‘ನೋಟು ಹಿಂಪಡೆವ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದೇಶದಲ್ಲಿ ಒಟ್ಟು 3.62 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಈವರೆಗೆ ಶೇ.75ರಷ್ಟು ಅಂದರೆ 2.41 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಬಂದಿವೆ. ಈ ಪೈಕಿ ಶೇ.85ರಷ್ಟು ಠೇವಣಿ ರೂಪದಲ್ಲಿ ಹಾಗೂ ಶೇ.15ರಷ್ಟು ಬದಲಾವಣೆ ರೂಪದಲ್ಲಿ ಬಂದಿವೆ. 

ಮುಂಬೈ(ಜೂ26): ದೇಶಾದ್ಯಂತ 2000 ರು. ಮುಖಬೆಲೆಯ ನೋಟುಗಳನ್ನು ಬಳಕೆಯಿಂದ ಹಿಂಪಡೆವ ನಿರ್ಧಾರದ ಬಳಿಕ ಈವರೆಗೆ ಶೇ.75ರಷ್ಟು ಬ್ಯಾಂಕ್‌ ನೋಟುಗಳು ಮರಳಿ ಬ್ಯಾಂಕುಗಳಿಗೆ ಬಂದಿದೆ ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ್‌ ದಾಸ್‌ ತಿಳಿಸಿದ್ದಾರೆ.

‘ನೋಟು ಹಿಂಪಡೆವ ನಿರ್ಧಾರ ತೆಗೆದುಕೊಳ್ಳುವ ಸಮಯದಲ್ಲಿ ದೇಶದಲ್ಲಿ ಒಟ್ಟು 3.62 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಚಲಾವಣೆಯಲ್ಲಿದ್ದವು. ಈವರೆಗೆ ಶೇ.75ರಷ್ಟು ಅಂದರೆ 2.41 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಬಂದಿವೆ. ಈ ಪೈಕಿ ಶೇ.85ರಷ್ಟು ಠೇವಣಿ ರೂಪದಲ್ಲಿ ಹಾಗೂ ಶೇ.15ರಷ್ಟು ಬದಲಾವಣೆ ರೂಪದಲ್ಲಿ ಬಂದಿವೆ ಎಂದು ದಾಸ್‌ ತಿಳಿಸಿದ್ದಾರೆ.

ಮನೆ ಬಾಗಿ​ಲಿಗೇ ಬಂದು 2000 ರು. ನೋಟು ಸ್ವೀಕರಿಸಲಿದೆ ಅಮೆ​ಜಾನ್‌

ಈ ಹಿಂದೆ ಜೂ.8ರ ವೇಳೆಗೆ ಶೇ.50ರಷ್ಟುಅಂದರೆ 1.8 ಲಕ್ಷ ಕೋಟಿ ಮೌಲ್ಯದ 2000 ರು. ಮುಖಬೆಲೆಯ ನೋಟುಗಳು ಬ್ಯಾಂಕಿಗೆ ಮರಳಿದ್ದವು. ಜನರು ನೋಟು ವಾಪಸು ಮಾಡಲು ಸೆ.30 ಕೊನೆಯ ದಿನವಾಗಿದೆ.