೆಚ್ಚು ಹೊಣೆ ಸಾಧ್ಯತೆ
