ಪೋಂಡಾ[ಮಾ.06]: ಪ್ರವಾಸಕ್ಕೆಂದು ತೆರಳಿದ ಬೆಂಗಳೂರು ಯುವಕನೊಬ್ಬ ಗೋವಾದ ದೂದ್‌ ಸಾಗರ್‌ ಜಲಪಾತದಲ್ಲಿ ಮೃತ ಪಟ್ಟಿದ್ದಾನೆ. ಧನುಷ್‌ ಗೌಡ (20) ಎಂಬಾತನೇ ಮೃತ ದುರ್ದೈವಿ.

ಮೂರು ಜನ ಸ್ನೇಹಿತರೊಂದಿಗೆ ದೂದ್‌ ಸಾಗರ್‌ಗೆ ಪ್ರವಾಸಕ್ಕೆಂದು ತೆರಳಿದ್ದ ಧನುಷ್‌, ಸೋಮವಾರ ಸಂಜೆ ವೇಳೆ ಈಜಾಡುತ್ತಿರುವಾಗ ಕಾಣೆಯಾಗಿದ್ದಾರೆ.

ಬುಧವಾರ ಆತನ ಮೃತ ದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಗೋವಾ ಮೆಡಿಕಲ್‌ ಕಾಲೇಜ್‌ನಲ್ಲಿ ಇರಿಸಲಾಗಿದೆ.