ವಿಧಾನಸೌಧದ ಆವರಣದಲ್ಲಿಯೇ ನೂತನ ರಾಜ್ಯಸಭಾ ಸಂಸದ ನಾಸಿರ್ ಹುಸೇನ್ ಅವರ ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿದ್ದಾರೆ. ಹೀಗಾಗಿ ನಾಸಿರ್ ಹುಸೇನ್ ಅವರಿಗೆ ಪ್ರಮಾಣವಚನ ಬೋಧಿಸಬಾರದು ಎಂದು ನಿವೃತ್ತ ಐಎಎಸ್ ಅಧಿಕಾರಗಳು ಉಪರಾಷ್ಟ್ರತಿಗೆ ಪತ್ರ ಬರೆದಿದ್ದಾರೆ.
ನವದೆಹಲಿ (ಮಾ.7): 22 ನಿವೃತ್ತ ಐಎಎಸ್ ಅಧಿಕಾರಿಗಳು ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಚೇರ್ಮನ್ ಜಗದೀಪ್ ಧನಕರ್ ಅವರಿಗೆ ಪತ್ರ ಬರೆದಿದ್ದು, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಕಾಂಗ್ರೆಸ್‌ನ ನಾಸಿರ್ ಹುಸೇನ್ ಅವರಿಗೆ ಯಾವುದೇ ಕಾರಣಕ್ಕೂ ಪ್ರಮಾಣವಚನ ಬೋಧಿಸಬಾರದು ಎಂದು ಅಗ್ರಹಿಸಿದ್ದಾರೆ. ಫೆಬ್ರವರಿ 27 ರಂದು ರಾಜ್ಯಸಭಾ ಚುನಾವಣೆಯ ಫಲಿತಾಂಶ ಘೋಷಣೆಯಾದಾಗ ಶಕ್ತಿಕೇಮದ್ರ ವಿಧಾನಸೌಧದ ಆವರಣದಲ್ಲಿಯೇ ನಾಸಿರ್ ಹುಸೇನ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎನ್ನುವ ಮೂಲಕ ಪಾಕ್ ಪರ ಘೋಷಣೆಯನ್ನು ಮಾಡಿದ್ದರು. ಇದನ್ನು ಅವರು ವಿರೋಧಿಸಲಿರಲಿಲ್ಲ. ಹಾಗಾಗಿ ಈ ಪ್ರಕರಣದಲ್ಲಿ ಅವರ ಪಾತ್ರವೂ ಇರುವ ಕಾರಣ ಯಾವುದೇ ಕಾರಣಕ್ಕೂ ಅವರಿಗೆ ಪ್ರಮಾಣವಚನ ಬೋಧಿಸಬಾರದು ಎಂದು ಆಗ್ರಹಿಸಿದ್ದಾರೆ. ಅದರೊಂದಿಗೆ, ನಿಮ್ಮ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರಲ್ಲ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ಅವರ ವಿರುದ್ಧವೇ ನಾಸಿರ್ ಹುಸೇನ್ ಹರಿಹಾಯ್ದಿದ್ದರು ಈ ವಿಚಾರವನ್ನೂ ಉಪರಾಷ್ಟ್ರಪತಿಯ ಗಮನಕ್ಕೆ ತರಲಾಗಿದೆ.
ರಾಜ್ಯ ಸರ್ಕಾರ ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿಲ್ಲ. ನಾಸಿರ್ ಸಾಬ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು ಎಂದು ಹೇಳುವ ಮೂಲಕ ಸಮರ್ಥನೆ ಮಾಡಿಕೊಳ್ಳುವ ಪ್ರಯತ್ನ ಮಾಡಿತ್ತಾದರೂ, ಎಫ್‌ಎಸ್‌ಎಲ್ ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ಧೃಡವಾಗಿತ್ತು. ಇದರ ಬೆನ್ನಲ್ಲಿಯೇ ಮೂವರು ವ್ಯಕ್ತಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಆದರೆ, ನಾಸಿರ್ ಹುಸೇನ್ ಅವರನ್ನು ಕನಿಷ್ಠ ವಿಚಾರಣೆಗೂ ಕರೆಯದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
Pak Pro Slogan: ಎಫ್‌ಎಸ್‌ಎಲ್ ವರದಿ ಬಿಚ್ಚಿಟ್ಟ ಪಾಕ್ ಪ್ರೇಮ! ಕ್ಲೀನ್ ಚಿಟ್ ಕೊಟ್ಟವರು ಈಗ ಏನಾಂತರೆ ?
ಬಂಧಿತರನ್ನು ದೆಹಲಿಯ ಇಲ್ತಾಜ್, ಬೆಂಗಳೂರಿನ ಆರ್‌ಟಿ ನಗರದ ಮುನಾವರ್ ಮತ್ತು ಹಾವೇರಿಯ ಬ್ಯಾಡಗಿಯ ಮೊಹಮ್ಮದ್ ಶಾಫಿ ಎಂದು ಗುರುತಿಸಲಾಗಿದೆ. ಅಲ್ಲಿ ನಾಸಿರ್ ಸಾಬ್ ಜಿಂದಾಬಾದ್ ಎನ್ನುವ ಘೋಷಣೆ ಕೂಗಲಾಗಿದೆ ಎನ್ನುವ ಕಾಂಗ್ರೆಸ್ ಸಚಿವರು ಹಾಗೂ ನಾಯಕರ ಮಾತಿಗೂ ಟೀಕೆ ವ್ಯಕ್ತವಾಗಿದೆ. ಬಿಜೆಪಿ ಇದು ಅಲ್ಪಸಂಖ್ಯಾತರ ವಿಪರೀತ ತುಷ್ಟೀಕರಣ ಎಂದು ಟೀಕೆ ಮಾಡಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರೋಪಗಳನ್ನು ಪರಿಶೀಲಿಸಲು ಸರ್ಕಾರಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ತನಿಖೆಗೆ ಆದೇಶ ನೀಡಿತ್ತು. ಅದರ ವರದಿಯಲ್ಲಿಯೇ ಪಾಕ್ ಪರ ಘೋಷಣೆ ಕೂಗಿದ್ದು ದೃಢವಾಗಿತ್ತು.
Siddaramaiah: ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಬಿಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
