Asianet Suvarna News Asianet Suvarna News

ಗಣರಾಜ್ಯೋತ್ಸವಕ್ಕೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಭಾಗಿ, ಚರ್ಚೆ ಆಗಲಿರುವ ವಿಚಾರಗಳೇನು?

ಈ ಬಾರಿ ಗಣರಾಜ್ಯೋತ್ಸವ ಸಮಾರಂಭಕ್ಕೆ ಆಗಮಿಸುವಂತೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರಿಗೆ ಆಹ್ವಾನ ನೀಡಲಾಗಿತ್ತು. ಆದರೆ, ಜನವರಿಯಲ್ಲಿ ಭಾರತಕ್ಕೆ ಪ್ರಯಾಣ ಮಾಡಲು ಆಗದೇ ಇರುವ ಕಾರಣ ಸಮಾರಂಭಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು.

2024 January 26 India Republic Day Emmanuel Macron will be the chief guest san
Author
First Published Dec 22, 2023, 5:19 PM IST

ನವದೆಹಲಿ (ಡಿ.22): 2024ರ ಜನವರಿ 26 ರಂದು ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಆಗಮಿಸಲಿದ್ದಾರೆ. ಭಾರತ ನೀಡಿರುವ ಆಹ್ವಾನವನ್ನು ಫ್ರೆಂಚ್‌ ಅಧ್ಯಕ್ಷೀಯ ಕಚೇರಿ ಸ್ವೀಕರಿಸಿದೆ. ಫ್ರೆಂಚ್ ಅಧ್ಯಕ್ಷರ ಕಚೇರಿಯಿಂದ ಈ ಕುರಿತಾಗಿ ಬಂದಿರುವ ದೃಢೀಕರಣವು ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸುವಲ್ಲಿ ನಿರ್ಣಾಯಕ ಕ್ಷಣವಾಗಿದೆ ಎಂದು ಭಾರತ  ಹೇಳಿದೆ.  ಭಾರತವು ಆರಂಭದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ಗೆ ಆಹ್ವಾನವನ್ನು ನೀಡಿತ್ತು. ಆದರೆ ಸ್ಟೇಟ್ ಆಫ್ ಯೂನಿಯನ್ ಭಾಷಣ, ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸುವ ಹೋರಾಟ ಹಾಗೂ ಇಸ್ರೇಲ್‌ ಹಮಾಸ್‌ ನಡುವಿನ ಸಂಘರ್ಷದ ಕಾರಣದಿಂದಾಗಿ ಬಿಡೆನ್‌ ಅವರು ಬರಲು ಸಾಧ್ಯವಿಲ್ಲ ಎಂದು ವಾಷಿಂಗ್ಟನ್‌ ತಿಳಿಸಿತ್ತು.

Latest Videos
Follow Us:
Download App:
  • android
  • ios