Asianet Suvarna News Asianet Suvarna News

ಜಿ20 ಶೃಂಗಸಭೆ 2023: ಪ್ರಮುಖ ಸದಸ್ಯರು, ಸವಾಲು ಹಾಗೂ ಜಾಗತಿಕ ವಿಚಾರ

ವಿವಿಧ ದೇಶಗಳು ಸದಸ್ಯರಾಗಿರುವ ಜಿ-20 ಶೃಂಗಸಭೆಗೆ ಭಾರತ ಆತಿಥ್ಯ ವಹಿಸಿದ್ದು, ವಿಶ್ವದ ಚಿತ್ತ ಸದ್ಯಕ್ಕೆ ಭಾರತದ ಮೇಲಿದೆ. ಈ ಸಭೆಯಲ್ಲಿ ಚರ್ಚಿತವಾಗುವ ವಿಷಯಗಳು ಯಾವುವು?

20-Summit-2020-in-India-Know-Member-Nations-Challenges-Global-Issues-to-Be-Discussed
Author
First Published Sep 8, 2023, 12:45 PM IST

- ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

ಭಾರತ ಈ ವಾರಾಂತ್ಯದಲ್ಲಿ ನವದೆಹಲಿಯಲ್ಲಿ ಗ್ರೂಪ್ ಆಫ್ 20 (ಜಿ20) ಶೃಂಗಸಭೆಯನ್ನು ಆಯೋಜಿಸುತ್ತಿದೆ. ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಪ್ರಮುಖ ಚರ್ಚೆಯ ವಿಚಾರವಾಗಿರಲಿದೆ. ಅಮೆರಿಕ ಅಧ್ಯಕ್ಷ ಜೋ ಬಿಡನ್, ಯುನೈಟೆಡ್ ಕಿಂಗ್‌ಡಮ್ ಪ್ರಧಾನಿ ರಿಷಿ ಸುನಾಕ್ ಹಾಗೂ ಸೌದಿ ಅರೇಬಿಯಾದ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಸೇರಿ ಪ್ರಮುಖ ಜಾಗತಿಕ ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಶೃಂಗಸಭೆಯಲ್ಲಿ ಭಾಗವಹಿಸುತ್ತಿಲ್ಲ. ಕ್ಸಿ ತನ್ನ ಸ್ಥಾನದಲ್ಲಿ ಲಿ ಕಿಯಾಂಗ್ ಅವರನ್ನು ಕಳುಹಿಸಲಿದ್ದಾರೆ.

1. ಜಿ20 ಎಂದರೇನು? ಇದು ಜಿ7ರಿಂದ ಹೇಗೆ ವಿಭಿನ್ನ?
ಜಿ7 ಹಾಗೂ ಜಿ20 ಎರಡನ್ನೂ ಆರ್ಥಿಕ ಸಮಸ್ಯೆಗಳಿಗೆ ಪ್ರತಿಕ್ರಿಯೆಯ ರೂಪದಲ್ಲಿ ಸ್ಥಾಪಿಸಲಾಗಿದೆ. 1975ರಲ್ಲಿ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುಕೆ, ಹಾಗೂ ಅಮೆರಿಕ ನಾಯಕರು ಮೊದಲು ತೈಲ ಬಿಕ್ಕಟ್ಟಿನಿಂದ ಎದುರಾದ ಸಮಸ್ಯೆಗಳನ್ನು ನಿವಾರಿಸುವ ಕುರಿತು ಸಭೆ ಸೇರಿದಾಗ ಈ ವೇದಿಕೆಯನ್ನು ಸ್ಥಾಪಿಸಲಾಯಿತು. ಕೆನಡಾ 1976ರಲ್ಲಿ ಸೇರ್ಪಡೆಯಾಗಿ, ಗುಂಪು ಜಿ-7 ಎನಿಸಿತು. ರಷ್ಯಾ ಈ ಗುಂಪಿಗೆ 1998ರಲ್ಲಿ ಸೇರ್ಪಡೆಯಾಯಿತಾದರೂ, 2014ರಲ್ಲಿ ಕ್ರಿಮಿಯಾ ಆಕ್ರಮಣದ ಬಳಿಕ ಅದನ್ನು ಗುಂಪಿನಿಂದ ಹೊರ ಹಾಕಲಾಯಿತು. ಏಷ್ಯಾದ ಹಣಕಾಸು ಬಿಕ್ಕಟ್ಟಿನ (Financial Crisis) ಬಳಿಕ, 1999ರಲ್ಲಿ ಆರ್ಥಿಕ ಸ್ಥಿರತೆಯ ಕುರಿತು ಅರ್ಥ ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ನಾಯಕರು ಸಭೆ ಸೇರಲು ಜಿ-20ಯನ್ನು ಸ್ಥಾಪಿಸಿದರು. 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ, ಜಿ-20 ಜಾಗತಿಕ ನಾಯಕರ ವಾರ್ಷಿಕ ಸಭೆಯ ರೂಪ ಪಡೆದುಕೊಂಡಿತು. ಜಿ-7 ಆಗಲಿ, ಜಿ-20 ಆಗಲಿ ಶಾಶ್ವತ ಕಚೇರಿಯನ್ನು ಹೊಂದಿಲ್ಲ. ಅದರ ಬದಲಿಗೆ, ಪ್ರತಿಯೊಂದು ರಾಷ್ಟ್ರವೂ ಸರದಿಯ ಪ್ರಕಾರ ಒಂದು ವರ್ಷದ ಅವಧಿಗೆ ಅಧ್ಯಕ್ಷ ಪದವಿಯನ್ನು ಹೊಂದುತ್ತದೆ. ಜಿ-7 ಪ್ರಮುಖವಾಗಿ ಅಮೆರಿಕ ಮತ್ತದರ ಮಿತ್ರ ರಾಷ್ಟ್ರಗಳನ್ನು ಒಳಗೊಂಡಿದ್ದರೆ, ಜಿ-20 ದೊಡ್ಡ ಗಾತ್ರದ ಗುಂಪಾಗಿದ್ದು, ಮೂಲ ಬ್ರಿಕ್ಸ್ ರಾಷ್ಟ್ರಗಳನ್ನು (BRICKS Nations) ಒಳಗೊಂಡಿದೆ. ಒಟ್ಟಾರೆಯಾಗಿ, ಜಿ-7 ಹಾಗೂ ಜಿ-20 ರಾಷ್ಟ್ರಗಳು ಜಾಗತಿಕ ಆರ್ಥಿಕತೆಯ 85%, ಜಾಗತಿಕ ವ್ಯಾಪಾರದ 75% ಹಾಗೂ ಜಾಗತಿಕ ಜನಸಂಖ್ಯೆಯ ಮೂರನೇ ಎರಡರಷ್ಟು ಪಾಲು ಹೊಂದಿವೆ.

ಜಿ-20ಯ ಸದಸ್ಯ ರಾಷ್ಟ್ರಗಳು ಯಾವುವು?
ಜಿ20 ಗುಂಪಿನ ಸದಸ್ಯ ರಾಷ್ಟ್ರಗಳು: ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೊ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಅಮೆರಿಕ ಸಂಯುಕ್ತ ಸಂಸ್ಥಾನ, ಹಾಗೂ ಐರೋಪ್ಯ ಒಕ್ಕೂಟ.

G20 Summit: ವಿಶ್ವ ನಾಯಕರ ಅತಿಥಿ ಸತ್ಕಾರಕ್ಕೆ ಭರ್ಜರಿ ಸಿದ್ಧತೆ, ಭೋಜನಕ್ಕೆ ಚಿನ್ನ-ಬೆಳ್ಳಿ ಲೇಪಿತ ಪಾತ್ರೆ

3. ಇವುಗಳನ್ನು ಹೊರತುಪಡಿಸಿ, ಬೇರೆ ಯಾರಾದರೂ ಸಭೆಯಲ್ಲಿ ಭಾಗವಹಿಸುತ್ತಾರಾ?
ಗುಂಪಿನ ಮೂಲ ಸದಸ್ಯರನ್ನು ಹೊರತುಪಡಿಸಿ, ವಿವಿಧ ಸಭೆಗಳಲ್ಲಿ ಭಾಗವಹಿಸಲು ಹೆಚ್ಚುವರಿ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಸ್ಪೇನ್‌ನಂತಹ ರಾಷ್ಟ್ರಗಳು ನಿರಂತರವಾಗಿ ಸಭೆಯಲ್ಲಿ ಭಾಗವಹಿಸುತ್ತವೆ. ಅದರೊಡನೆ, ವಿವಿಧ ರಾಷ್ಟ್ರಗಳ ಪ್ರಾದೇಶಿಕ ಗುಂಪುಗಳಾದ ಅಸೋಸಿಯೇಷನ್ ಆಫ್ ಸೌತ್ಈಸ್ಟ್ ಏಷ್ಯನ್ ನೇಶನ್ಸ್ ಹಾಗೂ ಆಫ್ರಿಕನ್ ಒಕ್ಕೂಟಗಳು ಸಭೆಯಲ್ಲಿ ಭಾಗವಹಿಸುತ್ತವೆ. ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಂತಹ ಅಂತಾರಾಷ್ಟ್ರೀಯ ಸಂಸ್ಥೆಗಳು ಶೃಂಗಸಭೆಯಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತವೆ. ಅದರೊಡನೆ, ಶೃಂಗಸಭೆಯ ಆಯೋಜಕ ರಾಷ್ಟ್ರ ಅದರ ಪ್ರಾದೇಶಿಕ ಮತ್ತು ಕಾರ್ಯತಂತ್ರದ ಆಸಕ್ತಿಗಳ ಅನುಗುಣವಾಗಿ ಇತರ ಅತಿಥಿ ರಾಷ್ಟ್ರಗಳನ್ನು ನಿರ್ಧರಿಸುತ್ತದೆ. ಈ ವರ್ಷದ ಅತಿಥಿಗಳಲ್ಲಿ ಬಾಂಗ್ಲಾದೇಶ, ಈಜಿಪ್ಟ್, ಮಾರಿಷಸ್, ನೈಜೀರಿಯಾ, ಒಮಾನ್, ಸಿಂಗಾಪುರ, ಹಾಗೂ ಯುನೈಟೆಡ್ ಅರಬ್ ಎಮಿರೇಟ್ಸ್ ರಾಷ್ಟ್ರಗಳು ಸೇರಿವೆ.

4. ಜಿ-20 ಶೃಂಗಸಭೆಯ ಅಜೆಂಡಾ ಏನಿದೆ?
ಜಿ-20 ಸಭೆಗಳಲ್ಲಿ ಆರ್ಥಿಕ ವಿಚಾರಗಳು, ಹವಾಮಾನ ಬದಲಾವಣೆ, ಶಿಕ್ಷಣದಂತಹ ವಿಚಾರಗಳು ಸಾಮಾನ್ಯವಾಗಿ ಅಜೆಂಡಾದಲ್ಲಿರುತ್ತವೆ. ಅದರೊಡನೆ, ಚರ್ಚೆಯ ವಿಚಾರಗಳು ಆ ವರ್ಷದ ಪ್ರಮುಖ ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೂ ಒಳಗಾಗಿದ್ದು, ಕೋವಿಡ್-19 ಸಾಂಕ್ರಾಮಿಕದ ಪ್ರಭಾವ, ಹಾಗೂ ಉಕ್ರೇನ್ ಯುದ್ಧದ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆಗಳಿವೆ. ಆಯೋಜಕ ರಾಷ್ಟ್ರ ಶೃಂಗಸಭೆಯ ಅಜೆಂಡಾ ವಿಚಾರದಲ್ಲಿ ನಿರ್ಣಯ ಕೈಗೊಳ್ಳಬಹುದಾಗಿದ್ದು, ಹವಾಮಾನ ಬದಲಾವಣೆ (Climage Change) ಮತ್ತು ಆಹಾರ ಭದ್ರತೆಯ (Food Security) ವಿಚಾರದಲ್ಲಿ ಭಾರತ 'ಮಾನವ ಕೇಂದ್ರಿತ' ಚರ್ಚೆ ನಡೆಸಲು ಉದ್ದೇಶಿಸಿದೆ.

5. ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಜಿ-20 ಶೃಂಗಸಭೆಯ ಮೇಲೆ ಯಾವ ಪ್ರಭಾವ ಹೊಂದಿದೆ?
ಇತ್ತೀಚಿನ ಸಮಾವೇಶಗಳಲ್ಲಿ, ಉಕ್ರೇನ್ ಮೇಲೆ ರಷ್ಯಾ ನಡೆಸಿರುವ ಆಕ್ರಮಣ ಪ್ರಮುಖ ಚರ್ಚೆಯ ವಿಚಾರವಾಗಿದೆ. ಈ ಯುದ್ಧದ ಕಾರಣದಿಂದ ಜಿ-7 ರಾಷ್ಟ್ರಗಳು ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳನ್ನು ಒಳಗೊಂಡ ಗ್ಲೋಬಲ್ ಸೌತ್ ನಡುವೆ ರಷ್ಯಾದ ಆಕ್ರಮಣದ ಕುರಿತು ಇರುವ ಭಿನ್ನಾಭಿಪ್ರಾಯಗಳ ಕಾರಣದಿಂದ ಒಮ್ಮತದ ತೀರ್ಮಾನಕ್ಕೆ ಬರುವುದು ಕಷ್ಟ. ಅದರೊಡನೆ, ವ್ಯಾಪಾರದಿಂದ ಹಣಕಾಸಿನ ತನಕ, ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸಚಿವರ ಮಟ್ಟದ ಸಭೆಗಳಲ್ಲಿ ಒಮ್ಮತದ ಅಭಿಪ್ರಾಯದಿಂದ ಜಂಟಿ ಹೇಳಿಕೆಗಳು ಹೊರಬಂದಿಲ್ಲ. ಅದರೊಡನೆ, ಅಂತಾರಾಷ್ಟ್ರೀಯ ಬಂಧನ ವಾರಂಟ್ ಎದುರಿಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಜಿ-20 ಶೃಂಗಸಭೆ ಮತ್ತು ಇತರ ಅಂತರಾಷ್ಟ್ರೀಯ ಸಮ್ಮೇಳನಗಳಿಂದ ದೂರ ಉಳಿದಿದ್ದಾರೆ.

ಯಶಸ್ಸಿನತ್ತ ಜಿ20 ಶೃಂಗಸಭೆ: ಒಲಿಂಪಿಕ್ಸ್‌ ಕ್ರೀಡಾಕೂಟ ಆಯೋಜನೆಗೂ ಸಿದ್ಧವಾಗ್ತಿದೆ ಭಾರತ!

6. ಈ ಶೃಂಗಸಭೆಯ ಅಂತ್ಯದಲ್ಲಿ ಜಂಟಿ ಹೇಳಿಕೆ ಸಾಧ್ಯವಿಲ್ಲವೇ?
ಈ ಕುರಿತು ಈಗಲೇ ಏನೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಕಳೆದ ವರ್ಷ ಇಂಡೋನೇಷ್ಯಾದಲ್ಲಿ ನಡೆದ ಜಿ-20 ಶೃಂಗಸಭೆಯಲ್ಲಿ ಸದಸ್ಯ ರಾಷ್ಟ್ರಗಳು ಉಕ್ರೇನ್‌ನಲ್ಲಿ ರಷ್ಯಾದ ಯುದ್ಧವನ್ನು ಖಂಡಿಸುವ ಒಂದು ಜಂಟಿ ಹೇಳಿಕೆಯನ್ನು ನೀಡಲು ಯಶಸ್ವಿಯಾದವು. ಇದಕ್ಕೆ ಸೂಕ್ತ ಪದಗಳನ್ನು ಆಯ್ಕೆ ಮಾಡಲು ಚೀನಾ ಬೆಂಬಲಿಸಿದ್ದೇ ಕಾರಣವಾಗಿತ್ತು. ಈ ವರ್ಷ ಚೀನಾ ಮತ್ತು ಭಾರತಗಳ ನಡುವಿನ ಉದ್ವಿಗ್ನತೆಗಳ ಕಾರಣದಿಂದ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅನುಪಸ್ಥಿತಿಯ ಕಾರಣದಿಂದ ಇದು ಸಾಧ್ಯವೇ ಎಂಬ ಅನುಮಾನಗಳಿವೆ. ಒಂದು ವೇಳೆ ನಾಯಕರುಗಳು ಒಂದು ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದಿದ್ದರೆ, ಜಿ-20ಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೃಂಗಸಭೆ ಯಾವುದೇ ಜಂಟಿ ಹೇಳಿಕೆಯಿಲ್ಲದೆ ಕೊನೆಗೊಳ್ಳುವಂತಾಗುತ್ತದೆ. ಅಂತಹ ಸಂದರ್ಭದಲ್ಲಿ, ಆಯೋಜಕ ದೇಶ ಸದಸ್ಯ ರಾಷ್ಟ್ರಗಳು ಯಾವ ವಿಚಾರದಲ್ಲಿ ಸಹಮತ ಹೊಂದಿವೆ ಮತ್ತು ಯಾವ ವಿಚಾರದಲ್ಲಿ ಭಿನ್ನಾಭಿಪ್ರಾಯ ಹೊಂದಿವೆ ಎಂಬ ಆಧಾರದಲ್ಲಿ ಒಂದು ಸಾರಾಂಶದ ಹೇಳಿಕೆ ಬಿಡುಗಡೆಗೊಳಿಸಲಿದೆ.

7. ಚೀನಾ ಮತ್ತು ಭಾರತಗಳ ಸಂಬಂಧ ಅಷ್ಟೊಂದು ಹದಗೆಟ್ಟಿದೆಯೇ?
ಖಂಡಿತವಾಗಿಯೂ. ಭಾರತ ಮತ್ತು ಚೀನಾಗಳು 2020ರಿಂದಲೂ ತಮ್ಮ ಹಿಮಾಲಯದ ಗಡಿಯಾದ್ಯಂತ ಉದ್ವಿಗ್ನತೆಗಳನ್ನು ಹೊಂದಿವೆ. ಈ ಕಾರಣದಿಂದಾಗಿ ಹಲವು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂಸಾತ್ಮಕ ಚಕಮಕಿಗಳು ನಡೆದಿವೆ. ಆಗಸ್ಟ್ ತಿಂಗಳಲ್ಲಿ ಚೀನಾ ಒಂದು ಅಧಿಕೃತ ನಕ್ಷೆಯನ್ನು ಬಿಡುಗಡೆಗೊಳಿಸಿತು. ಅದರಲ್ಲಿ ವಿವಾದಾತ್ಮಕ ಪ್ರದೇಶಗಳನ್ನು, ಭಾರತದ ನೆಲವನ್ನು ತನ್ನದೆಂಬಂತೆ ಚಿತ್ರಿಸಿತು. ಇದನ್ನು ಭಾರತದ ವಿದೇಶಾಂಗ ಸಚಿವರಾದ ಸುಬ್ರಹ್ಮಣ್ಯಂ ಜೈಶಂಕರ್ ಅವರು ಕಟು ಶಬ್ದಗಳಿಂದ ಖಂಡಿಸಿದರು. ಆರ್ಥಿಕ ಮತ್ತು ವ್ಯಾಪಾರ ವಲಯದಲ್ಲೂ ಉದ್ವಿಗ್ನತೆ ತಲೆದೋರಿದ್ದು, ಭಾರತ ಚೀನಾದ ಹಲವಾರು ಸ್ಮಾರ್ಟ್ ಫೋನ್ ಆ್ಯಪ್‌ಗಳನ್ನು ನಿಷೇಧಿಸಿದ್ದು, ಚೀನಾದೊಡನೆ ರಾಜಕೀಯ ಉದ್ವಿಗ್ನತೆಯ ನಡುವೆ, ತನ್ನ ಪೂರೈಕೆ ಸರಪಳಿಯನ್ನು ಉತ್ತಮಪಡಿಸಲು ಅಮೆರಿಕಾದ ಕಂಪನಿಗಳೊಡನೆ ಹೂಡಿಕೆಗಾಗಿ, ಅವಶ್ಯಕ ವಸ್ತುಗಳ ಪೂರೈಕೆಗಾಗಿ ಮಾತುಕತೆ ನಡೆಸುತ್ತಿದೆ. ಅದರೊಡನೆ, ಭಾರತ ಮತ್ತು ಚೀನಾ ಎರಡು ರಾಷ್ಟ್ರಗಳೂ ಗ್ಲೋಬಲ್ ಸೌತ್ ಮಾರುಕಟ್ಟೆಯಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಯನ್ನು ಪ್ರತಿನಿಧಿಸಲು ಪರಸ್ಪರ ಸ್ಪರ್ಧಿಸುತ್ತಿವೆ.

ಭಾರತದ ಜಿ20 ಅಧ್ಯಕ್ಷ ಸ್ಥಾನ ಆರಂಭ, ಸರ್ವ ಸದ್ಯಸ್ಯರಿಗೆ ಟ್ಯಾಗ್‌ ಮಾಡಿ ಮೋದಿ ಟ್ವೀಟ್‌!

8. ಶೃಂಗಸಭೆಯಲ್ಲಿ ಚರ್ಚಿತವಾಗಬಲ್ಲ ಇತರ ಪ್ರಮುಖ ಅಂಶಗಳೇನು?
ಬೆಳೆಯುತ್ತಿರುವ ಮಾರುಕಟ್ಟೆ ಸಾಲದ ಕುರಿತು ಒಂದು ಒಮ್ಮತಕ್ಕೆ ಬರುವುದು ಸಮಾವೇಶದ ಹಾದಿಯಲ್ಲಿನ ಒಂದು ಸವಾಲಾಗಿದ್ದು, ಅದು ಇದೇ ರೀತಿ ಮುಂದುವರಿಯುವ ಸಾಧ್ಯತೆಗಳಿವೆ. ಈ ವಿಚಾರದಲ್ಲಿ ಚೀನಾ ಮತ್ತು ಭಾರತವೂ ಭಿನ್ನಾಭಿಪ್ರಾಯ ಹೊಂದಿವೆ. ಅದರೊಡನೆ, ಜಿ-7 ರಾಷ್ಟ್ರಗಳು ಮತ್ತು ಇತರ ರಾಷ್ಟ್ರಗಳ ನಡುವೆ ವಿಶ್ವಸಂಸ್ಥೆಯ ಪ್ರಸ್ತಾಪಿತ ಗುರಿಯಾದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಆಹಾರ, ಶಿಕ್ಷಣ, ಸ್ವಚ್ಛ ಇಂಧನ ಹಾಗೂ ಹವಾಮಾನ ಬದಲಾವಣೆಯ ಕ್ಷೇತ್ರಗಳಲ್ಲಿ ಬೆಂಬಲವಾಗಿ ಬಿಲಿಯನ್‌ಗಟ್ಟಲೆ ಡಾಲರ್ ಹೂಡಿಕೆ ಮಾಡುವ ಕುರಿತು ಭಿನ್ನಾಭಿಪ್ರಾಯಗಳಿವೆ.
 

Follow Us:
Download App:
  • android
  • ios